ಚಳಿಗಾಲ ಶುರುವಾದರೆ ಸಾಕು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ದಿನನಿತ್ಯ ನಡೆದುಕೊಳ್ಳುವ ರೀತಿಯಲ್ಲಿಯೂ ಕೂಡ ಸಾಕಷ್ಟು ವ್ಯತ್ಯಾಸ ಮಾಡಿಕೊಳ್ಳುತ್ತೇವೆ ಉದಾಹರಣೆಗೆ ಮಲಗುವ ವಿಷಯವನ್ನು ತೆಗೆದುಕೊಳ್ಳಿ. ರಾತ್ರಿ ಮಲಗುವಾಗ ದಪ್ಪನೆಯ ಬೆಡ್ ಶೀಟ್ ಹೊದ್ದು ಮಲಗುತ್ತೇವೆ ಅದರ ಜೊತೆಗೆ ಸಾಕಷ್ಟು ಜನ ಮುಸುಕು ಹಾಕಿ ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ.
ಇದರಿಂದ ಉಂಟಾಗುವ ಸಮಸ್ಯೆಯನ್ನು ನೀವು ಖಂಡಿತ ಊಹಿಸಲು ಸಾಧ್ಯವಿಲ್ಲ. ಹಾಗಾದ್ರೆ ಮುಸುಕು ಹಾಕಿ ಮಲಗಿದರೆ ಏನಾಗುತ್ತೆ ಎಂಬುದನ್ನ ನೋಡೋಣ ಬನ್ನಿ. ಹೌದು. ಸಾಕಷ್ಟು ಜನ ಚಳಿಗಾಲ ಶುರುವಾಯಿತು ಅಂದ್ರೆ ಮುಸುಕು ಹಾಕಿ ಮಲಗುವ ಅಭ್ಯಾಸವನ್ನ ಮಾಡಿಕೊಳ್ಳುತ್ತಾರೆ ಖಂಡಿತವಾಗಿಯೂ ಇದು ಆರೋಗ್ಯಕರ ಅಭ್ಯಾಸ ಅಲ್ಲವೇ ಅಲ್ಲ.
ಕೆಲವರು ಮುಸುಕು ಹಾಕಿ ಮಲಗಿಯೇ ಗಾಢ ನಿದ್ರೆಗೆ ಜಾರುತ್ತಾರೆ ಮುಸುಕು ಹಾಕಿದಾಗ ಗಾಢ ನಿದ್ರೆಗೆ ಜಾರಿದರೆ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತೆ. ಈ ರೀತಿಯಾಗಿ ಜಾಸ್ತಿ ಹೊತ್ತು ನಿದ್ದೆ ಮಾಡಿದರೆ ದೇಹದ ಉಷ್ಣಾಂಶ ಜಾಸ್ತಿಯಾಗುವುದರ ಜೊತೆಗೆ ಚಯಾಪಚಯ ಕ್ರಿಯೆ ಕೂಡ ನಿಧಾನವಾಗುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಹಾಗಾಗಿ ಇದು ದೇಹದ ತೂಕವು ಜಾಸ್ತಿಯಾಗುತ್ತದೆ.
ಇನ್ನು ಮುಸುಕು ಹಾಕಿ ಮಲಗಿದರೆ ರಕ್ತ ಪರಿಚಲನೆ ಕಷ್ಟವಾಗುತ್ತದೆ. ದೇಹಕ್ಕೆ ಸರಿಯಾದ ರೀತಿಯಲ್ಲಿ ತಾಜಾ ಆಮ್ಲಜನಕ ಲಭ್ಯವಾಗುವುದಿಲ್ಲ ನಿಮ್ಮ ಉಸಿರೇ ನಿಮಗೆ ತಿರುಗಿ ಸಿಗುತ್ತದೆ ಇದರಿಂದ ಸ್ವಚ್ಛವಾದ ಗಾಳಿ ದೇಹದ ಒಳಗೆ ಹೋಗುವುದಿಲ್ಲ. ಇದರಿಂದ ತ್ವಚೆಯಲ್ಲಿ ದದ್ದು ಉಂಟಾಗುವುದು, ತ್ವಚೆ ಕಾಂತಿಯನ್ನು ಕಳೆದುಕೊಳ್ಳುವುದು ಇಂತಹ ಸಮಸ್ಯೆ ಕೂಡ ಉಂಟಾಗುತ್ತದೆ.
