ಇಂದು ಜನ ತಮ್ಮನ್ನ ತಾವು ಗುರುತಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವ ಒಂದು ವೇದಿಕೆ ಅಂದ್ರೆ ಅದು ಸೋಶಿಯಲ್ ಮೀಡಿಯಾ (Social Media) ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ಪೋಸ್ಟ್ಗಳನ್ನು ಹಾಕುವುದರ ಮೂಲಕ ಜನರಿಂದ ಕಾಮೆಂಟ್ (Comment) ಹಾಗೂ ಲೈಕ್ (Like) ಗಿಟ್ಟಿಸಿಕೊಳ್ಳುತ್ತಾರೆ ಇದಕ್ಕೆ ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ.
ತಮ್ಮ ಬಿಡುವಿನ ವೇಳೆಯಲ್ಲಿ ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ವೇದಿಕೆಯಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ ಈ ಮೂಲಕ ಜನರ ಗಮನ ಸೆಳೆಯುತ್ತಾರೆ. ಇನ್ನು ಜನರ ಗಮನಸೆಳೆಯುವುದಕ್ಕೆ ಜನರಿಂದ ಹೆಚ್ಚು ಲೈಕ್ ಕಮೆಂಟ್ ಗಿಟ್ಟಿಸಿಕೊಳ್ಳುವುದಕ್ಕೆ ಕೆಲವರು ಏನೆಲ್ಲಾ ಮಾಡುತ್ತಾರೆ ಗೊತ್ತಾ? ಅಸಲಿಗೆ ತಮ್ಮ ವ್ಯಕ್ತಿತ್ವವನ್ನೇ ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ತರಾವರಿ ಪೋಸ್ಟ್ (Post) ಗಳನ್ನು ಹಾಕುತ್ತಾರೆ ಅಂಥವರಲ್ಲಿ ಊರ್ಫಿ ಜಾವೇದ್ ಕೂಡ ಒಬ್ರು.
ಹಿಂದಿ ಸೀರಿಯಲ್ (Hindi Serial) ನಲ್ಲಿ ನಟಿಸಿದ ಊರ್ಫಿ ಜಾವೇದ್ ಬಿಗ್ ಬಾಸ್ (Bigg Boss) ವೇದಿಕೆಯನ್ನು ಪ್ರವೇಶಿಸಿದ ನಂತರ ಹೆಚ್ಚು ಜನಪ್ರಿಯದಾರರು. ಇನ್ನು ಊರ್ಫಿ ದಿನವು ಟ್ರೋಲ್ (Troll) ಆಗುತ್ತಾರೆ. ಇವರಷ್ಟು ಟ್ರೋಲ್ ಆಗಿರುವ ಸೆಲೆಬ್ರಿಟಿ ಮತ್ತೊಬ್ಬರಿಲ್ಲ ಎಂದು ಹೇಳಬಹುದು. ಈ ಹಿಂದೆ ರಾಖಿ ಸಾವಂತ್ (Rakhi Savanth) ಅವರನ್ನ ಜನ ಹೀಗೆ ಟ್ರೋಲ್ ಮಾಡುತ್ತಿದ್ದರು ಇದೀಗ ಉಡುಪಿ ಎಲ್ಲರ ಸ್ಥಾನವನ್ನು ತಾವೇ ಕವಳಿಸಿಕೊಂಡುಬಿಟ್ಟಿದ್ದಾರೆ. ಯಾಕೆ ಅಂತೀರಾ?
ಊರ್ಫಿ ಜಾವೇದ್ ತುಂಡು ಬಟ್ಟೆಗಳನ್ನು ಧರಿಸುವುದರಲ್ಲಿ ಎತ್ತಿದ ಕೈ ಅವರ ವೇಷ ಭೂಷಣ ಎಲ್ಲರಿಗಿಂತ ಡಿಫ್ರೆಂಟ್ ಆಗಿರುತ್ತೆ. ಒಂದು ತುಂಡು ಪ್ಲಾಸ್ಟಿಕ್, ಕಬ್ಬಿಣದ ತುಂಡು, ಕೊನೆಗೆ ಗೋಣಿಚೀಲ ಸಿಕ್ಕರು ಸಾಕು ಅದು ಊರ್ಫಿ ಜಾವೇದ್ ಅವರ ಬಟ್ಟೆ ಆಗಿಬಿಡುತ್ತದೆ. ಊರ್ಫಿ ಜಾವೇದ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದ್ದಾರೆ ಅವರು ಮಾಡುವ ಫ್ಯಾಷನ್ (Fashion) ನಿಜಕ್ಕೂ ಫ್ಯಾಷನ್ ನ ಎಂದು ಕೇಳುವಷ್ಟರ ಮಟ್ಟಿಗೆ ವಿಭಿನ್ನವಾಗಿರುತ್ತೆ.
