ಸ್ನೇಹಿತರೆ, ಹೆಣ್ಣನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಯಾರಿಗೂ ಈ ವರೆಗೂ ಸಾಧ್ಯವಾಗಿಲ್ಲ. ಆಕೆ ತನ್ನ ಎದೆಯಾಳದಲ್ಲಿ ಅದೆಷ್ಟೋ ಗುಟ್ಟುಗಳನ್ನ ಬಚ್ಚಿಟ್ಟುಕೊಳ್ಳುತಾಳೆ. ಬೇರೆಯವರಿಗೆ ನೋವಾಗಬಾರದು ಎನ್ನುವ ಕಾರಣಕ್ಕೋ, ಮನೆಗೆ ತನ್ನಿಂದ ನಷ್ಟವಾರಬಾರದು ಎನ್ನುವ ಕಾರಣಕ್ಕೋ ಒಟ್ಟಿನಲ್ಲಿ ತನ್ನಲ್ಲಿರುವ ಸಾಕಷ್ಟು ನೋವುಗಳನ್ನ ಆಕೆ ಶೇರ್ ಮಾಡುವುದಿಲ್ಲ.
ಸಾಮಾನ್ಯವಾಗಿ ಪವಿತ್ರವಾದ ಗಂಡ ಹೆಂಡತಿ ಸಂಬಂಧದಲ್ಲಿ ಯಾವ ಮುಚ್ಚುಮರೆಯೂ ಇರಬಾರದು. ಇಬ್ಬರೂ ಒಬ್ಬರಿಒಗೊಬ್ಬರು ನಂಬಿಕೆ ಇಟ್ಟು ಮಾತನಾಡಿದಾಗ ಮಾತ್ರ ಸಂಸಾರ ಸುಖವಾಗಿ ಸಾಗುತ್ತದೆ. ಆದಾಗ್ಯೂ ಕೆಲವು ಮಹಿಳೆಯರು ಗಂಡನ ಬಳಿ ಈ ಕೆಲವು ವಿಷಯಗಳನ್ನು ಹೇಳಿಕೊಳ್ಳುವುದೇ ಇಲ್ಲ.
ಯಾವ ವಿಷಯಗಳು ಗೊತ್ತಾ? ಹೌದು ಸ್ನೇಹಿತರೆ, ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ತಾವು ಏನನ್ನೇ ಅನುಭವಿಸಿದರೂ ಕೂಡ ಅದನ್ನು ಎಲ್ಲರ ಮುಂದೆ ಹೇಳಿಕೊಳ್ಳದೇ ಮೇಲಿಂದ ನಗುತ್ತಾ ಜೀವನ ಸಾಗಿಸುವ ಹಲವು ಮಹಿಳೆಯರಿದ್ದಾರೆ. ಅಂತವರನ್ನು ನಿಜಕ್ಕೂ ಗ್ರೇಟ್ ಎನ್ನಬೇಕು. ಹೌದು, ಗೆಳೆಯರೇ ಮೊದಲನೆಯದಾಗಿ ಗಂಡಸರಿಗೆ ಹೋಲಿಸಿದರೆ ಮಹಿಳೆಯರಿಗೆ ತುಸು ಹಸಿವು ಜಾಸ್ತಿ.
ಆದರೆ ಇದನ್ನು ಯಾವುದೇ ಕಾರಣಕ್ಕು ಕೂಡ ಆಕೆ ಯಾರ ಮುಂದೆಯೂ ತೋರಿಸಿಕೊಳ್ಳುವುದಿಲ್ಲ. ಎಷ್ಟೋ ಬಾರಿ ಮನೆಯಲ್ಲಿ ಏನೂ ಇಲ್ಲದೇ ಇದ್ಡಾಗ ತನ್ನ ಊಟವಾಯಿತು ಎಂದು ಹೇಳಿ ಗಂಡನಿಗೆ ಇರುವ ಪದಾರ್ಥವನ್ನು ಬಡಿಸಿ ತಾನು ಹಾಗೆಯೇ ಮಲಗುತ್ತಾಳೆಯೇ ಹೊರತು ಹಸಿವಿನ ಬಗ್ಗೆ ಸುಳಿವನ್ನೂ ನೀಡುವುದಿಲ್ಲ. ಇನ್ನು ಎರಡನೆಯದಾಗಿ ಗಂಡಸರಿಗಿಂತ ಹೆಂಗಸರಿಗೆ ಧೈರ್ಯ ಜಾಸ್ತಿ ಎಂದು ಹೇಳಬಹುದು.
