whatsapp delete message recovery ಭಾರತ ದೇಶದಲ್ಲಿ ಸುಮಾರು 550 ಮಿಲಿಯನ್ ಗೂ ಅಧಿಕ ಜನ ವಾಟ್ಸಪ್ ಮೆಸೆಂಜರ್ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ ವಾಟ್ಸಪ್ ಆರಂಭದಲ್ಲಿ ಕೇವಲ ಆಡಿಯೋ ಕರೆ ಹಾಗೂ ವಿಡಿಯೋ ಕರೆ ಮಾತ್ರ ಮಾಡುವ ಫೀಚರ್ ಹೊಂದಿತ್ತು. ಆದರೆ ದಿನ ಕಳೆದಂತೆ ಹೊಸ ಫೀಚರ್ ಗಳನ್ನು ಅಳವಡಿಸಿಕೊಂಡು ಬಂದಿದೆ. ಕೆಲವು ತಿಂಗಳ ಹಿಂದೆ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವಾಗ ಟೆಕ್ಸ್ಟ್ ಸ್ಟೇಟಸ್ ಹಾಕಬಹುದು ಎನ್ನುವ ಫೀಚರ್ ಬಿಡುಗಡೆ ಆಗಿತ್ತು.
ಆದರೆ ಆಡಿಯೋ ಹಾಕುವ ಹಾಗೆ ಇರಲಿಲ್ಲ. ಇದೀಗ ಅದನ್ನೂ ಅಪ್ಡೇಟ್ ಮಾಡಲಾಗಿದ್ದು ನೀವು 30 ಸೆಕೆಂಡ್ ಗಳ ಕಾಲ whatsapp ಆಡಿಯೋ ಸ್ಟೇಟಸ್ ಕೂಡ ಹಾಕಿಕೊಳ್ಳಬಹುದು. ಇನ್ನು ವಾಟ್ಸಪ್ ನ ಮತ್ತೊಂದು ಅತ್ಯುತ್ತಮವಾದಂತಹ ಫೀಚರ್ ಅಂದರೆ ಡಿಲೀಟ್ ಆಗಿರುವ ಮೆಸೇಜ್ ಅನ್ನು ಪುನಃ ಪಡೆದುಕೊಳ್ಳುವುದು.
whatsapp delete message recovery information
ಇತ್ತೀಚಿಗೆ ನೀವು ಯಾವುದಾದರು ಮೆಸೇಜ್ ಅನ್ನು ಕಳುಹಿಸಿದರೆ ಅದು ಬೇಡ ಎನಿಸಿದರೆ ಡಿಲೀಟ್ ಫಾರ್ ಎವರಿಒನ್ ಎನ್ನುವ ಆಪ್ಷನ್ ಬಳಸುವುದರ ಮೂಲಕ ಬೇರೆಯವರು ಆ ಮೆಸೇಜ್ ನೋಡದೆ ಇರುವಂತೆ ಡಿಲೀಟ್ ಮಾಡಬಹುದಿತ್ತು. ಅದೇ ರೀತಿ ಡಿಲೀಟ್ ಫಾರ್ ಮೀ ಎನ್ನುವ ಆಪ್ಷನ್ ಮೂಲಕವೂ ಮೆಸೇಜ್ ನಿಮ್ಮ ಮೊಬೈಲ್ ನಿಂದ ಡಿಲೀಟ್ ಮಾಡಬಹುದಿತ್ತು.

ತಪ್ಪಾಗಿ ಮೆಸೇಜ್ ಕಳುಹಿಸಿದರೆ ಅದರಿಂದ ಮುಜುಗರಕ್ಕೆ ಒಳಗಾಗಬಾರದು ಎನ್ನುವ ದೃಷ್ಟಿಯಿಂದ ವಾಟ್ಸಪ್ ನಲ್ಲಿ ಈ ಹೊಸ ಫೀಚರ್ ಡೆವಲಪ್ ಮಾಡಲಾಗಿದೆ. ಇನ್ನು ಹೆಚ್ಚು whatsapp ಮೆಸೇಜ್ ಕಳುಹಿಸುವವರಿಗೆ ಈ ಅನುಭವ ಆಗಿರುತ್ತೆ. ಡಿಲೀಟ್ ಫಾರ್ ಎವರಿವನ್ ಎಂದು ಒತ್ತುವ ಬದಲು ಡಿಲೀಟ್ ಫಾರ್ ಮಿ ಎನ್ನುವ ಆಪ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ ಅದನ್ನ ಅಂಡು ಮಾಡುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಅಂದರೆ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಐದು ಸೆಕೆಂಡ್ ಗಳ ಕಾಲ ಅಂಡು ಮಾಡುವ ಆಪ್ಷನ್ ಇರುತ್ತೆ ನೀವು ಕೂಡಲೇ ಅಂದು ಮಾಡಿ ನಂತರ ಆ ಮೆಸೇಜ್ ಅನ್ನು ಡಿಲೀಟ್ ಫಾರ್ ಎವರಿಒನ್ ಮಾಡಬಹುದು. ಇನ್ನು whatsapp ನಲ್ಲಿ ಡಿಲೀಟ್ ಆಗಿರುವಂತಹ ಮೆಸೇಜ್ ಕೂಡ ಓದಬಹುದು ಹೇಗೆ ಗೊತ್ತಾ? ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಬೇಕಾಗುತ್ತದೆ.
ಅಡಿಕೆ ಬೆಳೆಗಾರರಿಗೆ ಬಂಪರ್ ಲಾಟರಿ ಹೆಚ್ಚಿದ ಬೆಲೆ! ಚೇತರಿಕೆ ಕಂಡ ಅಡಿಕೆ ಬೆಲೆ, ಎಷ್ಟು ಏರಿಕೆಯಾಗಿದೆ ನೋಡಿ!!
ಗೆಟ್ ಡಿಲಿಟೆಡ್ ಮೆಸೆಜಸ್ ಎನ್ನುವ ಆಪ್ ನ್ನು ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ whatsapp ನಲ್ಲಿ ಡಿಲೀಟ್ ಆಗಿರುವ ಮೆಸೇಜ್ ಗಳನ್ನು ನಿಮಗೆ ನೋಡಲು ಸಾಧ್ಯವಾಗುತ್ತದೆ. ಅಂದ ಹಾಗೆ ಚಾಟ್ ಓಪನ್ ಆಗಿದ್ದಾಗ ನೀವು ಮೆಸೇಜ್ ಓದಲು ಸಾಧ್ಯವಿಲ್ಲ ಅದೇ ಮೊಬೈಲ್ ಲಾಕ್ ಆಗಿರುವಾಗ ಮಾತ್ರ ಡಿಲೀಟ್ ಆಗಿರುವ ಮೆಸೇಜ್ ಗಳನ್ನು ಓದಬಹುದು. whatsapp delete message recovery ಇನ್ನು 2023ರ ವೇಳೆಗೆ whatsapp ಇನ್ನೂ ಒಂದಿಷ್ಟು ಹೊಸ ಹೊಸ ಫೀಚರ್ ಹೊರ ತರಲಿದ್ದು ಗ್ರಾಹಕರಿಗೆ ಗೌಪ್ಯತೆಯ ದೃಷ್ಟಿಯಿಂದಲೂ ಈ ಫೀಚರ್ ಗಳು ಸಹಾಯಕವಾಗಲಿವೆ ಎಂದು ಮೆಟಾ ಕಂಪನಿ ತಿಳಿಸಿದೆ.