ಇನ್ನು ಊರ್ಫಿ ಜಾವೇದ್ ಸಾಕಷ್ಟು ಡ್ರೆಸ್ ಗಳಲ್ಲಿ ಒಳ ಉಡುಪಿನ ಬದಲು ಬೇರೆ ಯಾವುದಾದರೂ ವಸ್ತುಗಳನ್ನ ಬಳಸಿ ಫ್ಯಾಷನ್ ಮಾಡುತ್ತಾರೆ. ಕೆಲವೊಮ್ಮೆ ಬಟ್ಟೆಯ ಬದಲು ಪ್ಲೇಟ್ ನಿಂದಲೋ ಹಣ್ಣಿನಿಂದಲೋ, ಕೈಂದಲ್ಫೋ ದೇಹ ಮುಚ್ಚಿಕೊಳ್ಳುತ್ತಾರೆ. ಹಾಗಾಗಿ ಇನ್ನಷ್ಟು ಟ್ರೋಲ್ ಗೆ ಒಳಗಾಗುವ ಊರ್ಫಿ ಅವರಿಗೆ ಒಳ ಬಟ್ಟೆನಾದರೂ ಧರಿಸಿ ಎಂದು ಜನ ಆಗಾಗ ಕಮೆಂಟ್ ಮಾಡುತ್ತಾರೆ.
ಇನ್ನು ಜನ ಹೀಗೆ ಕಮೆಂಟ್ ಮಾಡಿದ್ದನ್ನು ನೋಡಿ ಊರ್ಫಿ ಜಾವೇದ್ ಸ್ವಲ್ಪ ರಾಂಗ್ ಆಗಿದ್ರು. ಮಾಧ್ಯಮದ ಮುಂದೆ ಈ ವಿವಾದಕ್ಕೆ ಖಡಕ್ ಆದ ಪ್ರತಿಕ್ರಿಯೆ ನೀಡಿದ್ದಾ. ನಾನು ಚಡ್ಡಿ ಧರಿಸುವುದಿಲ್ಲ, ಒಳ ಉಡುಪು ಹಾಕುವುದಿಲ್ಲ ಎನ್ನುವ ಬರವಣಿಗೆಗಳನ್ನು ನೋಡಿದ್ದೇನೆ ಅದರಿಂದ ನಿಮಗೆ ಏನಾಗಬೇಕು ? ನೀವು ಧರಿಸುತ್ತೀರಿ ಅಲ್ವೇ ಅದನ್ನ ನೋಡಿಕೊಳ್ಳಿ ಸಾಕು. ನನ್ನ ಬಗ್ಗೆ ನಿಮಗೆ ಯಾಕೆ ಎನ್ನುವಂತಹ ಮಾತುಗಳನ್ನ ಆಡಿದ್ರು. ಊರ್ಫಿ ಜಾವೇದ್ ಜನರು ತನ ಬಗ್ಗೆ ಏನೇ ಮಾತನಾಡಿದರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಬದಲು ಇನ್ನಷ್ಟು ಹಲವಾರು ಫ್ಯಾಷನ್ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡುತ್ತಾರೆ.
ಇನ್ನು ಊರ್ಫಿ ಜಾವೇದ್ ಪಬ್ಲಿಕ್ ನಲ್ಲಿಯೂ ಕೂಡ ಡ್ರೆಸ್ ಲೆಸ್ ಆಗಿ ಇತರ ವಸ್ತುಗಳಿಂದ ಮೈ ಮುಚ್ಚಿಕೊಂಡು ಕಾಣಿಸಿಕೊಳ್ಳುತ್ತಾರೆ. ಇದರಿಂದಲೂ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಕೇವಲ 25 ವರ್ಷದ ಊಫಿ ಜಾವೆದ್ ಅವರ ಈ ವಿಚಿತ್ರ ಫ್ಯಾಷನ್ ಅಭಿರುಚಿಗೆ ಜನ ಕಂಗಾಲಾಗಿದ್ದಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ನಾಲ್ಕು ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಒಟ್ಟಿನಲ್ಲಿ ಊರ್ಫಿ ಜಾವೇದ್ ತಮ್ಮ ವಿಚಿತ್ರ ಫ್ಯಾಷನ್ ಅಂತೂ ಬಿಡೋದಿಲ್ಲ.