7 Hot News
A Karnataka Times Affiliate Kannada News Portal

Navya Nair Son Birthday : ಗಜ ಚಿತ್ರದ ನಟಿ ನವ್ಯಾ ನಾಯರ್ ಅವರ ಮಗನ ಬರ್ತಡೇ ಸೆಲೆಬ್ರೇಶನ್ ಹೇಗಿತ್ತು ನೋಡಿ! ಸುಂದರ ಕ್ಷಣಗಳು!!

advertisement

Navya Nair Son Birthday : ಅದೊಂದು ಕಾಲದಲ್ಲಿ ಕನ್ನಡ ಮಲಯಾಳಂ ತೆಲುಗು ಹಾಗೂ ತಮಿಳು ಸಿನಿಮಾಗಳ ಮೂಲಕ ತಮ್ಮ ಅಮೋಘ ನಟನೆ ಹಾಗು ಮುಗ್ಧ ಸೌಂದರ್ಯದ ಮೂಲಕ ಅದೆಷ್ಟೋ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ನಟಿ ನವ್ಯ ನಯರ್(Navya Nair) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ಎಂತಹ ಪಾತ್ರ ನೀಡಿದರು ನೀಲಾಜಾಲವಾಗಿ ಅಭಿನಯಿಸುತ್ತ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅಲ್ಪಾವಧಿಯಲ್ಲಿಯೇ.

advertisement

ಉತ್ತುಂಗದ ಶೇಖರವನ್ನು ಏರಿದಂತಹ ನವ್ಯ ನಯರ್(Navya Nair) ಅವರ ಹೆಸರು ಕೇಳುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಜೊತೆಗಿನ ಗಜ ಸಿನಿಮಾ(Gaja cinema) ನೆನಪಿಗೆ ಬಂದುಬಿಡುತ್ತಾರೆ. ತುಂಟ ಹುಡುಗಿಯಾಗಿ ಕನ್ನಡಿಗರ ಮನಸ್ಸನ್ನು ಗೆದ್ದಂತಹ ನವ್ಯ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹರಸಿ ಬಂದವು. ಮಲಯಾಳಂನ ನಂದನಂ ಚಿತ್ರದ ಮೂಲಕ ತಮ್ಮ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡ ನವ್ಯ ನಯರ್ ಅವರು.

advertisement

21 ಜನವರಿ 2010 ರಂದು ಪ್ರಖ್ಯಾತ ಉದ್ಯಮಿ ಸಂತೋಷ್ ಮೆನನ್ (Santhosh menon) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಸಿನಿಮಾ ರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿದಂತಹ ನವ್ಯರವರು ಬೆಂಗಳೂರಿನಿಂದ ಮುಂಬೈಗೆ ಹಾರಿ ತಮ್ಮ ಗಂಡನ ಉದ್ಯಮದತ್ತ ತಮ್ಮ ಆಸಕ್ತಿಯನ್ನು ತೋರುತ್ತಾರೆ. ಮದುವೆಯಾದ ಒಂದು ವರ್ಷದಲ್ಲಿಯೇ ಗಂಡು ಮಗು ಒಂದಕ್ಕೆ ಜನ್ಮ ನೀಡಿದಂತಹ ನವ್ಯ ಅವರು ಮತ್ತೆ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ.

advertisement

advertisement

Navya Nair Son Birthday
Navya Nair Son Birthday

advertisement

ಹಲವು ವರ್ಷಗಳ ನಂತರ ವಿಕೆ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಒರುತಿ (Oruthi) ಎಂಬ ಸಿನಿಮಾದ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದ ನವ್ಯನಯರವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ ಅನಂತರ ಟಿವಿ ಪ್ರೋಗ್ರಾಮ್ಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುವಂತಹ ನವ್ಯ ನಾಯರವರು ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ.

advertisement

Navya Nair Son Birthday
Navya Nair Son Birthday

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ, ನವೆಂಬರ್ 28 ನೇ ತಾರೀಕು 2023 ರಂದು ನವ್ಯ ನಾಯರ್ರವರು ತಮ್ಮ ಮುದ್ದಿನ ಮಗ ಸಾಯಿಕೃಷ್ಣ(Saikrishna) ಅವರ 13 ವರ್ಷದ ಹುಟ್ಟುಹಬ್ಬವನ್ನು ಬಹಳ ಗ್ರಾಂಡ್ ಆಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ಆಚರಿಸಿದ್ದಾರೆ ಅದರ ಕೆಲವು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿರುವ ನವ್ಯ ಅವರು ತಮ್ಮ ಮಗನಿಗೆ ಕ್ಯೂಟ್ ಆದ ಕ್ಯಾಪ್ಷನ್ ಬರೆದು ಶುಭಾಶಯವನ್ನು ಕೋರಿದ್ದಾರೆ. ಫೋಟೋದಲ್ಲಿ ನವ್ಯ ನಾಯರ್ರವರು ಬಿಳಿ ಬಣ್ಣದ ಗೌನ್ ನಲ್ಲಿ ಗಂಗೊಳಿಸಿದರೆ ಅಪ್ಪ ಮಗ ಇಬ್ಬರು ಒಂದೇ ರೀತಿಯ ಹಸಿರು ಬಿಳಿ ಬಣ್ಣದ ಅವಳಿ ಬಟ್ಟೆಯನ್ನು ಧರಿಸಿ ಮಿಂಚಿದ್ದಾರೆ.

advertisement

Leave A Reply

Your email address will not be published.