7 Hot News
A Karnataka Times Affiliate Kannada News Portal

ತಾಯಿಗಾಗಿ ಸರ್ವಸ್ವವನ್ನೇ ಮುಡಿಪಾಗಿಟ್ಟ ಕಲಿಯುಗದ ಶ್ರವಣಕುಮಾರ ವಿನೋದ್ ರಾಜ್! ಲೀಲಾವತಿ ಅಮ್ಮನವರ ಕೊನೆಯ ಕ್ಷಣದ ಫೋಟೋಸ್ ಇಲ್ಲಿವೆ ನೋಡಿ!!

advertisement

ನಿನ್ನೆ ನಾಲ್ಕು ಗಂಟೆಯ ಸಮಯಕ್ಕೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಇರುವಂತಹ ವಿನೋದ್ ರಾಜ್(Vinod Raj) ಅವರ ತೋಟದಲ್ಲಿ ಲೀಲಾವತಿ ಅಮ್ಮನವರ ಅಂ.ತ್ಯ.ಕ್ರಿ.ಯೆ ನೆರವೇರಿಸಲಾಗಿದೆ. ಕೊನೆಯ ಬಾರಿ ಲೀಲಾವತಿ ಅಮ್ಮನವರನ್ನು ಕಣ್ತುಂಬಿಕೊಳ್ಳಲು ಕನ್ನಡದ ಸಾಕಷ್ಟು ನಟ ನಟಿಯರು ರಾಜಕೀಯ ವ್ಯಕ್ತಿಗಳು ಹಾಗೂ ಲೀಲಾವತಿ ಅಮ್ಮನವರ ಕುಟುಂಬ ಸದಸ್ಯರು ಬಂದು ಅಂತಿಮ ನಮನ ಸಲ್ಲಿಸಿದರು.

advertisement

ಲೀಲಾವತಿ(Leelavathi) ಯವರು ಇನ್ನಿಲ್ಲ ಎಂದೊಡನೆ ಅವರ ಅದ್ಭುತ ಅಭಿನಯ ಮುಗ್ಧ ನಗು ತಮಗೆ ಕೇಡು ಬಯಸಿದವರಿಗು ಒಳ್ಳೆಯದನ್ನೇ ಮಾಡುವಂತಹ ದಯಗುಣ ಕಣ್ಮುಂದೆ ಬಂದು ಬಿಡುತ್ತದೆ. ಹೀಗೆ ಸಾಕಷ್ಟು ಸಂಕಷ್ಟಗಳ ಸೆರೆಮಾಲೆಯನ್ನು ಹೊತ್ತು ಆಗಿನ ಕಾಲದಲ್ಲಿ ಸಾಕಷ್ಟು ಅವಮಾನ ನೋವು ನರಕವನ್ನು ಅನುಭವಿಸಿ ತಮ್ಮ ಮಗನನ್ನು ಸಾಕಿದ್ದಕ್ಕೆ ವಿನೋದ್ ರಾಜ್ ಕೂಡ ಅವರ ಋಣ ತೀರಿಸುವ ಪ್ರಯತ್ನ ಮಾಡಿದರು.

advertisement

ಹೌದು ಗೆಳೆಯರೇ ಇತ್ತೀಚಿನ ಕಾಲದಲ್ಲಿ ತಂದೆ ತಾಯಿಗೆ ವಯಸ್ಸಾದರೆ ಹಿಂದೆ ಮುಂದೆ ನೋಡದೆ ವೃದ್ಧಾಶ್ರಮಗಳಿಗೆ(Old Age home) ಬಿಟ್ಟು ಬರುತ್ತಾರೆ. ಇನ್ನಷ್ಟು ಸೆಲೆಬ್ರಿಟಿಗಳು ಅವರಿಗಾಗಿ ಕೆಲಸಗಾರರನ್ನು ನೇಮಿಸಿ ಅವರನ್ನು ನೋಡಿಕೊಳ್ಳುವಂತೆ ತಿಳಿಸುತ್ತಾರೆ. ಆದರೆ ವಿನೋದ್ ರಾಜ್ ಅವರು ಲೀಲಾವತಿಯಮ್ಮನವರ ಕೊನೆಯ ಉಸಿರಿನವರೆಗು ಅವರ ಸೇವೆ ಮಾಡಿದರು. ಕಳೆದ ಕೆಲವು ತಿಂಗಳ ಹಿಂದಿಯೇ ಲೀಲವತಿಯವರು ವಾಯೋ ಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು.

