7 Hot News
A Karnataka Times Affiliate Kannada News Portal

ನನ್ನ ಬೆಡ್ ಶಿಟ್ ನನ್ನ ಹತ್ರ ಜೋಪಾನವಾಗಿ ಇದೆ, ನಿನ್ನದು ಜೋಪಾನ ಮಾಡಿಕೋ ಎಂದು ಪ್ರತಾಪ್ ಗೆ ವಾರ್ನಿಂಗ್ ಕೊಟ್ಟ ರಕ್ಷಕ್ ಬುಲೆಟ್! ಹೇಗಿದೆ ನೋಡಿ ರಕ್ಷಕ್ ವಾರ್ನಿಂಗ್!!

advertisement

ಕನ್ನಡದ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಪ್ರತಿನಿತ್ಯ ಜಗಳ ಕಲಹ ಮನಸ್ತಾಪಗಳೆ ತುಂಬಿದೆ. ಪ್ರತಿ ವೀಕೆಂಡ್ ನಲ್ಲಿ ಬರುವಂತಹ ಕಿಚ್ಚ ಸುದೀಪ್ (Kiccha Sudeep) ಇತರೆ ಸೀಸನ್ ಗಳಂತೆ ಸ್ಪರ್ಧಿಗಳ ಜೊತೆಗೆ ಹಾಸ್ಯ ಮಾಡುತ್ತ ನಗುವುದನ್ನು ಬಿಟ್ಟು ಕೇವಲ ಕ್ಲಾಸ್ ತೆಗೆದುಕೊಂಡು ಕಿವಿ ಮಾತನ್ನು ಹೇಳುವುದರಲ್ಲೇ ಎಪಿಸೋಡ್ ಗಳನ್ನು ಮುಗಿಸುತ್ತಿದ್ದಾರೆ. ಇದೀಗ ಮೂರನೇ ವಾರ ಕಿಚ್ಚ ಸುದೀಪ್ (Kiccha Sudeep) ವಾರದ ಪಂಚಾಯಿತಿ ನಡೆಸುತ್ತಿದ್ದಂತಹ ಸಮಯದಲ್ಲಿ ಪ್ರತಾಪ್ ಅವರು ಎದ್ದು ನಿಂತು ವಿನಯ್ ಮಾಡುತ್ತಿರುವಂತಹ ಕೆಲಸದ ಕುರಿತು ವರದಿ ನೀಡಿದ್ದಾರೆ.

advertisement

ಅವರು ಹೇಳಿದಂತಹ ಮಾತಿಗೆ ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕೆಲವರು ಸೂಪರ್ ಪ್ರತಾಪ್(Super Prathap) ಎಂದು ಪ್ರತಾಪ್ ಅವರ ಈ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರೆ, ವಿನಯ್(Vinay) ಅಭಿಮಾನಿಗಳು ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ನಟ ವಿನಯವರಿಗೆ ಬಹಳ ಆತ್ಮೀಯವಾಗಿದ್ದ ರಕ್ಷಕ ಬುಲೆಟ್(Rakshak Bullet) ಪ್ರತಾಪ್ ಅವರ ಮಾತುಗಳಿಗೆ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿದ್ದು ಈ ಫೋಟೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಬಾರಿ ವೈರಲ್ ಆಗುತ್ತಿದೆ.

advertisement

advertisement

ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಮನೆಗೆ ಬಂದಾಗ ಸ್ಪರ್ಧಿಗಳಿಗೆ ಯಾವ ಯಾವ ಪುಸ್ತಕ ಬರೆದರೆ ಸೂಕ್ತ ಎಂಬ ಚಟುವಟಿಕೆಯಿಂದ ನೀಡಿದರು. ಆ ವೇಳೆ ಡ್ರೋನ್ ಪ್ರತಾಪ್ಗೆ ‘ಬೇರೆಯವರನ್ನು ತುಳಿದು ಬೆಳೆಯುವುದು ಹೇಗೆ?’ ಎಂಬ ಹೆಸರಿನ ಪುಸ್ತಕ ಸಿಕ್ಕಿತ್ತು. ಅದನ್ನು ವಿನಯ್ ಅವರಿಗೆ ನೀಡಿ ಅದರ ಸೂಕ್ತವಾದ ಕಾರಣ ನೀಡುತ್ತಿದ್ದಂತಹ ಸಮಯದಲ್ಲಿ “ಯಾರೆಲ್ಲ ವಿನಯವರ ಜೊತೆಯಲ್ಲಿ ಇದ್ದರೋ, ಅವರೆಲ್ಲ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್ ಶೀಟ್ ವಿನಯ್ಯವರ ಬೆಡ್ಗೆ ಸೇರುತ್ತದೆ, ಜೊತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್ ಹೇಳಲಿಲ್ಲ” ಎಂಬ ವಿವರಣೆ ನೀಡಿದರು.

advertisement

ಹೀಗೆ ಪ್ರತಾಪ್ ಹೇಳಿದಂತ ಮಾತುಗಳಿಗೆ ಮನೆಯ ಇತರ ಸ್ಪರ್ಧಿಗಳಿಂದ ಹಾಗೂ ಬಿಗ್ ಬಾಸ್ ವೀಕ್ಷಕರಿಂದ ಅದ್ಭುತ ಹೆಚ್ಚಿಗೆ ಕೂಡ ವ್ಯಕ್ತವಾಯಿತು. ಅಲ್ಲಿದೆ ಈ ಒಂದು ಸಂಚಿಕೆಯ ಪ್ರೋಮೋ ಒಂದನ್ನು ಬಿಗ್ ಬಾಸ್ ತಂಡವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ, ಇದನ್ನು ಕಂಡಂತಹ ಪ್ರೇಕ್ಷಕರು ಸೂಪರ್ ಪ್ರತಾಪ್(Super Prathap) ಕರೆಕ್ಟಾಗ್ ಹೇಳಿದ್ದೀರಾ ಇಂದು ಮೆಚ್ಚುಗೆ ವ್ಯಕ್ತಪಡಿಸಿದರೆ ವಿನಯವರ ಅಭಿಮಾನಿಗಳು ಮತ್ತು ಬಿಗ್ ಬಾಸ್ ಮನೆಯಲ್ಲಿ ವಿನಯ್ ಜೊತೆ ಬಹಳ ಆತ್ಮೀಯವಾಗಿದಂತಹ ರಕ್ಷಕ ಬುಲೆಟ್(Rakshak Bullet) ಅವರು “ ನನ್ನ ಬೆಡ್ ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ ನಿಮ್ದು ಜೋಪಾನ ಮಾಡಿಕೊಳ್ಳಿ” ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಹಾಕುವ ಮೂಲಕ ಪ್ರತಾಪ್ಗೆ ಟಕ್ಕರ್ ಕೊಟ್ಟಿದ್ದಾರೆ.

advertisement

Leave A Reply

Your email address will not be published.