7 Hot News
A Karnataka Times Affiliate Kannada News Portal

ವಿಶೇಷಚೇತನ ಮಗನೊಂದಿಗೆ ನಟ ಅವಿನಾಶ್ ಅವರ ಅಮೂಲ್ಯವಾದ ಕ್ಷಣಗಳು ನೋಡಿ!!

advertisement

ಹಲವು ವರ್ಷಗಳ ಕಾಲ ಪ್ರೀತಿಸಿ, ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೂ ತಮ್ಮ ಪ್ರೀತಿಯಲ್ಲಿ ಕಿಂಚಿತ್ತು ಬದಲಾವಣೆಯನ್ನು ಮಾಡಿಕೊಳ್ಳದೆ ಬಹಳ ಅನ್ಯೋನ್ಯವಾಗಿ ಬದುಕುತ್ತಿರುವಂತಹ ಅವಿನಾಶ್ ಹಾಗೂ ಮಾಳವಿಕಾ(Avinash & Malavika) ದಂಪತಿಗಳು ಇಂದು ಅದೆಷ್ಟೋ ಜನರಿಗೆ ಆದರ್ಶ.

advertisement

ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ ಹಲವು ದಶಕಗಳಿಂದ ಚಂದನವನದಲ್ಲಿ ಕೆಲಸ ಮಾಡುತ್ತಾ ಬಂದಿರುವಂತಹ ಈ ಜೋಡಿಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಾಗ ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಮೇಲುಕು ಆಕುತ್ತಾ ಕಣ್ಣೀರು ಹಾಕಿದರು. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅವಿನಾಶ್ ಮತ್ತು ಮಾಳವಿಕಾ(Avinash & Malavika) ದಂಪತಿಗಳ ಮಗು ಎಲ್ಲರಂತೆ ಸಾಮಾನ್ಯನಲ್ಲ.

advertisement

ಹೌದು ಗೆಳೆಯರೇ ಗಾಲವ್(Galav) ಹುಟ್ಟಿ 50 ದಿನಗಳ ವರೆಗೂ ಐಸಿಯು ನಲ್ಲಿ ಇರಿಸಿದ ಬಳಿಕ ಆತನ ದೇಹದಲ್ಲಿ ಇರುವಂತಹ ಜೆನೆ-ಟಿಕ್ ಸಮಸ್ಯೆಯೊಂದು ಬೆಳಕಿಗೆ ಬರುತ್ತದೆ. ಜಗತ್ತಿನಾದ್ಯಂತ ಇರುವಂತಹ 2000 ಮಕ್ಕಳಿಗೆ ಮಾತ್ರ ಈ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಡಾಕ್ಟರ್ ಮಾಳವಿಕಾ ಅವರಿಗೆ ತಿಳಿಸಿರುತ್ತಾರೆ. ಹೀಗಾಗಿ ಅವರ ಪುತ್ರ ಬುದ್ಧಿಮಾಂದ್ಯತೆ ಸಮಸ್ಯೆಯಿಂದ ಬಳಲುತ್ತಿದ್ದು ಅದು ವಾಸಿಯಾಗುವುದಿಲ್ಲ ಎಂಬ ಸತ್ಯವನ್ನು ಪೋಷಕರು ಅರಿತಿದ್ದಾರೆ.

advertisement

advertisement

ಮತ್ತೊಂದು ಮಗುವಾದರೆ ಗಾಲವ್ ಮೇಲಿನ ಪ್ರೀತಿ ಕುಂಠಿತ ಕಾಣಬಹುದೆಂಬ ಭಯಕ್ಕೆ ಮಾಳವಿಕಾ ಮತ್ತು ಅವಿನಾಶ್ ದಂಪತಿಗಳು ಎರಡನೇ ಮಗು ಮಾಡಿಕೊಳ್ಳುವಂತಹ ನಿರ್ಧಾರವನ್ನೇ ಮಾಡುವುದಿಲ್ಲ‌‌. ಇದಕ್ಕೆ ತಮ್ಮ ಸಂಪೂರ್ಣ ಪ್ರೀತಿಯನ್ನು ಮುದ್ದು ಮಗ ಮೇಲೆ ತೋರಿಸುತ್ತಾ ಬಿಡುವು ಸಿಕ್ಕಾಗಲೆಲ್ಲ ಆತನೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಅವರಿಗೆ ಇಷ್ಟವಿರುವಂತಹ ಕೆಲಸ ಹಾಗೂ ತಿಂಡಿ ಗಳನ್ನು ಮಾಡುತ್ತಾ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

advertisement

 

View this post on Instagram

 

A post shared by South Kannada (@southkannada)

advertisement

advertisement

ಕಳೆದ ಕೆಲವು ತಿಂಗಳ ಹಿಂದೆ ಅವಿನಾಶ್ (Avinash) ಅವರು ತಮ್ಮ instagram ಖಾತೆಯಲ್ಲಿ ಮಗನೊಟ್ಟಿಗೆ ಮಲಗಿ ಹಾಯಾದ ಸಮಯವನ್ನು ಕಳೆಯುತ್ತಿರುವಂತಹ ಕೆಲ ಚಿತ್ರಣಗಳನ್ನು ಕ್ಯಾಪ್ಚರ್(Picture capture) ಮಾಡಿ ಅದನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದರು. ಸದ್ಯ ಈ ಫೋಟೋಗಳು ನೆಟ್ಟಿಗರ ಮನಸ್ಸನ್ನು ಸೆಳೆದಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಂದೆ ಮಗನ ಅದ್ಭುತ ಬಾಂಧವ್ಯಕ್ಕೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.