PhotoGrid Site 1682490428892

ಉಡುಪಿಯಲ್ಲಿ ಬಲೆಗೆ ಬಿದ್ದ 25 ಕೆಜಿಯ ಚಿನ್ನದ ಮೀನು, ಅಬ್ಬಾ ಮೀನು ಸಿಕ್ಕ ಅರ್ಧ ಗಂಟೆಯಲ್ಲಿ ಅದೆಷ್ಟು ಹಣಕ್ಕೆ ಮಾರಾಟವಾಯಿತು ಗೊತ್ತಾ? ಅಸಲಿ ಚಿನ್ನ ಕಣ್ರೀ ನೋಡಿ!!

ಸುದ್ದಿ

ಸ್ನೇಹಿತರೆ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರದ (Malpe beach) ನಲ್ಲಿ ಆಗಾಗ ಅಪರೂಪದ ಮೀನುಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಕೆಲವೊಂದು ನೋಡಲು ಬೃಹತ್ ಗಾತ್ರದಲ್ಲಿದ್ದರೆ ಇನ್ನೂ ಕೆಲವೊಂದು ಅವುಗಳ ಬಣ್ಣ ಆಕಾರದ ಮೂಲಕ ಕೆಲವು ವಿಶೇಷತೆಗಳನ್ನು ತುಂಬಿಕೊಂಡಿರುತ್ತದೆ. ಹೀಗೆ ಅಪ್ಪಿ ತಪ್ಪಿ ವಿಶೇಷವಾದಂತಹ ಮೀನುಗಳೆನಾದರೂ ಮೀನುಗಾರರ ಕೈಗೆ ಸಿಕ್ಕಿ ಬಿದ್ದರೆ ಅಂದು ಅವರಿಗೆ ಹಬ್ಬದ ದಿನ ಎಂದರೆ ತಪ್ಪಾಗಲಾರದು.

ಹೀಗಿರುವ ವ್ಯಕ್ತಿ ಒಬ್ಬರಿಗೆ ಮಲ್ಪೆ ಬಂದರಿನಲ್ಲಿ 25 ಕೆಜಿ ತೂಕದ ಗೋಲ್ಡನ್ ಅಂಜನ್ ಮೀನು (Golden Anjal fish) ಸಿಕ್ಕಿಬಿದ್ದಿದೆ. ಹೌದು ಗೆಳೆಯರೇ ಈ ಗೋಲ್ಡನ್ ಅಂಜಲ್ ಮೀನು ಎಂದರೆ ಸಾಕು, ಮ-ತ್ಸ್ಯ ಪ್ರಿಯರ ಬಾಯಲ್ಲಿ ನೀರು ತುಂಬಿ ತುಳುಕುತ್ತಿರುತ್ತದೆ. ಅದರಲ್ಲೂ ಅಂಜಲ್ ಮೀನಿನ ಫ್ರೈಯನ್ನು ತಿನ್ನೋದೇ ಒಂದು ಮಜಾ, ಹೀಗಿರುವಾಗ ಗೋಲ್ಡನ್ ಅಂಜಲ್ ಮೀನು (golden Anjal fish) ತನ್ನ ರುಚಿ ಹಾಗೂ ಆರೋಗ್ಯಕರ ಲಾಭಗಳನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುತ್ತದೆ.

ಹೀಗಿರುವಾಗ ಸಾಮಾನ್ಯವಾಗಿ ಬೆಳ್ಳಿ ಬಣ್ಣದ ಅಂಜಲ್ ಮೀನನ್ನು (silver coloured Anjal fish) ತಿಂದಿರುತ್ತೇವೆ. ಆದರೆ ಬಂಗಾರದ ಅಂಜಲ್ ಮೀನೆಂದಾದರೂ ಕಂಡಿದ್ದೀರಾ? ಇದರ ವಿಶೇಷತೆ ಏನು ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಮಲ್ಪೆ ಸಮುದ್ರಕ್ಕೆ ಬೆಲೆ ಹಾಕಿದ ಮೀನುಗಾರ (Fisherman) ರೊಬ್ಬನಿಗೆ ಬರೋಬ್ಬರಿ 25 ಕೆಜಿ (25 kg) ತೂಕದ ಮೀನು ಸಿಕ್ಕಿಬಿದ್ದಿದೆ.

ಕೆಲವೇ ಕೆಲವು ನಿಮಿಷಗಳಲ್ಲಿ ಈ ಒಂದು ಮೀನಿನ ಖರೀದಿ ಭರಾಟೆ ಜೋರಾ ನಡೆದಿದ್ದು, ಅಲ್ಲಿದ್ದಂತಹ ಸ್ಥಳೀಯರೊಂದಿಗೆ ಹೆಚ್ಚಿನ ಡಿಮಾಂಡ್ ಗಳನ್ನು ಮಾಡಿ ಮೀನನ್ನು ಮಾರಾಟ ಮಾಡಿದ್ದಾನೆ. ಹೌದು ಗೆಳೆಯರೇ ಈ ಒಂದು ಗೋಲ್ಡನ್ ಅಂಜನ್ ಮೀನಿನ ಒಂದು ಕೆಜಿ ಬೆಲೆ ಬರೋಬ್ಬರಿ 600 ರೂಪಾಯಿಗಳು ಸಾಮಾನ್ಯವಾಗಿ ಈ ರೀತಿಯಾದಂತಹ ಅಂಜಲ್ ಮೀನುಗಳು ಸಮುದ್ರದ ಮೀನುಗಳಾಗಿದ್ದು ರುಚಿಯಲ್ಲಿ ಇವುಗಳನ್ನು ಮೀರಿಸುವಂತಹ ಮೀನುಗಳು ಸಿಗುವುದಿಲ್ಲ.

ಅದರಲ್ಲೂ ಮೀನಿನ ಊಟಗಳಲ್ಲಿ ಅಂಜಲ್ ಫ್ರೈ ಗೆ (Anjal fish fry) ಬಾರಿ ಡಿಮ್ಯಾಂಡ್ ಇರೋದ್ರಿಂದ ದಿನೇ ದಿನೇ ಇದರ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಒಂದು ಪ್ಲೇಟ್ ಅಂಜಲ್ ಫ್ರೈಗೆ ಹೋಟೆಲ್ನಲ್ಲಿ ಬರೋಬ್ಬರಿ 500 ರೂಪಾಯಿಗಳನ್ನು ಡಿಮ್ಯಾಂಡ್ ಮಾಡುತ್ತಾರೆ. ಅದರಲ್ಲೂ ಗೋಲ್ಡನ್ ಅಂಜಲ್ (Golden Anjal) ಎಂದರೆ ಇನ್ನಷ್ಟು ದುಬಾರಿನೇ. ಹೀಗೆ ಸಮುದ್ರಕ್ಕೆ ಬಲೆ ಹಾಕಿ ಬರೋಬ್ಬರಿ 25 ಕೆಜಿ ತೂಕದ ಗೋಲ್ಡನ್ ಅಂಜಲ್ ಮೀನನ್ನು ವ್ಯಕ್ತಿ ಹಿಡಿದು ಸಂತಸ ವ್ಯಕ್ತಪಡಿಸಿದ್ದಾನೆ.

Leave a Reply

Your email address will not be published. Required fields are marked *