ಇತ್ತೀಚಿಗೆ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಅದರಲ್ಲೂ ಪ್ರೀತಿ ಪ್ರೇಮ ಅಂತ ಪ್ರೀತಿಯಲ್ಲಿ ಬಿದ್ದು ಹೊರಳಾಡುವವರಿಗೆ ಜಗತ್ತು ಕಾಣಿಸುವುದೇ ಇಲ್ಲ ತಾವು ಮಾಡುವ ತಪ್ಪು ಕೂಡ ಅರಿವಿಗೆ ಬರುವುದಿಲ್ಲ. ಈಗ ಪ್ರೀತಿ ಮಾಡುವುದಕ್ಕೆ ಜಾತಿ ಧರ್ಮ ಅಥವಾ ವಯಸ್ಸಿನ ಮಿತಿಯು ಇಲ್ಲ. ಅದೇ ಮದುವೆಯ ವಿಷಯಕ್ಕೆ ಬಂದರೆ ಸಂಬಂಧದಲ್ಲಿ ಎಲ್ಲವೂ ಬದಲಾಗುತ್ತೆ ಇಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ಕೇವಲ 21 ವರ್ಷದ ಯುವತಿ 36 ವರ್ಷದ ಅಂಕಲ್ ಜೊತೆಗೆ ಸಂಬಂಧ ಬೆಳೆಸಿದಳು. ಆತ ಮದುವೆ ಆಗು ಅಂತ ಪೇಡಿಸಿದ್ದಕ್ಕೆ ಯುವತಿ ಮಾಡಿದ್ದೇನು ಇಲ್ಲಿದೆ ನೋಡಿ ಸಂಪೂರ್ಣ ಘಟನೆಯ ಚಿತ್ರಣ.
ಚಾರ್ಟೆಡ್ ಅಕೌಂಟೆನ್ಸಿ ಓದುತ್ತಿದ್ದ 21 ವರ್ಷದ ಯುವಕಿಯ ಹೆಸರು ಈಶ್ವರಿ. ಆಕೆ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರಾಂಕ್ ಪಡೆದ ವಿದ್ಯಾರ್ಥಿನಿ. ಅಷ್ಟೇ ಅಲ್ಲ ಪಿಯುಸಿ ಪರೀಕ್ಷೆಯಲ್ಲಿಯೂ ಕೂಡ ಜಿಲ್ಲೆಗೆ ಎರಡನೇ ಸ್ಥಾನವನ್ನ ತಂದು ಕೊಟ್ಟಿದ್ದಾಳೆ. ಇಂತಹ ವಿದ್ಯಾವಂತ ಹುಡುಗಿ ಓದಿ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಬದಲು ಮಾಡಿದ್ದೇನೆ ಗೊತ್ತಾ. ಸುಮಾರು 36 ವರ್ಷದ ವಿಜಯ್ ಕುಮಾರ್ ಎನ್ನುವವರ ಜೊತೆ ಈಕೆ ಸಂಬಂಧ ಬೆಳೆಸಿಕೊಂಡಿದ್ದರು.
ವಿಜಯ್ ಕುಮಾರ್ ಅವರು ಅರಿಯಲೂರು ಜಿಲ್ಲೆಯ ಸುಂದರೈ ಮೂಲದವರು. ಚೆನ್ನೈ ನುಂಗಂಬಕ್ಕಮ್ ನಲ್ಲಿ ಫಿಜಿಯೋಥೆರಫಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯಕುಮಾರ್ ಹಾಗೂ ಈಶ್ವರಿ ಇಬ್ಬರು ರೈಲಿನಲ್ಲಿ ಪ್ರಯಾಣಿಸುವಾಗ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಸಹಜ ಎಂಬಂತೆ ಮೊಬೈಲ್ ನಂಬರ್ ಕೂಡ ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಇದು ಕೇವಲ ಸ್ನೇಹವಾಗಿ ಉಳಿದಿರಲಿಲ್ಲ ಇವರಿಬ್ಬರ ನಡುವೆ ಸಂಬಂಧ ಚಿಗುರೊಡೆಯಿತು. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ ಕಾವೇರಿ ನದಿ ಬಳಿ ಕಲ್ಲನ್ನೈ ರಸ್ತೆಯಲ್ಲಿ ಬಾಗಶಃ ಕೊಳೆತ ದೇ-ಹವೊಂದು ಪತ್ತೆಯಾಗಿದೆ. ಅದು ವಿಜಯ್ ಕುಮಾರ್ ಅವರದ್ದು ಎಂದು ಗುರುತಿಸಲಾಗಿದೆ.
