ವಾಸ್ತು ಎನ್ನುವುದು ಮನೆಯ ಮೇಲೆ, ಮನೆಯವರ ಮೇಲೆ ಬಹುವಾಗಿ ಪರಿಣಾಮ ಬೀರುತ್ತದೆ. ಕೆಲವರು ವಾಸ್ತುವನ್ನು ಅತಿಯಾಗಿ ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ ವಾಸ್ತು ಶಾಸ್ತ್ರದ ಪ್ರಕಾರವೇ ಮನೆಯಲ್ಲಿ ಇರುವ ವಸ್ತುಗಳನ್ನು ಕೂಡ ಜೋಡಿಸಿದ್ರೆ ಆ ಮನೆಯಲ್ಲಿ ಒಳಿತಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ. ವಾಸ್ತು ಶಾಸ್ತ್ರ (Vastu Shastra) ಮನೆಯ ದಿಕ್ಕು ಮನೆಯಲ್ಲಿರುವ ಕೋಣೆಗಳ ದಿಕ್ಕು ಅಷ್ಟೇ ಯಾಕೆ ಮನೆಯಲ್ಲಿ ಇಡಬಹುದಾದ ಪ್ರತಿಯೊಂದು ವಸ್ತುಗಳು ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನು ತಿಳಿಸುತ್ತದೆ.
ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಯಾವುದೇ ಕಾರಣಕ್ಕೂ ನಕಾರಾತ್ಮಕತೆ ನಿಮ್ಮತ್ತ ಸುಳಿಯಬಾರದು ಎಂಬುದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಈ ಕೂಡಲೇ ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಇರುವ ಈ ವಸ್ತುಗಳನ್ನ ತೆಗೆದುಹಾಕಿ. ಹೌದು ಎಷ್ಟೋ ಬಾರಿ ನಾವು ಗೊತ್ತಿಲ್ಲದೇ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುತ್ತೇವೆ. ಅದರಿಂದ ಸಾಕಷ್ಟು ನಕಾರಾತ್ಮಕತೆ ಮನೆಯನ್ನು ತುಂಬಿರುತ್ತದೆ.
ಇದರಿಂದ ಮನೆಯವರೂ ಕೂಡ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಆದರೂ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಒಂದು ಅಡುಗೆ ಮನೆಯಲ್ಲಿ ಯಾವೆಲ್ಲಾ ವಸ್ತುಗಳನ್ನು ಇಟ್ಟರೆ ಅದು ಅಶುಭ, ಮನೆಯ ಯಜಮಾನನಿಗೆ ಸಮಸ್ಯೆ ಉಂಟು ಮಾಡಬಹುದು ಎಂಬುದರ ಬಗ್ಗೆ ವಾಸ್ತು ತಿಳಿಸುತ್ತದೆ. ಅಂತಹ ಕೆಲವು ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಹಿಟ್ಟು – ಮೊದಲನೆಯದಾಗಿ ಹಿಟ್ಟು. ಮನೆಯಲ್ಲಿ ಉಳಿದ ಯಾವುದೇ ಹಿಟ್ಟನ್ನು ಪ್ರಿಡ್ಜ್ ನಲ್ಲಿ ಇಡುವುದು ಸಾಮಾನ್ಯ. ಆದರೆ ಇದೇ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಿಸಬಹುದು ಎಂಬುದು ನಿಮಗೆ ಗೊತ್ತೇ? ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹುಟ್ಟಿಕೊಳ್ಳುತ್ತದೆ ಜೊತೆಗೆ ಕಾಯಿಲೆಗಳು ಕೂಡ ಬರಬಹುದು.
ಒಡೆದ ಪಾತ್ರೆ: ಮನೆಯಲ್ಲಿ ಅಡುಗೆ ಮಾಡುವ ಹೆಂಗಸರು ಅಡುಗೆ ಮನೆಯಲ್ಲಿ ಒಡೆದ ಪಾತ್ರೆ ಇಟ್ಟಿದ್ದರೆ ಅದು ಮನೆಯವರ ನಡುವೆ ವೈಮನಸ್ಸಿಗೆ ಕಾರಣವಾಗುತ್ತದೆ. ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು. ಇದು ನಕಾರಾತ್ಮಕತೆಯನ್ನು ತುಂಬುತ್ತದೆ. ಮನೆಯಲ್ಲಿ ಬಡತನ ಹಾಗೂ ಆರ್ಥಿಕ ಸಮಸ್ಯೆ ಆರಂಭವಾಗಬಹುದು.
ಔಷಧಿ; ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಔಷಧಿಯನ್ನು ಇಡಬೇಡಿ. ಇದು ಅಡುಗೆಯ ಮನೆಯ ಆಹಾರವನ್ನು ಸೇವಿಸಿದಂತೆ ಔಷಧಿ ಸೇವಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ಅನಾರೋಗ್ಯದ ಸಮಸ್ಯೆಗಳು ಇದರಿಂದ ಹೆಚ್ಚಾಗಬಹುದು. ಅದರಲ್ಲೂ ಮನೆಯ ಯಜಮಾನನ ಆರೋಗ್ಯದ ಸ್ಥಿತಿ ಹದ ಕೆಡಬಹುದು ಎಚ್ಚರ.
ಅಡುಗೆ ಮನೆಯಲ್ಲಿ ಪೂಜೆ: ಸಾಕಷ್ಟು ಜನ ಅಡುಗೆಮನೆಯಲ್ಲಿ ದೇವರನ್ನ ಇಟ್ಟು ಪೂಜೆ ಮಾಡುತ್ತಾರೆ. ನೀವು ಈ ತರಹದ ಅಭ್ಯಾಸ ಇಟ್ಟುಕೊಂಡಿದ್ದರೆ ದಯವಿಟ್ಟು ತಪ್ಪಿಸಿ. ಯಾಕೆಂದರೆ ಅಡುಗೆ ಮನೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮೊದಲಾದ ಆಹಾರ ಪದಾರ್ಥಗಳನ್ನ ಬಳಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ದೇವರ ಮೂರ್ತಿಯನ್ನು ಇಟ್ಟು ಪೂಜಿಸುವುದು ಒಳ್ಳೆಯದಲ್ಲ.
ಇದರಿಂದ ಮನೆಯಲ್ಲಿ ದೇವರಿಂದ ಸಿಗುವಂತಹ ಸಕಾರಾತ್ಮಕ ಶಕ್ತಿ ಸಿಗುವುದಿಲ್ಲ. ಬದಲಿಗೆ ನೆಗೆಟಿವ್ ಎನರ್ಜಿ ಮನೆಯನ್ನ ತುಂಬುತ್ತದೆ. ಜೊತೆಗೆ ದೇವತೆಗಳು ಕೂಡ ಕೋಪಿಸಿಕೊಳ್ಳುತ್ತಾರೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಕೆಲವು ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡುವುದನ್ನು ತಪ್ಪಿಸಿ. ಸಕಾರಾತ್ಮಕ ಎನರ್ಜಿ ಮನೆ ತುಂಬುತ್ತದೆ. ಇನ್ನು ಕೆಲವರು ಅಡುಗೆ ಮನೆಯಲ್ಲೇ ಮೈಮರೆತು ಪತ್ನಿಯ ಜೊತೆಗೆ ಸೇರುತ್ತಾರೆ ಈ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.