ಬಾಲಿವುಡ್ ನಲ್ಲಿ ಅತ್ಯಂತ ಸುಂದರವಾದ, ಸದಾ ನಗುಮುಖದ ಸ್ಪುರದ್ರೂಪ ನಟಿ ಅಂದ್ರೆ ಅದು ವಿದ್ಯಾ ಬಾಲನ್, ವಿದ್ಯಾ ಬಾಲನ್ ಅವರ ಡರ್ಟಿ ಪಿಕ್ಚರ್, ಕಹಾನಿ ಮೊದಲಾದ ಸಿನಿಮಾಗಳು ಎವರ್ ಗ್ರೀನ್ ಹಿಟ್ ಸಿನಿಮಾಗಳು. ಇಷ್ಟು ಫೇಮಸ್ ಆಗಿರುವ ನಟಿ ವಿದ್ಯಾಬಾಲನ್ ಗೆ ಜನರಿಂದ ಸಿಗುವ ಪ್ರೋತ್ಸಾಹಕ್ಕಿಂತ ನೆಗೆಟಿವ್ ಕಮೆಂಟ್ ಗಳೇ ಹೆಚ್ಚಂತೆ. ತಮ್ಮ ಜೀವನದ ಬಗ್ಗೆ ಸದಾ ಮಾತನಾಡುವ ವಿದ್ಯಾ ಬಾಲನ್ ಇತ್ತೀಚಿಗೆ ಬರ್ಕಾ ದತ್ ಅವರ ಜೊತೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ನಾನು ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದಲೂ ಜೀರೋ ಫಿಗರ್ ಆಗಿರಲಿಲ್ಲ. ಮೊದಲು ಹೇಗಿದ್ದೇನೋ ಹಾಗೆ ಇದ್ದೇನೆ ಇದು ನಿಮಗೆ ಈಗಲೂ ಅರ್ಥವಾಗಿಲ್ವಾ? ಎಂದು ವಿದ್ಯಾಬಾಲನ್ ಅವರ ದೇಹದ ತೂಕ ನೋಡಿ ಸದಾ ನೀವು ಪ್ರಗ್ನೆಂಟ್ ಎಂದು ಕೇಳುವ ಜನರಿಗೆ ಮರು ಪ್ರಶ್ನೆ ಮಾಡಿದ್ದಾರೆ ನಟಿ ವಿದ್ಯಾಬಾಲನ್. ಇನ್ನು ಜನರು ನಿಮ್ಮ ನಿರ್ಧಾರಗಳ ಬಗ್ಗೆ ಪತಿ ಸಿದ್ದಾರ್ಥ ಅವರ ಒಪ್ಪಿಗೆ ಇದಿಯಾ ಎಂದು ಕೇಳುತ್ತಾರೆ.
ಸಿದ್ದಾರ್ಥ್ ಅವರ ಆಯ್ಕೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಆಯ್ಕೆಗಳ ಬಗ್ಗೆ ಅವರು ಏನು ಹೇಳುವುದಿಲ್ಲ ನಾನು ಸಂಬಂಧಗಳಿಗೆ ಹೆಚ್ಚು ಗೌರವ ಕೊಡುತ್ತೇನೆ. ಅದೇ ರೀತಿ ನನ್ನ ಕೆಲಸದ ಬಗ್ಗೆಯೂ ಹೆಚ್ಚಿನ ಪ್ರೀತಿ ಇದೆ. ನನಗೆ ನನ್ನ ಗಂಡ ಒಂದು ಸಲಹೆ ಕೊಟ್ಟರೆ ಅದು ನನ್ನ ಪ್ರಕಾರ ನಡೆದಿಲ್ಲ ಅಂದ್ರೆ ಹೇಗೆ? ಇದು ವಿದ್ಯಾಬಾಲನ್ ಪ್ರಭುದ್ಧವಾಗಿ ಪ್ರಶ್ನಿಸುತ್ತಾರೆ.
ಇನ್ನು ವಿದ್ಯಾಬಾಲನ್ ಅವರ ದೇಹದ ತೂಕದ ಬಗ್ಗೆ ಜನರು ಮಾತನಾಡುವುದು ಹೆಚ್ಚು. ನೆಗೆಟಿವ್ ಆಗಿ ಕಮೆಂಟ್ ಮಾಡುವುದು ಹೆಚ್ಚು. ಇದರ ಬಗ್ಗೆಯೂ ಮಾತನಾಡಿದ ವಿದ್ಯಾಬಾಲನ್ ‘ನನ್ನ ದೇಹ ಅನುಭವಿಸಿರುವ ಕಷ್ಟಗಳ ಬಗ್ಗೆ ಯಾರಿಗೂ ಅರ್ಥವಾಗುವುದಿಲ್ಲ ಅದನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಒಂದು ಪುಸ್ತಕವನ್ನೇ ಬರೆಯಬೇಕು. ಡರ್ಟಿ ಪಿಚ್ಚರ್ ನ ನಂತರ ನನ್ನ ಬಗ್ಗೆ ಸಾಕಷ್ಟು ಟ್ರೋಲ್ ಆಗಿದೆ ನೆಗೆಟಿವ್ ಕಾಮೆಂಟ್ಗಳು ಬರುತ್ತವೆ.
