ಇತ್ತೀಚಿಗೆ ಸೆಲೆಬ್ರಿಟಗಳ ನಡುವೆ ವಿ-ಚ್ಛೇ-ದ-ನ ಎನ್ನುವುದು ಬಹಳ ಕಾಮನ್ ಎನ್ನುವಂತೆ ಆಗಿದೆ. ಸಾಕಷ್ಟು ಜನ ಸಿನಿಮಾ ತಾರೆ (Film stars) ಯರು ಮದುವೆಯಾಗಿ ಅಲ್ಪ ಸಮಯದಲ್ಲಿಯೇ ವಿ-ಚ್ಛೇ-ದ-ನ ಘೋಷಿಸುತ್ತಾರೆ. ಅದರಲ್ಲೂ ಪ್ರೀತಿಸಿ ಮದುವೆ ಆಗಿರುವವರು ಕೂಡ ಮದುವೆಯಾಗಿ ಸ್ಪಲ್ಪ ಸಮಯದಲ್ಲಿಯೇ ಬೇರೆಯಾಗುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.
ಹೌದು, ಬಾಲಿವುಡ್ (Bollywood) ಮಾತ್ರವಲ್ಲ ಟಾಲಿವುಡ್ (Tallywood) ನಲ್ಲಿಯೂ ಕೂಡ ಸೆಲಿಬ್ರೆಟಿಗಳ ವಿಚ್ಚೇದನದ ವಿಷಯ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಹಿರಿಯ ಕಲಾವಿದರಾದ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಅವರಿಂದ ಹಿಡಿದು, ಇತ್ತೀಚಿಗೆ ಸ್ಟಾರ್ ನಟ ದಳಪತಿ ವಿಜಯ್ ಅವರ ವಿಚ್ಚೇಧನದ ವಿಷಯದವರೆಗೂ ಅಭಿಮಾನಿಗಳಿಗೆ ಶಾಕ್ ನೀಡಿವೆ.
ಇದಕ್ಕೂ ಮೊದಲು ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಸಮಂತಾ ಋತ್ ಪ್ರಭು ವಿಚ್ಚೇದನವನ್ನು ಪಡೆದುಕೊಂಡಿದ್ದು ಟಾಲಿವುಡ್ ನಲ್ಲಿ ದೊಡ್ದ ಸಂಚಲನವನ್ನೇ ಉಂಟು ಮಾಡಿತ್ತು. ಪ್ರೀತಿಸಿದ ಈ ಜೋಡಿಯೂ ಮದುವೆಯಾಗಿ ಕೇವಲ ನಾಲ್ಕೇ ವರ್ಷಗಳಲ್ಲಿ ದೂರಾಗಿದ್ದಾರೆ. ಇನ್ನು ಸೆಲಿಬ್ರೆಟಿ ಜೋಡಿಗಳು ಹೇಗೆ ಅಂದ್ರೆ ಅವರು ತಮ್ಮ ರಿಲೇಶನ್ ಶಿಪ್ ಬಗ್ಗೆ ಹೇಳಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ ಅದೇ ರೀತಿಯಾಗಿ ವಿ-ಚ್ಛೇ-ದ-ನ ತೆಗೆದುಕೊಳ್ಳುತ್ತಿದ್ದೇನೆ.
ಎಂದು ಪತಿಯಾಗಲಿ, ಪತ್ನಿಯಾಗಲಿ ಬಹಿರಂಗವಾಗಿ ಹೇಳಿಕೊಳ್ಳುವುದಕ್ಕು ಹಿಂಜರಿಯುವುದಿಲ್ಲ. ನಾವು ಈಗ ನಿಮಗೆ ಹೇಳುತ್ತಿರುವ ಘಟನೆ ನಿಮಗೆ ಶಾಕ್ ನೀಡಬಹುದು. ಸುದ್ದಿ ವಾಹಿನಿಯಲ್ಲಿ ನಿರೂಪಣೆ ಮಾಡುವ ನಿರೂಪಕಿ ತನ್ನ ವಯಕ್ತಿಯ ವಿಚಾರವನ್ನು ಬಹಿರಂಗವಾಗಿ ತಾನು ಕೆಲಸ ಮಾಡುವ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿಯೇ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಾತನಾಡಿದ್ದಾಳೆ. ಇದು ಆ ಚಾನಲ್ ಗೂ ಕೂಡ ಶಾಕ್ ಕೊಟ್ಟಿದೆ.
