7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಯ ಅಪ್ಸರೆ ನಮ್ರತಾ ಗೌಡ ಅವರು ತಮ್ಮ ಅಮ್ಮನ ಜೊತೆ ಕಳೆದ ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ಪುಟ್ಟಗೌರಿ ಮದುವೆ ಹಾಗೂ ನಾಗಿಣಿ 2 ನಂತಹ ಧಾರವಾಹಿಗಳ ಮೂಲಕ ಕನ್ನಡ ಕಿರುತರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ನಟಿ ನಮೃತ ಗೌಡ(Namratha Gowda) ಅವರು ಸದ್ಯಾ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ (Big Boss season 10) ಮೊದಲ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟು ತಮ್ಮ ಅದ್ಬುತ ಆಟ ಪ್ರದರ್ಶನದಿಂದ ಐವತ್ತಕ್ಕೂ ಹೆಚ್ಚು ದಿನಗಳ ಕಾಲ ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ.

advertisement

ಎಂತಹ ಟಾಸ್ಕ್ ಗಳು ಬಂದರೂ ಕೂಡ ನಾನು 100% ಆಗಿ ಆಡಲೇ ಬೇಕು ಎಂಬ ಛಲದಿಂದ ಪ್ರತಿ ಟಾಸ್ಕ್ನಲ್ಲಿಯೂ ಅದ್ಭುತ ಪರ್ಫಾರ್ಮೆನ್ಸ್ ನೀಡುವಂತಹ ನಮೃತ ಗೌಡ ಅವರು ಎಷ್ಟೇ ಪ್ರಯತ್ನ ಮಾಡಿದರು ಕೂಡ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಕ್ಯಾಪ್ಟನ್ ಆಗಲು ಸಾಧ್ಯವಾಗುತ್ತಿಲ್ಲ. ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ನಲ್ಲಿ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಿದ ನಮ್ರತಾ ಗೌಡ(Namratha Gowda) ಈ ವಾರದ ಎಲ್ಲಾ ಆಟದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗುವಂತಹ ನಿಟ್ಟಿನಲ್ಲಿ ಇರುತ್ತಾರೆ.

advertisement

ಇಂತಹ ಸಮಯದಲ್ಲಿ ಬಿಗ್ ಬಾಸ್ ಎರಡು ತಂಡಗಳಿಂದ ಒಂದೊಂದು ಸ್ಪರ್ಧಿಗಳನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಡಲು ಹೆಸರನ್ನು ಸೂಚಿಸುವಂತೆ ಕೇಳಿದಾಗ ಸ್ನೇಹಿತ್ ವಿನಯ್ ಗೌಡ ಮತ್ತು ನಮೃತ ಗೌಡ ಅರ್ಹರಲ್ಲ ಎಂಬ ಹೇಳಿಕೆ ನೀಡಿ ಅವರಿಬ್ಬರನ್ನು ಹೊರಗೆ ಇಟ್ಟಿದ್ದು, ಎಲ್ಲರಿಗೂ ಶಾಕ್ ಕೊಟ್ಟಿದೆ. ಸ್ನೇಹಿತ್ರವರ ಸಹಾಯದಿಂದ ಮುಂದಿನ ವಾರದ ಕ್ಯಾಪ್ಟನ್ ಆಗುವ ಆಸೆಯಲ್ಲಿ ಇದ್ದಂತಹ ನಮೃತ ಗೌಡ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.

advertisement

advertisement

advertisement

ಈ ಕಾರಣದಿಂದಾಗಿ ನಟಿ ನಮ್ರತಾ ಗೌಡ ಸ್ನೇಹಿತ್ ಅವರ ನಿರ್ಧಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾ ಕಣ್ಣೀರು ಹಾಕಿದರು. ಇನ್ನು ಬಿಗ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಎಲ್ಲಾ ಸ್ಪರ್ಧೆಗಳನ್ನು ಮಾತನಾಡಿಕೊಂಡು ಎಲ್ಲಿ ಧ್ವನಿ ಏರಿಸಬೇಕು ಅಲ್ಲಿ ಧ್ವನಿ ಏರಿಸಿಕೊಂಡು ಎಲ್ಲಿ ನಗಿಸಬಹುದೋ ಅಲ್ಲಿ ನಗಿಸುತ್ತ ಪ್ರೇಕ್ಷಕರ ಮನಸ್ಸನ್ನು ದಿನೇ ದಿನೇ ಗೆಲ್ಲುತ್ತಿರುವಂತಹ ನಮ್ರತಾ ಗೌಡ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು ಅಲ್ಲಿ ಅವರ ಕುರಿತಾದಂತಹ ಸಾಕಷ್ಟು ವಿಚಾರಗಳನ್ನು ಪೋಸ್ಟ್ ಮಾಡಿ ವೈರಲ್ ಮಾಡಲಾಗುತ್ತದೆ.

advertisement

advertisement

ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ನಮ್ರತಾ ಗೌಡ(Namratha Gowda) ಅವರ ತಾಯಿ ಜೊತೆಗೆ ತೆಗೆದುಕೊಂಡಿರುವಂತಹ ಫೋಟೋ ಭಾರಿ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ನಮ್ರತಾ ಗೌಡ ಅವರ ತಾಯಿ ಮಂಜುಳಾ ಶ್ರೀನಿವಾಸ್(Manjula Srinivas) ಅವರ ಸೀರೆ ಯುಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರೆ ನಟಿ ನಮ್ರತಾ ಗೌಡ ಅವರು ನೇರಳೆ ಬಣ್ಣದ ಗೌನ್ ಧರಿಸಿ ತಮ್ಮ ತಾಯಿಯ ಹೆಗಲ ಮೇಲೆ ಕೈ ಇಟ್ಟು ವಿಭಿನ್ನ ಭಂಗಿಯಲ್ಲಿ ಪೋಸ್ ನೀಡಿದ್ದಾರೆ.

advertisement

Leave A Reply

Your email address will not be published.