ಇದರಿಂದ ಮನಸ್ಸಿಗೆ ಬೇಸರವಾಗುತ್ತೆ. ನಾನು ಯಾವುದೇ ಸಿನಿಮಾಕ್ಕೆ ಸಹಿ ಮಾಡಿದರು ಆ ಚಿತ್ರ ತಂಡ ನನಗೆ ದೇಹದ ತೂಕ ಇಳಿಸಿಕೊಳ್ಳಲು ಹೇಳುತ್ತಾರೆ. ಕಳೆದ ಆರು ವರ್ಷದ ಹಿಂದೆಯೂ ನಿರ್ದೇಶಕರು ನನಗೆ ಇದೇ ಮಾತನ್ನೆ ಹೇಳಿದ್ದರು ನಾನು ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ದೇಹದಲ್ಲಿ ಆಗುವ ಹಾರ್ಮೋನಲ್ ಸಮಸ್ಯೆಯಿಂದಾಗಿ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಎಂದಿದ್ದಾರೆ.
ಇದಾದ ಬಳಿಕ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಕರೆಸಿ ವಿದ್ಯಾಬಾಲನ್ ಒಂದು ಮೀಟಿಂಗ್ ಮಾಡುತ್ತಾರೆ. ನಾನು ಸಿನಿಮಾದಿಂದ ಹೊರ ಬರುತ್ತಿರುವ ವಿಚಾರವನ್ನು ತಿಳಿಸುತ್ತಾರೆ ಯಾಕೆ ಹೀಗೆ ಮಾಡುತ್ತಾರೆ ಅಂದರೆ ನಿಮ್ಮ ಚಿತ್ರಕ್ಕೆ ಬೇರೆಯದೆ ರೀತಿಯ ದೇಹ ಇರುವ ನಟಿ ಬೇಕು ಅಂದ್ರೆ ಅವರನ್ನೇ ಸಂಪರ್ಕಿಸಿ. ನನಗೆ ಕಥೆ ಒಪ್ಪಿಸಿ ನಂತರ ಬಣ್ಣ ಹಚ್ಚುವ ಪ್ರಯತ್ನ ಮಾಡಬೇಡಿ. ಯಾವ ಪಾತ್ರ ಕೊಟ್ಟರು ಅದನ್ನು ಮಾಡಬಹುದು ಎನ್ನುವ ಧೈರ್ಯ ನನಗೆ ಇದೆ ಆದರೆ ನಿರ್ದೇಶಕರಿಗೆ ಅದೇ ನಂಬಿಕೆ ಇರಬೇಕು ಅಲ್ಲವೇ? ಎಂದು ವಿದ್ಯಾಬಾಲನ್ ಪ್ರಶ್ನೆ ಮಾಡುತ್ತಾರೆ.
ನಾನು ಎಂದೂ ತೋಳಿಲ್ಲದ ಬಟ್ಟೆ ಧರಿಸಿಲ್ಲ ನಾನು ದಪ್ಪ ಇದ್ದೇನೆ ಎನ್ನುವ ಕಾರಣಕ್ಕೆ ನಾಚಿಕೆ ಆಗುತ್ತಿತ್ತು. ಡರ್ಟಿ ಪಿಕ್ಚರ್ ನಲ್ಲಿ ಹಟ್ ಡ್ರೆಸ್ ಧರಿಸಬೆಕಿತ್ತು. ಆ ಸಮಯದಲ್ಲಿ ಸೆಕ್ಸಿ ಯಾಗಿ ನಾನು ಕಾಣಿಸುತ್ತಿದೆ ಎಂದು ನನಗೂ ಅನ್ನಿಸಿತು. ಸಿನಿಮಾ ಸೂಪರ್ ಹಿಟ್ ಆದಮೇಲೆ ನನಗೆ ನನ್ನ ಮೇಲೆ ಲವ್ ಹೆಚ್ಚಾಯ್ತು. ಸಿನಿಮಾದ ಕಥೆಗೆ ತಕ್ಕಂತೆ ನಾವು ನಟಿಸಿದರೆ ಜನ ಇಷ್ಟ ಪಡುತ್ತಾರೆ ಎಂದು ವಿದ್ಯಾಬಾಲನ್ ಸಾಕಷ್ಟು ವಿಚಾರದ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಿದ್ದಾರೆ. ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.