advertisement

advertisement

ಎದ್ದು ಕೂರಲು ಆಗದಂತಹ ಪರಿಸ್ಥಿತಿಯಲ್ಲಿದ್ದ ಲೀಲಾವತಿ ಅಮ್ಮನವರಿಗೆ ಬೇಕಿದ್ದಂತ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟು, ಚಿಕ್ಕ ಮಗುವಿನಂತೆ ವಿನೋದ್ ರಾಜ್ ಈವರಿಗೂ ಜೋಪಾನ ಮಾಡಿದರು. ಅದಕ್ಕೆ ಲೀಲಾವತಿ ಅವರು ತಮ್ಮ ಮಗನನ್ನು ಒಬ್ಬಂಟಿಯನ್ನಾಗಿಸಿ ಬಾರದ ಲೋಕಕ್ಕೆ ತೆರಳಿದ್ದರಿಂದ ತಾಯಿಯ ಅಗಲಿಕೆಯಿಂದ ವಿನೋದ್ ರಾಜ್ ಕಂಗಲಾಗಿದ್ದಾರೆ. ನನ್ನನ್ನು ದೇವರು ಒಂಟಿಯಾಗಿ ಮಾಡಿಬಿಟ್ಟ ಎಂದು ಕಣ್ಣೀರು ಸುರಿಸಿದ್ದು ಪ್ರತಿಯೊಬ್ಬರ ಮನಕಲಕುವಂತಿತ್ತು.

advertisement

ಹೌದು ಸ್ನೇಹಿತರೆ ತಾಯಿ ಮಗನೆಂದರೆ ಹೇಗಿರಬೇಕು ಎಂಬ ಮಾದರಿಯನ್ನು ಜನರಿಗೆ ಹಾಕಿ ಕೊಟ್ಟಂತಹ ವಿನೋದ್ ರಾಜ್(Vinod Raj) ಮತ್ತು ಲೀಲಾವತಿಯವರು ಚಿತ್ರ ಕೆಲಸಗಳಲ್ಲಿಯೂ ತಮ್ಮನ್ನು ತಾವು ಒಟ್ಟಿಗೆ ತೊಡಗಿಸಿಕೊಂಡರು, ಹೀಗೆ ಸಿನಿಮಾ ರಂಗದಲ್ಲಿ ಕೆಲ ಕಾಣದ ಕೈಗಳಿಂದ ತುಳಿಯಲ್ಪಟ್ಟಾಗ ಅದನ್ನು ತೊರೆದು ಕೃಷಿಯತ್ತ (Agriculture) ಮುಖ ಮಾಡಿ ವಯಸ್ಸಾದರೂ ಗದ್ದೆಗಿಳಿದು ನಾಟಿ ಮಾಡುತ್ತಾ ಅದರಿಂದ ಬಂದಂತಹ ಲಾಭವನ್ನು ಬಡವರ ನಿರ್ಗತಿಕರ ಸಹಾಯಕ್ಕೆಂದು ಬಳಸಿದರು.

advertisement

advertisement

ಹೀಗೆ ಪ್ರತಿ ಕೆಲಸದಲ್ಲಿಯೂ ಒಬ್ಬರಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತ ಬಹಳ ಅನ್ಯೂನ್ಯವಾಗಿದಂತಹ ಅಮ್ಮ ಮಗನನ್ನು ಭಗವಂತ ಬೇರ್ಪಡಿಸಿ ಬಿಟ್ಟಿದ್ದಾರೆ. ಲೀಲಾವತಿಯವರನ್ನು ಕಳಿಸಿ ಕೊಡುವಾಗ ವಿನೋದ್ ರಾಜ್(Vinod Raj) ಅವರು ಕಣ್ಣೀರು ಹಾಕತ್ತಲೇ ಅವರ ಪಕ್ಕದಲ್ಲಿ ಕುಳಿತು ತಾಯಿಯ ತಲೆಗೆ ತಲೆಕೊಟ್ಟು ದೇವರ ಹಾಡನ್ನು ಹಾಡುತ ನನ್ನನ್ನು ಒಬ್ಬಂಟಿಯನ್ನಾಗಿಸಿ ಹೋದೆಯಾ? ಎಂದು ತಮ್ಮ ನೋವನ್ನು ಕಣ್ಣೀರಿನ ಮೂಲಕ ಹೊರ ಹಾಕಿದರು.

advertisement

Leave A Reply

Your email address will not be published.