ಇನ್ನು ದೇಹಕ್ಕೆ ಸರಿಯಾದ ಆಮ್ಲಜನಕ ಸಿಗದೇ ಇರುವ ಕಾರಣ ಶ್ವಾಸಕೋಶದ ಸಮಸ್ಯೆಯನ್ನು ಕೂಡ ಅನುಭವಿಸಬೇಕಾಗುತ್ತದೆ ಈ ಎಲ್ಲದರ ಪರಿಣಾಮವನ್ನು ನೀವು ಒಂದು ದಿನದಲ್ಲಿ ಕಾಣಲು ಸಾಧ್ಯವಿಲ್ಲ ಆದರೆ ಯಾವಾಗಲೂ ಮುಸುಕು ಹಾಕಿ ಮಲಗುವ ಅಭ್ಯಾಸ ಮಾಡಿಕೊಂಡರೆ ಶ್ವಾಸಕೋಶದದ ಸಮಸ್ಯೆ ಕಾಡುತ್ತದೆ ಉಸಿರಾಟ ಮಾಡುವುದು ಕಷ್ಟವಾಗುತ್ತದೆ.
ಇದರಿಂದ ಅಸ್ತಮಾದಂತಹ ಸಮಸ್ಯೆ ಕೂಡ ನಿಮ್ಮನ್ನ ಆವರಿಸಬಹುದು. ಶ್ವಾಸಕೋಶದ ಶಕ್ತಿ ಕುಗ್ಗಿದಾಗ ಉಸಿರಾಟದ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗೂ ಕೂಡ ಕಾರಣವಾಗುತ್ತದೆ. ಹಾಗಾಗಿ ಸ್ನೇಹಿತರೆ ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆಯನ್ನು ಹೊದ್ದುಕೊಂಡು ಮಲಗುವುದು ಸರಿ ಆದರೆ ಮುಸುಕು ಹಾಕಿಕೊಂಡು ಮಲಗಬೇಡಿ ಇದರಿಂದ ನೀವು ಅನಾರೋಗ್ಯವನ್ನು ಆಹ್ವಾನ ಮಾಡಿದಂತೆಯೇ ಆಗುತ್ತೆ.
ಅದೇ ರೀತಿ ಮುಸುಕು ಹಾಕಿ ಮಲಗಿದರೆ ಬೆಳಗ್ಗೆ ಎಚ್ಚರವೂ ಆಗುವುದಿಲ್ಲ. ಇದರಿಂದ ನೀವು ಫ್ರೆಶ್ ಮಾರ್ನಿಂಗ್ ಮಿಸ್ ಮಾಡಿಕೊಳ್ಳುತ್ತೀರಿ. ದೇಹದದಲ್ಲಿ ಜಡತ್ವ ಮನೆ ಮಾಡುತ್ತದೆ. ಇನ್ನು ಚಳಿಗಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಜ್ವರ, ಶೀತ ನೆಗಡಿ ಉಂಟಾಗಬಹುದು. ಹತ್ತಿ ಬಟ್ಟೆಗಳನ್ನು ಆ ಸಂದರ್ಭದಲ್ಲಿ ಉಪಯೋಗಿಸಿದರೆ ಒಳ್ಳೆಯದು. ಇನ್ನು ಮನೆಯಲ್ಲಿ ಉಷ್ಣತೆಯ ಸಮತೋಲನ ಕಾಯ್ದುಕೊಳ್ಳಿ. ಆಗ ಚಳಿಯ ಅನುಭವ ಕಡಿಮೆಯಾಗುತ್ತದೆ. ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.