ಹೌದು, ಟಿವಿ ಆಂಕರ್ ಒಬ್ಬಳು ತಾನು ಕೆಲಸ್ ಮಾಡುವ ಚಾನೆಲ್ ನಲ್ಲಿಯೇ ತನ್ನ ವಿ-ಚ್ಛೇ-ದ-ನ ವಿಚಾರವನ್ನು ಬ್ರೇಕ್ ಮಾಡಿ ನ್ಯೂಸ್ ಮಾಡಿದ್ದಾಳೆ. ಇತ್ತೀಚಿಗೆ ಟಿವಿ ಆಂಕರ್ ಒಬ್ಬಳು ಲೈವ್ ಆಗಿ ತಾನು ಪತಿಯಿಂದ ದೂರಾಗುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾಳೆ. ಬಹುಶಃ ಈ ರೀತಿ ನಿರೂಪಕಿ ಒಬ್ಬರು ಲೈವ್ ಆಗಿ ವಿ-ಚ್ಛೇ-ದ-ನ ಘೋಷಿಸಿಕೊಳ್ಳುತ್ತಿರುವುದು ಇದೆ ಮೊದಲಿರಬಹುದು.
ʼಫಾಕ್ಸ್ʼ (Fox) ಸುದ್ದಿ ವಾಹಿನಿಯ ನಿರೂಪಕಿ ಜ್ಯೂಲಿ ಬಾಂಡೆರಾನ್ (Julie Banderas) ನಿರೂಪಣೆ ಮಾಡುತ್ತಿರುವಾಗಲೇ ತಮ್ಮ ಪತಿಗೆ ವಿ-ಚ್ಛೇ-ದ-ನ ಘೋಷಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರೇಮಿಗಳ ದಿನದ ಪ್ರಯುಕ್ತ ನಡೆಸಲಾಗಿದ್ದ ಕಾರ್ಯಕ್ರಮದಲ್ಲಿ ಜ್ಯೂಲಿ ಈ ವಿಚಾರವನ್ನು ಹೇಳಿದ್ದಾರೆ. 2009ರಲ್ಲಿ ಜ್ಯೂಲೀ ಬ್ಯಾಂಡೆರನ್, ಆಂಡ್ರ್ಯೂ ಸ್ಯಾನ್ಸೂನ್ ಅವರನ್ನು ವಿವಾಹವಾಗಿದ್ದರು.
ಇನ್ನು ಈ ಕಾರ್ಯಕ್ರಮದ ವೇಳೆ ಜ್ಯೂಲಿ ವ್ಯಾಲೆಂಟೈನ್ ಡೇ ಬಗ್ಗೆ ನೆಗೆಟಿವ್ ಮಾತನಾಡಿದ್ದಾರೆ. ಅಲ್ಲದೆ ಇದು ಮೂರ್ಖ ಆಚರಣೆ ಎಂದಿದ್ದಾರೆ. ಕೊನೆಗೆ ತಾನು ಗಂಡನಿಂದ ದೂರಾಗುತ್ತಿರುವುದನ್ನು ಕೂಡ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇದೆ ಮೊದಲ ಬಾರಿಗೆ ನಾನು ಈ ಬಗ್ಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ. ಈ ವ್ಯಾಲೆಂಟೈನ್ ಡೇ ಕಾರ್ಯಕ್ರಮ ಪ್ರಸಾರವಾಗುವ ಹಿಂದಿನ ದಿನ ಟ್ವಿಟ್ಟರ್ ನಾಲ್ಕು ಸೆಲ್ಫಿ ಶೇರ್ ಮಾಡಿದ್ದ ಜ್ಯೂಲಿ ತಾನು ವಿ-ಚ್ಛೇ-ದ-ನ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು.
ನಿರೂಪಕಿ ಜ್ಯೂಲಿ 2009ರಲ್ಲಿ ಆಂಡ್ರ್ಯೂ ಸ್ಯಾನ್ಸೋನ್ ಅವರನ್ನು ಮದುವೆಯಾಗಿದ್ದು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಪತಿ ಸ್ಯಾನ್ಸೋನ್‌ಗೆ ವಿ-ಚ್ಛೇ-ದ-ನ ನೀಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಒಟ್ಟಿನಲ್ಲಿ ಪ್ರೇಮಿಗಳ ವಾರದ ಸಮಯದಲ್ಲಿಯೇ ಪತಿಯಿಂದ ದೂರಾಗುವ ವಿಚಾರವನ್ನು ಹೇಳಿದ್ದು ಪ್ರೇಕ್ಷಕರಿಗೆ ಶಾಕ್ ಆಗಿದೆ.