7 Hot News
A Karnataka Times Affiliate Kannada News Portal

ನಮ್ಮ ನಿಮ್ಮೆಲ್ಲರ ನೆಚ್ಚಿನ ಬಿಗ್ ಬಾಸ್ ಮನೆಯ ಸಿಂಹಿನಿ ಸಂಗೀತಾ ಶೃಂಗೇರಿ ಅವರ ಮುದ್ದು ಮುದ್ದಾದ ಫೋಟೋಸ್ ಇಲ್ಲಿವೆ ನೋಡಿ!!

advertisement

ಸದ್ಯ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟಗಾರಿಕೆಯಿಂದಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವಂತಹ ಸಂಗೀತ ಶೃಂಗೇರಿ ಅವರು, ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣ(social media) ದಲ್ಲಿಯೂ ಸುದ್ದಿಗೊಳಲಾಗುತ್ತಿರುತ್ತಾರೆ. ಹೌದು ಗೆಳೆಯರೇ ಕಳೆದ ವಾರದಿಂದ ನಟಿ ಸಂಗೀತ ಶೃಂಗೇರಿ ಅವರ ನಡವಡಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದು, ಇದು ಸಂಗೀತ ಶೃಂಗೇರಿ ಅವರ ವಿರೋಧಿಗಳಿಗೆ ಬೆಂಕಿಗೆ ತುಪ್ಪ ಸುರಿಯುತ್ತಿರುವಂತಾಗುತ್ತಿದೆ.

advertisement

ಕಾರ್ತಿಕ್ ಅವರ ವಿಚಾರದಲ್ಲಿ ಮನಸ್ಸನ್ನು ಕೆಡಿಸಿಕೊಂಡಿರುವಂತಹ ಸಂಗೀತ ಅವರು ಕಳೆದ ಎಪಿಸೋಡ್ ನಲ್ಲಿ ಮನೆಯಿಂದ ಹೊರ ಹೋಗುವುದಾಗಿ ಬಿಗ್ ಬಾಸ್ ಬಳಿ ಕೇಳಿಕೊಂಡರು ಹಾಗೂ ಮನೆಗೆ ಅತಿಥಿಯಾಗಿ ಬಂದಿದ್ದಂತಹ ನರೇಂದ್ರ ಅಳಿಯಾಸ್ ಬ್ರಹ್ಮಾಂಡ ಗುರುಜಿ(Brahmanda Guruji) ಯವರು ಹೊರಹೋಗುವಂತಹ ಸಮಯದಲ್ಲಿ ತಾನು ಹೋಗುವುದಾಗಿ ಹಠ ಮಾಡಿದರು ಹೀಗೆ ಕಾರ್ಯಕ್ರಮ ದುದ್ದಕ್ಕೂ ಕಣ್ಣೀರು ಹಾಕುತ್ತಾ ತಮ್ಮದಲ್ಲದ ತಪ್ಪಿಗೆ ಬೇಸರ ಮಾಡಿಕೊಂಡಿರುವಂತಹ ಸಂಗೀತ ಅವರು ಕೊಂಚ ಡಿಸ್ಟರ್ಬ್ ಆಗಿರುವಂತೆ ಕಾಣುತ್ತಿದ್ದಾರೆ.

advertisement

ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಂಗೀತ ಶೃಂಗೇರಿ ಅವರಿಗೆ ವ್ಯಾಪಕ ಪ್ರೋತ್ಸಾಹ ಬೆಂಬಲ ದೊರಕುತ್ತಿದ್ದು ಅಭಿಮಾನಿಗಳು ಸರಿ ತಪ್ಪುಗಳನ್ನು ಚರ್ಚೆ ಮಾಡುತ್ತಾ ಸಂಗೀತ ಅವರ ಆಟಗಾರಿಕೆಯ ಕುರಿತು ಮಾತುಕತೆ ನಡೆಸುತ್ತಿರುತ್ತಾರೆ. ಇನ್ನೂ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸಂಗೀತ ಶೃಂಗೇರಿ ಅವರು ಬಿಗ್ ಬಾಸ್(Big Boss) ಮನೆಯಲ್ಲಿ ಇದ್ದರು ಅವರ ಸಾಮಾಜಿಕ ಜಾಲತಾಣದ ಅಕೌಂಟ್ ಗಳಲ್ಲಿ ಪೋಸ್ಟ್ಗಳನ್ನು ಮಾಡಲಾಗುತ್ತಿದೆ. ಅವರೇ ತಮ್ಮ instagram ಬಯೋದಲ್ಲಿ ತಿಳಿಸಿರುವ ಹಾಗೆ ಸಂಗೀತ ಅವರ ಅತ್ತಿಗೆಯಾದಂತಹ ಸುಚಿಯವರು ಸಂಗೀತ ಅವರ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.

advertisement

advertisement

advertisement

ಅವರ ಅಫೀಸಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ (Instagram account) ನಲ್ಲಿನ ಪೋಸ್ಟ್ಗಳು ಅಭಿಮಾನಿಗಳ ಮನಸ್ಸನ್ನು ಸೆಳೆಯುತ್ತಿದ್ದು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿರುತ್ತಾರೆ. ಫೆಬ್ರವರಿ ತಿಂಗಳಿನಲ್ಲಿ ಸಂಗೀತ ಶೃಂಗೇರಿ ಅವರು ತಮ್ಮ ಸ್ನೇಹಿತರೊಂದಿಗೆ ಚಿಕ್ಕಮಗಳೂರಿನ ಕೊಪ್ಪ ಜಿಲ್ಲೆಯ ಮೇಗೂರಿಗೆ(Megur) ಪ್ರವಾಸಕ್ಕೆ ತೆರಳಿದ್ದರು.

advertisement

advertisement

ಆ ಸಮಯದಲ್ಲಿ ಪ್ರಕೃತಿದತ್ತವಾದ ಸೌಂದರ್ಯದ ಮಧ್ಯೆ ಕುಳಿತು ಸಂಗೀತ ಶೃಂಗೇರಿ ಅವರು ಸಾಲು ಸಾಲು ಫೋಟೋಗಳನ್ನು ತಮ್ಮ ಸ್ನೇಹಿತೆ ಅಪೂರ್ವ ಅವರಿಂದ ತೆಗೆಸಿಕೊಂಡಿದ್ದಾರೆ. ಆ ಎಲ್ಲಾ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಮರದ ಕೊಂಬೆಗಳಿಂದ ಉದುರಿ ಬಿದ್ದಿರುವಂತಹ ಎಲೆಯ ಇಮೋಜಿಯನ್ನು ಕ್ಯಾಪ್ಟನ್ ರೀತಿ ಬರೆದಿರುವುದು ಅತ್ಯಾಕರ್ಷಕವಾಗಿದೆ.

advertisement

Leave A Reply

Your email address will not be published.