7 Hot News
A Karnataka Times Affiliate Kannada News Portal

ಕಾಟೇರಾ ಚಿತ್ರದ ಶೂಟಿಂಗ್ ಬಿಡುವಿನ ಸಮಯದಲ್ಲಿ ಚಿತ್ರತಂಡದೊಂದಿಗೆ ನಟಿ ಶೃತಿ ಅವರ ಸುಂದರವಾದ ಕ್ಷಣಗಳು ಹೇಗಿತ್ತು ನೋಡಿ!!

advertisement

80-90 ರ ದಶಕದಲ್ಲಿ ಕನ್ನಡ ಸಿನಿ ಪ್ರೇಕ್ಷಕರಿಗೆ ತಮ್ಮ ಭಾವ ಪರವಶಕ ಅಭಿನಯದ ಮೂಲಕ ರಂಜಿಸಿ ಕನ್ನಡಿಗರ ಮನೆಮಗಳಾಗಿ ಹೋಗಿದ್ದಂತಹ ಶ್ರುತಿ(Shruthi) ಅವರು ಸದ್ಯ ಸಾಕಷ್ಟು ಸ್ಟಾರ್ ನಟರಿರುವ ಸಿನಿಮಾಗಳಲ್ಲಿ ತಾಯಿಯಾಗಿ ಸಹೋದರಿಯಾಗಿ ಕಾಣಿಸಿಕೊಳ್ಳುವ ಮೂಲಕ ಪೋಷಕ ಪಾತ್ರಗಳಲ್ಲಿಯೂ ಸೈ ಎನ್ನುವಂತಹ ನಟನೆ ಮಾಡಿ ನೋಡುಗರ ಮನಸ್ಸನ್ನು ಗೆಲ್ಲುತ್ತಿದ್ದಾರೆ.

advertisement

ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅಭಿನಯಿಸುವಂತಹ ನಟನ ಕೌಶಲ್ಯವನ್ನು ಹೊಂದಿರುವ ಶ್ರುತಿಯವರು ಡಿ ಬಾಸ್ ದರ್ಶನ್(Darshan) ಅವರ 56ನೇ ಸಿನಿಮಾ ಕಾಟೇರಾ ಚಿತ್ರದಲ್ಲಿ ಅವರ ಸಹೋದರಿಯಾಗಿ ಮಿಂಚಿದ್ದಾರೆ. ಹೌದು ಸ್ನೇಹಿತರೆ ಡಿಸೆಂಬರ್ 29.2023 ರಂದು ಕರ್ನಾಟಕದಾದ್ಯಂತ ತೆರೆಕಂಡಿರುವ ಕಾಟೇರ ಚಿತ್ರವು ಸದ್ಯ ಬ್ಲಾಕ್ ಬಾಸ್ಟರ್ ಹಿಟ್ ಪಟ್ಟಿಗೆ ಸೇರಿದ್ದು ಬಿಡುಗಡೆಗೊಂಡ ದಿನದಿಂದ ಇಂದಿನವರೆಗೂ ಎಲ್ಲಾ ಸಿನಿಮಾ ಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿದೆ.

advertisement

ನೈಜ ಕಥೆ ಆಧಾರಿತ ಈ ಸಿನಿಮಾವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡಿದರೆ ರಾಕ್ ಲೈನ್ ವೆಂಕಟೇಶ್(Rockline venkatesh) ಅವರ ನಿರ್ಮಾಣದಲ್ಲಿ ಚಿತ್ರ ಅದ್ಭುತವಾಗಿ ತಯಾರಾಗಿದೆ. ಇನ್ನು ವಿಶೇಷವಾಗಿ ಸಿನಿಮಾದಲ್ಲಿ ದರ್ಶನ್ ಅವರ ನಾಯಕಿಯಾಗಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಡೆಬ್ಯು ಮಾಡಿದ್ರೆ ಕನ್ನಡದ ಸಾಕಷ್ಟು ಹಿರಿಯ ನಟರಿಗೆ ಸಿನಿಮಾದಲ್ಲಿ ಪ್ರಮುಖ ಪಾತ್ರಗಳ ಮೂಲಕ ಆಕಾಶ ಕಲ್ಪಿಸಿಕೊಡಲಾಗಿದೆ.

advertisement

ಅದರಿಂದ ನಟಿ ಶ್ರುತಿ(Shruthi) ಅವರು ಕೂಡ ಚಿತ್ರದಲ್ಲಿ ಪಾಠದ ಅಕ್ಕನ ಪಾತ್ರದಲ್ಲಿ ಅಭಿನಯಿಸಿದ್ದು ಶೃತಿ ಅವರ ನಟನೆ ಎಲ್ಲರಿಗೂ ಇಷ್ಟವಾಗುವಂತಿದೆ. ಶೃತಿ ದರ್ಶನ್ ಜೊತೆಗೆ ನಟಿಸಿರುವಂತಹ ಪ್ರಪ್ರಥಮ ಸಿನಿಮಾ ಇದಾಗಿದ್ದು ಸಿನಿಮಾದಲ್ಲಿ ಅಕ್ಕ ತಮ್ಮನ ಬಾಂಧವ್ಯಕ್ಕೆ ನೋಡುಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಮಾಹಿತಿಯ ಪ್ರಕಾರ ರೈತರ ಜೀವನ ಶೈಲಿಯ ನೈಜ ಕಥೆಯಾದರದ ಮೇಲೆ ಸಿನಿಮಾವನ್ನು ರೂಪಿಸಲಾಗಿದ್ದು.

advertisement

advertisement

ದರ್ಶನ್ ರೈತರಿಗೆ ನಾಯಕನಾಗಿ ಸಿನಿಮಾದಲ್ಲಿ ಮಿಂಚಿದರೆ ಶ್ರುತಿ ಅವರು ರೈತ ಮಹಿಳೆಯಾಗಿ ಅಚ್ಚುಕಟ್ಟಾಗಿ ತಮಗೆ ನೀಡಿರುವಂತಹ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಕುರಿತು ತಮ್ಮ instagram ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಶೃತಿಯವರು “ ಕಾಟೇರ ಅಪ್ಪಟ ಕನ್ನಡ ಚಿತ್ರ, ನಮ್ಮ ನೆಲದ ಚಿತ್ರ. ಹೆಮ್ಮೆಯ ಸಹೋದರ ದರ್ಶನ್ ತೂಗುದೀಪ ಶ್ರೀನಿವಾಸ್(Darshan thoogudeepa Srinivas), ಪ್ರೀತಿಯ ಸಹೋದರ ತರುಣ್ ಸುಧೀರ್, ನಿರ್ಮಾಪಕರಾದ ರಾಕ್ ಲೈನ್ ಅವರು.

advertisement

 

View this post on Instagram

 

A post shared by Shruthi (@shruthi__krishnaa)

advertisement

advertisement

ಮುದ್ದು ಹುಡುಗಿ ರಾಧನ ರಾಮ್(Radhana ram) ಚಿತ್ರಕ್ಕೆ ಪ್ರೀತಿಯ ಸ್ವಾಗತ ಹಾಗೂ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಆಲ್ ದ ಬೆಸ್ಟ್” ಎಂಬ ಸುಂದರವಾದ ಕ್ಯಾಪ್ಷನ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ತೆಗೆಯಲಾದ ಕೆಲ ಫೋಟೋಗಳನ್ನು ಶ್ರುತಿ ಪೋಸ್ಟ್ ಮಾಡಿದ್ದಾರೆ.

advertisement

Leave A Reply

Your email address will not be published.