ಈ ಘಟನೆಯಾ ನಂತರ ಪೊಲೀಸರಿಗೆ ಈಶ್ವರಿ ಮೇಲೆ ಅನುಮಾನ ಬಂದಿದೆ. ಯಾಕೆಂದರೆ ಭಾನುವಾರ ಈ ಸ್ಥಳಕ್ಕೆ ಈಶ್ವರಿ ವಿಜಯ್ ಕುಮಾರ್ ಗೆ ಬರಲು ತಿಳಿಸಿದ್ದಳಂತೆ. ಈ ಹ-ತ್ಯೆಯನ್ನು ಮಾಡಿದ್ದು ಬೇರೆ ಯಾರು ಅಲ್ಲ ಈಶ್ವರಿ ನೇಮಿಸಿದ ಕೂಲಿ ಕಾರ್ಮಿಕರು. ಇನ್ನು ಸ್ವಲ್ಪ ದಿನ ಸಂಬಂಧ ಬೆಳೆಸಿ ಆತನ ಜೊತೆಗೆ ಚೆನ್ನಾಗಿ ಇದ್ದ ಈಶ್ವರಿ ವಿಜಯ್ ಕುಮಾರ್ ನನ್ನು ಕೊ-ಲ್ಲಿಸಲು ಮುಖ್ಯವಾದ ಕಾರಣವೇ ಮದುವೆ.
ವಿಜಯ್ ಕುಮಾರ್ ಇತ್ತೀಚೆಗೆ ಈಶ್ವರಿಯನ್ನ ಮದುವೆ ಹಾಗೂ ಎಂದು ಪೀಡಿಸಿದ್ದ ಎನ್ನಲಾಗಿದೆ. ಆದರೆ ಈಶ್ವರಗೆ ಇದು ಇಷ್ಟ ಇರಲಿಲ್ಲ ಹಾಗಾಗಿ ಮದುವೆ ವಿಷಯ ಬಂದಾಗ ತಿರಸ್ಕಾರ ಮಾಡುತ್ತಿದ್ದಳು. ಅಂದ ಹಾಗೆ ವಿಜಯಕುಮಾರ್ ಗೆ ಈಗಾಗಲೇ ಮದುವೆ ಕೂಡ ಆಗಿತ್ತು. ಇದೇ ಕಾರಣಕ್ಕೆ ಈಶ್ವರಿ ಆತನನ್ನ ಮತ್ತೆ ಮದುವೆ ಆಗುವುದಕ್ಕೆ ನಿರಾಕರಿಸಿದ್ದಳು ಎನ್ನಲಾಗಿದೆ.
ವಿಜಯ್ ಕುಮಾರ್ ಮದುವೆಯಾಗುವಂತೆ ಪೀಡಿಸಿದ್ದು ಮಾತ್ರವಲ್ಲದೆ ಈಶ್ವರಿಗೆ ಬೆದರಿಕೆ ಕೂಡ ಹಾಕಿದ್ದ. ಈಶ್ವರಿ ಹೇಳಿಕೆಯ ಪ್ರಕಾರ ವಿಜಯಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದ ಈಶ್ವರಿಯನ್ನ ಚಿಕಿತ್ಸೆ ನೀಡುವ ನೆಪದಲ್ಲಿ ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯವನ್ನು ಕುಡಿಸಿದ್ದ ಅಷ್ಟೇ ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದ. ತನ್ನ ಜೊತೆಗೆ ಅ-ಕ್ರ-ಮ ಸಂ-ಬಂ-ಧ ಹೊಂದಲು ವಿಫಲವಾದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ ಎಂದು ಈಶ್ವರಿ ತಿಳಿಸಿದ್ದಾಳೆ.
ಇನ್ನು ಕೆಲವು ಮಾಹಿತಿಯ ಪ್ರಕಾರ ವಿಜಯ್ ಕುಮಾರ್ ನನ್ನು ಮದುವೆಯಾಗಲು ಮೊದಲ ಹೆಂಡತಿಗೆ ವಿ-ಚ್ಛೇ-ದ-ನ ನೀಡಬೇಕು ಎಂದು ಈಶ್ವರಿ ತಾಕೀತು ಮಾಡಿದ್ದಾಳೆ. ಆದರೆ ಇದನ್ನು ವಿಜಯಕುಮಾರ್ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ಸಿಟ್ಟಾದ ಈಶ್ವರಿ ಸುಫಾರಿ ಕೊಟ್ಟು ಕೂಲಿ ಕಾರ್ಮಿಕರಿಂದ ಕೊ=ಲೆ ಮಾಡಿಸಿದ್ದಾಳೆ ಎನ್ನಲಾಗಿದೆ. ಕೂಲಿ ಕಾರ್ಮಿಕರಾದ ಮರಿಮುತ್ತು ಕುಮಾರ್ ಮತ್ತು ಗಣೇಶ್ ಅವರಿಗೆ 50,000ಗಳನ್ನ ಕೊಟ್ಟು ಈಶ್ವರಿ ಈ ಕೆಲಸ ಮಾಡಿಸಿದ್ದಾಳೆ. ಇದೀಗ ಈಶ್ವರಿ ಹಾಗೂ ಕೂಲಿ ಕಾರ್ಮಿಕರು ಪೊಲೀಸರ ವಶದಲ್ಲಿ ಇದ್ದಾರೆ.