Darshan thoogudeepa : ಕನ್ನಡ ಸಿನಿಮಾ ರಂಗ ಎಂದು ಸಾಕಷ್ಟು ಬೆಳೆಯುತ್ತಿದೆ ಕಲಾವಿದರು (Actors) ತಮ್ಮ ಪ್ರತಿಭೆಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಮೇಲೆ ಬರುತ್ತಿದ್ದಾರೆ ಸಾಕಷ್ಟು ಯಶಸ್ಸನ್ನು ಕಾಣುತ್ತಿದ್ದಾರೆ ಕನ್ನಡ ತಾಯಿ ಭುವನೇಶ್ವರಿ ಬಹುತೇಕ ಎಲ್ಲಾ ಕಲಾವಿದರ ಕೈ ಹಿಡಿದಿದ್ದಾಳೆ. ಹಾಗಾಗಿ ಇಂದು ಚಿತ್ರರಂಗದಿಂದ ದೂರ ಉಳಿದವರು ಕೂಡ ಕನ್ನಡ ಚಿತ್ರರಂಗದ ಬಗ್ಗೆ ಉತ್ತಮ ಮಾತುಗಳನ್ನು ಆಡುತ್ತಾರೆ ಅಂತಹವರಲ್ಲಿ ನಟ ವಿನೋದ್ ರಾಜ್ (Vinod Raj) ಅವರು ಕೂಡ ಒಬ್ಬರು.
ಯಾವುದೇ ಹೊಸ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕೂಡ ವಿನೋದ್ ರಾಜ್ ಅವರನ್ನು ಸಂದರ್ಶನ ಮಾಡಿದರೆ ಅವರ ಬಾಯಲ್ಲಿ ಬರುವಂತಹ ಮಾತುಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿರುತ್ತದೆ. ಒಂದು ಕಾಲದಲ್ಲಿ ಕನ್ನಡದ ಡ್ಯಾನ್ಸಿಂಗ್ ರಾಜ (Dancing star) ಕನ್ನಡದ ಮೈಕಲ್ ಜಾಕ್ಸನ್ (Michael Jackson) ಇಂದೇ ಕರೆಸಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಇತ್ತೀಚಿಗೆ ನಟ ದರ್ಶನ್ (Darshan) ಅವರ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ತಿಳಿಸಿದ್ದಾರೆ ಇಷ್ಟಕ್ಕೂ ವಿನೋದ್ ರಾಜ್ ದರ್ಶನ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ?
ಸುಮಾರು 1999-2000ದ ಆಸುಪಾಸಿನಲ್ಲಿ ವಿನೋದ್ ರಾಜ್ ಹಾಗೂ ದರ್ಶನ್ ಅವರು ಮಹಾಭಾರತ ಸಿನಿಮಾದಲ್ಲಿ ಅಭಿನಯಿಸಿದ್ದು ಆ ಸಿನಿಮಾದಲ್ಲಿ ದರ್ಶನ್ ಅವರ ಅಭಿನಯ ನೋಡಿದ ನಟಿ ಲೀಲಾವತಿಯಮ್ಮ ಈ ವ್ಯಕ್ತಿ ದೊಡ್ಡ ಕಲಾವಿದನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಇನ್ನು ದರ್ಶನ್ ಅವರು ಅಷ್ಟೇ ನನ್ನ ಅಮ್ಮ ನನ್ನ ಕಾಣುತ್ತಿದ್ದ ಹಾಗೆ ಕೂಡಲೇ ಬಂದು ಕಾಲಿಗೆ ನಮಸ್ಕಾರ ಮಾಡಿ ತೂಗುದೀಪ ಶ್ರೀನಿವಾಸ ಅವರ ಮಗ ದರ್ಶನ್ ನಾನು ಎಂದು ಹೇಳಿಕೊಂಡರು ಆಗ ಅಮ್ಮ ಪ್ರೀತಿಯಿಂದ ಅವನನ್ನ ಹರಸಿದ್ದರು. ಅದೇ ರೀತಿ ದರ್ಶನ್ ಎಂದು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾನೆ ಎಂದು ವಿನೋದ್ ರಾಜ್ ಹೇಳುತ್ತಾರೆ.
ಇನ್ನು ಮುಂದುವರೆದು ಮಾತನಾಡಿದ ವಿನೋದ್ ರಾಜ್ ಅವರು ‘ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆ ಆಗ್ತಾ ಇದೆ. ಸಿನಿಮಾದ ಮೂಲಕ ದೊಡ್ಡ ಕ್ರಾಂತಿ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ನಿಜ ಜೀವನದಲ್ಲಿಯೂ ಕೂಡ ಅವರು ಇದೀಗ ಕ್ರಾಂತಿ ಮಾಡಬೇಕಾಗಿದೆ. ಇದೆಲ್ಲಾ ಯಾಕೆ ಬೇಕು ಎಲ್ಲಾ ಕಲಾವಿದರನ್ನು ಒಂದೇ ರೀತಿಯಾಗಿ ನೋಡಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾ ಬೆಳೆಯಬೇಕು ಹೊರತು ಕಲಾವಿದರಿಗೆ ಯಾವುದೇ ರೀತಿಯ ತೊಂದರೆ ಮಾಡಿದರೆ ಅದು ಯಾರಿಗೂ ಒಳ್ಳೆಯದಾಗುವುದಿಲ್ಲ.
ಇನ್ನು ದರ್ಶನ ಒಬ್ಬ ಒಳ್ಳೆಯ ಕಲಾವಿದ. ಅವರ ಕ್ರಾಂತಿ ಸಿನಿಮಾ ಇನ್ನೇನು ಬಿಡುಗಡೆಗೆ ಹತ್ತಿರವಾಗುತ್ತಿದೆ ಹಾಗಾಗಿ ಎಲ್ಲರೂ ಇರುವ ವೈಮನಸ್ಸು ಮನಸ್ತಾಪ ಎಲ್ಲವನ್ನು ಬಿಟ್ಟು ಸಿನಿಮಾವನ್ನು ಗೆಲ್ಲಿಸಿ. ದರ್ಶನ್ ಅವರಿಗೆ ಒಳ್ಳೆಯದಾಗಲಿ ಅವರು ಯಶಸ್ಸನ್ನ ಕಾಣಲಿ ಕ್ರಾಂತಿ ಸಿನಿಮಾ ಬಾಕ್ಸ್ ಆಫೀಸ್ ರೆಕಾರ್ಡ್ ಅನ್ನು ಮುರಿಯುವಂತೆ ಆಗಲಿ ಕ್ರಾಂತಿ ಸಾಕಷ್ಟು ಗಳಿಕೆ ಮಾಡಲಿ’ ಎಂದು ವಿನೋದ್ ರಾಜ್ ಅವರು ದರ್ಶನ್ ಅವರನ್ನು ಮನ ತುಂಬಿ ಹಾರೈಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಎಲ್ಲರೂ ಬೇಡಿಕೆಯು ದರ್ಶನ್ ಅವರ ಕ್ರಾಂತಿ ಸಿನಿಮಾ ಗೆಲ್ಲಬೇಕು ಎಂಬುದೇ ಆಗಿದೆ ಹಾಗಾಗಿ ಯಾರು ಅವರ ಮೇಲೆ ಎಂತಹ ಕುತಂತ್ರ ಮಾಡಿದರು ಅವರ ಯಶಸ್ಸನ್ನ ತಡೆಹಿಡಿಯುವುದಕ್ಕೆ ಸಾಧ್ಯವಿಲ್ಲ.