ದೈಹಿಕವಾಗಿ ಗಂಡಸರೇ ಹೆಚ್ಚು ಶಕ್ತಿ ಉಳ್ಳವರು ಆಗಿದ್ದರೂ ಕೂಡ ಸಾಕಷ್ಟು ಸಂದರ್ಭದಲ್ಲಿ ಪುಕ್ಕಲುತನವನ್ನು ತೋರಿಸುತ್ತಾರೆ. ಆದರೆ ಅದೇ ಸಮಯದಲ್ಲಿ ಹೆಣ್ಣು ಭಯ ಪಡದೇ ಮುನ್ನುಗ್ಗುತ್ತಾಳೆ. ಇನ್ನು ಗಂಡಸರಿಗಿಂತ ಹೆಂಗಸರಿಗೆ ದೈಹಿಕವಾಗಿ ಬಯಕೆ ಹೆಚ್ಚಾಗಿರುತ್ತದೆ. ಆದರೆ ಇದನ್ನೂ ಕೂಡ ಹೆಣ್ಣುಮಕ್ಕಳು ಬಾಯಿ ಬಿಟ್ಟು ಗಂಡನ ಬಳಿ ಹೇಳಿಕೊಳ್ಳುವುದಿಲ್ಲ. ಬದಲಾಗಿ ಗಂಡನೇ ಹತ್ತಿರ ಬರುವವರೆಗೂ ಕಾಯುತ್ತಾರೆ.
ಇನ್ನು ತಾಳ್ಮೆ ವಿಷಯಕ್ಕೆ ಬಂದರೆ ಅದೂ ಕೂಡ ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿಯೇ ಹೆಚ್ಚಾಗಿರುತ್ತದೆ. ಯಾವುದೇ ಸಂದರ್ಭವಾದರೂ ಸರಿ ಬಹಳ ತಾಳ್ಮೆಯಿಂದ ಬಂದಂತಹ ಪರಿಸ್ಥಿತಿಗಳನ್ನು ನಿಭಾಯಿಸುವ ಶಕ್ತಿ ಗಂಡಸರಿಂದ ಮಹಿಳೆಯರಲ್ಲಿಯೇ ಹೆಚ್ಚಾಗಿ ಇರುತ್ತದೆ. ಹಾಗೆಯೇ ತಾವು ಕೂಡ ಬಹಳ ಬೇಗ ಶ್ರೀಮಂತರಾಗಬೇಕು.
ಎಲ್ಲಾ ಐಷಾರಾಮಿ ಜೀವನ ತಮ್ಮದಾಗಬೇಕು ಎನ್ನುವ ಬಯಕೆ ಹೆಂಗಸರಲ್ಲಿ ಹೆಚ್ಛಾಗಿರುತ್ತದೆ. ಇದನ್ನೂ ಕೂಡ ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೇ. ಆಧ್ಯಾತ್ಮಿಕ ಚಿಂತನೆಯಲ್ಲಿ ಇರುವಂತಹ ಹೆಂಗಸರಿಗೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಬೇಕು ಎನ್ನುವ ಆಸೆಯೂ ಇರುತ್ತದೆ. ಇದನ್ನೂ ಗಂಡನ ಬಳಿಯೂ ಹೇಳಿಕೊಳ್ಳದೇ ಸುಮ್ಮನಾಗುತ್ತಾರೆ.
ಇನ್ನು ಪ್ರತಿಯೊಂದು ವಿಚಾರದಲ್ಲಿಯೂ ಸೂಕ್ಷ್ಮಗಳನ್ನು ಗ್ರಹಿಸುವಂತಹ ಶಕ್ತಿ ಗಂಡಸರಿಗಿಂತ ಮಹಿಳೆಯಲ್ಲಿಯೇ ಅತಿಯಾಗಿರುತ್ತದೆ. ಒಮ್ಮೆ ಹೇಳಿದರೆ ಅದನ್ನು ಸಾಮಾನ್ಯವಾಗಿ ಹೆಣ್ಣುಮಕ್ಕಳು ಮರೆಯುವುದಿಲ್ಲ. ಹಾಗಾದರೆ ನಿಮ್ಮಲ್ಲಿ ಹೀಗೆ ಹೇಳಿಕೊಳ್ಳದ ಯಾವ ವಿಷಯಗಳಿವೆ? ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.