PhotoGrid Site 1678078477141

ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಯಾಕೆ ಹೋಗಬಾರದು ಗೊತ್ತಾ? ಮುಜುಗರ ಎನಿಸಿದರೂ ಅದಕ್ಕೆ ಬಲವಾದ ಕಾರಣ ಕೂಡ ಇದೆ ನೋಡಿ!!

ಸುದ್ದಿ

ಭಾರತೀಯರಲ್ಲಿ ಈ ಪದ್ಧತಿ ಬಹಳ ಪುರಾತನ ಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಹೆಣ್ಣು ಮಕ್ಕಳು ಮುಟ್ಟಾದರೆ ಅವರು ಅಶುದ್ಧ ಎಂದು ಪರಿಗಣಿಸಲ್ಪಡುತ್ತಾರೆ ಹಾಗಾಗಿ ಮುಟ್ಟಿನ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವ ಹಾಗಿಲ್ಲ ಅದೇ ರೀತಿ ಯಾವುದೇ ಶುಭ ಸಮಾರಂಭಗಳಲ್ಲಿಯೂ ಪಾಲ್ಕೊಳ್ಳುವ ಹಾಗಿಲ್ಲ. ಇದಕ್ಕೆಲ್ಲ ನಿಜವಾದ ಕಾರಣವೇನು? ಮುಟ್ಟಿನ ಸಂದರ್ಭದಲ್ಲಿ ಮಹಿಳೆ ನಿಜವಾಗಿಯೂ ಅಶುದ್ಧಳೇ ಎನ್ನುವ ಪ್ರಶ್ನೆಗೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಾದ ಉತ್ತರವನ್ನು ನೀಡುತ್ತಾರೆ.

ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಬಾರದು ಎನ್ನುವುದು ಕೇವಲ ಆಚರಣೆ ಅಥವಾ ಸಂಪ್ರದಾಯ ಮಾತ್ರವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಕೂಡ ಅಡಗಿದೆ. ಹಾಗಾದ್ರೆ ಮುಟ್ಟಾದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ದೇವಾಲಯಕ್ಕೆ ಯಾಕೆ ಹೋಗಬಾರದು ಎನ್ನುವುದರ ವೈಜ್ಞಾನಿಕ ಕಾರಣವನ್ನು ನೋಡೋಣ ಬನ್ನಿ.

ಮೊದಲನೇದಾಗಿ ಯಾವುದೇ ದೇವಾಲಯಗಳಿಗೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಹೋಗಬಾರದು ಎಂದು ಹೇಳುತ್ತಾರೆ ಇದಕ್ಕೆ ಮುಖ್ಯವಾದ ಕಾರಣ ದೇವಾಲಯಗಳಲ್ಲಿ ಅಥವಾ ಮಂದಿರಗಳಲ್ಲಿ ಎನರ್ಜಿ ಅತ್ಯಧಿಕವಾಗಿರುತ್ತದೆ. ಎನರ್ಜಿಯ ಕಂಪನ ಹೆಚ್ಚಾಗಿದ್ದು ಎನರ್ಜಿ ಮೇಲಕ್ಕೆ ಚಲಿಸುವ ಸ್ವಭಾವವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ನಾವು ದೇವಸ್ಥಾನಕ್ಕೆ ಹೋದಾಗ ಸಂಪೂರ್ಣ ಶಾಂತತೆ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುತ್ತೇವೆ.

ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಠ ಮಂದಿರಗಳಿಗೆ ಯಾಕೆ ಪ್ರವೇಶ ಮಾಡಬಾರದು ಅಥವಾ ಪೂಜೆ ಮಾಡಬಾರದು ಎಂದರೆ ಅದು ಶಕ್ತಿಯ ನೈಸರ್ಗಿಕ ಕೆಳಮುಖ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಮಹಿಳೆಯರಲ್ಲಿ ಹೊಟ್ಟೆ ನೋವು ಅಥವಾ ಮುಟ್ಟಿನ ಸಮಸ್ಯೆ ಉಂಟಾಗಬಹುದು. ಮಹಿಳೆಯರ ಮುಟ್ಟಿನ ಸಮಯದಲ್ಲಿ ಅಶುದ್ಧ ರಕ್ತದ ಕಾರಣಕ್ಕೆ ಮಂದಿರ ಪ್ರವೇಶಿಸಬಾರದು ಎಂದು ಹೇಳುತ್ತಾರೆ.

ಆದರೆ ಇದು ನಿಜವಾದ ಕಾರಣವಲ್ಲ. ಮಹಿಳೆಯರ ದೀರ್ಘಾಯುಷ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಸಮಯದಲ್ಲಿ ಮಂದಿರಕ್ಕೆ ಪ್ರವೇಶ ಮಾಡಬಾರದು ಎಂದು ಹೇಳಲಾಗುತ್ತದೆ.ಇನ್ನು ಮುಟ್ಟಾದಾಗ ಮಹಿಳೆಯರು ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸಂದರ್ಭಗಳಲ್ಲಿಯೂ ಪ್ರಯಾಣ ಮಾಡುವುದು ಅಥವಾ ಪೂಜೆ ಪುನಸ್ಕಾರಗಳಲ್ಲಿ ತೊಡಗಿದರೆ.

ಇನ್ನಷ್ಟು ಆಯಾಸಆಗುವುದು ಇವೆಲ್ಲವನ್ನೂ ತಪ್ಪಿಸುವುದಕ್ಕಾಗಿಯೂ ಕೂಡ ಈ ಪದ್ದತಿಯನ್ನು ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಮಡಿ ಮೈಲಿಗೆ ಎನಿಸಿದರೂ ನಿಜವಾಗಿಯೂ ವೈಜ್ಞಾನಿಕ ಕಾರಣಗಳು ಈ ಆಚರಣೆಯ ಹಿಂದೆ ಅಡಗಿದೆ. ಮಹಿಳೆಯರೇ ದೇವಾಲಯಗಳಿಗೆ ಮುಟ್ಟಾದ ಸಮಯದಲ್ಲಿ ಯಾಕೆ ಪ್ರವೇಶವಿಲ್ಲ ಎಂಬುದು ಅರ್ಥವಾಗಿರಬೇಕು ಅಲ್ಲವೇ?

Leave a Reply

Your email address will not be published. Required fields are marked *