ಸಿನಿಮಾ ರಂಗದಲ್ಲಿ ಯಾವುದೇ ನಟನೆಯ ಹಿನ್ನೆಲೆಯೂ ಇಲ್ಲದೆ ಬಂದು ಹೆಸರು ಮಾಡುವುದು ಅಥವಾ ಸಿನಿಮಾ ರಂಗದಲ್ಲಿ ನೆಲೆ ನಿಲ್ಲುವುದು ಅಷ್ಟು ಸುಲಭವಲ್ಲ. ಅದರಲ್ಲೂ ಮಹಿಳಾ ಕಲಾವಿದರು (Actress) ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಹೇಳಿಕೊಳ್ಳುವಮ್ತೆಯೂ ಇರುವುದಿಲ್ಲ. ಅವುಗಳಲ್ಲಿ ಕಾ-ಸ್ಟಿಂಗ್ ಕೌಚ್ ಅಂತೂ ಸಾಕಷ್ಟು ಕಲಾವಿದೆಯರು ಅನುಭವಿಸಿಬಿಟ್ಟಿದ್ದಾರೆ. ಕಾ-ಸ್ಟಿಂಗ್ ಕೌಚ್ ಇಂದು ಬಹಳ ಸಾಮಾನ್ಯವಾಗಿ ವಿಷಯ ಎನ್ನುವ ಹಾಗೆ ಆಗಿದೆ.
ಎಲ್ಲಾ ಭಾಷಾ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಇದು ಇದ್ದಿದ್ದೆ. ಯಾಕೆಂದರೆ ಮೀಟು ಅಭಿಯಾನದ ನಂತರ ಹಲವು ನಟಿಯರು ತಮಗೆ ಸಿನಿಮಾರಂಗದಲ್ಲಿ ಆಗಿರುವಂತಹ ತೊಂದರೆ ಗಳ ಬಗ್ಗೆ ಓಪನ್ (Open Talk) ಆಗಿ ಹೇಳಿಕೊಳ್ಳುತ್ತಿದ್ದಾರೆ. ಈ ನೀವು ನಟಿಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಿತ್ತು. ಸಿನಿಮಾದಲ್ಲಿ ಮಿಂಚುವುದಕ್ಕೆ ಆದರೆ ತಮಗೆ ಆಗಿರುವ ಯಾವ ಕೆಟ್ಟ ಅನುಭವದ ಬಗ್ಗೆಯೂ ಎಲ್ಲಿಯೂ ಮಾತನಾಡುತ್ತಿರಲಿಲ್ಲ.
ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ನಟಿಯರು ಏನೇ ಸಮಸ್ಯೆ ಇದ್ದರೂ ನೇರವಾಗಿ ಎದುರಿಸುತ್ತಾರೆ ಜೊತೆಗೆ ಓಪನ್ ಆಗಿ ತನಗೆ ತೊಂದರೆ ಕೊಟ್ಟವರ ಬಗ್ಗೆ ಹೇಳುತ್ತಾರೆ. ತೆಲುಗು (Telugu) ನಲ್ಲಿ ಛಾಪು ಮೂಡಿಸಿದ ನಟಿ ಪ್ರಗತಿ ಬಗ್ಗೆ ಎಲ್ಲರಿಗೂ ಗೊತ್ತು ಅವರು ಕಳೆದ 30 ವರ್ಷಗಳಿಂದ ಅವರ ಕಲಾ ಸೇವೆ ಅಪಾರ ನಾಯಕಿಯಾಗಿ ಅಭಿನಯಿಸಲು ಆರಂಭಿಸಿದ ಪ್ರಗತಿ ಇದೀಗ ಪೋಷಕ ನಟಿಯಾಗಿಯೂ ಕೂಡ ಬಹು ಬೇಡಿಕೆಯ ನಟಿ ಎನಿಸಿದ್ದಾರೆ. ನಟಿ ಪ್ರಗತಿ ಕೂಡ ಇತ್ತೀಚಿಗೆ ಕಾ-ಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು, ಸೋಶಿಯಲ್ ಮೀಡಿಯಾ (Social Media) ದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಒಬ್ಬ ನಾಯಕಿಯಾಗಿ ನಟಿಸಿದ ಪ್ರಗತಿ ಅವರ ಜೀವನದಲ್ಲಿಯೂ ಕೂಡ ಇಂತಹ ಒಂದು ಘಟನೆ ನಡೆದಿತ್ತು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ನಟಿ ಪ್ರಗತಿ ಈಗಲೂ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ ಬಹುತೇಕ ಎಲ್ಲಾ ತೆಲುಗು ಸ್ಟಾರ್ ನಟರ ತಾಯಿ ಅಥವಾ ಅತ್ತೆ ಮೊದಲಾದ ಪಾತ್ರದಲ್ಲಿ ಪ್ರಗತಿ ನಟಿಸುತ್ತಾರೆ. ಆದರೆ ಈ ಮಟ್ಟಕ್ಕೆ ಬಂದು ನಿಲ್ಲಲು ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ ಈ ಬಗ್ಗೆ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದರು.
ನಟಿ ಪ್ರಗತಿ ಹೇಳಿದ್ದೇನು? “ನಾನು ಕೂಡ ಇಂಡಸ್ಟ್ರಿಯಲ್ಲಿ ಹಲವು ಸಮಸ್ಯೆಗಳನ್ನು ನೋಡಿದ್ದೇನೆ ನಿರ್ದೇಶಕರು ನಿರ್ಮಾಪಕರು ಮಾತ್ರವಲ್ಲದೆ ಸ್ಟಾರ್ ಹೀರೋಗಳು ಕೂಡ ಕಮಿಟ್ಮೆಂಟ್ ಕೇಳಿದರು. ಒಂದು ಇಡೀ ರಾತ್ರಿ ತನ್ನ ಜೊತೆ ಕಳೆದರೆ ನಿನಗೆ ಅವಕಾಶ ಕೊಡಿಸುತ್ತೇನೆ ಎಂದು ಹೇಳಿದ್ದರು.
ಆದರೆ ನಾನು ಅದಕ್ಕೆಲ್ಲ ಒಪ್ಪಲಿಲ್ಲ. ಆ ಹೀರೋಯಿನ್ ಇಂದ ಹೀಗೂ ತಪ್ಪಿಸಿಕೊಂಡು ಆಚೆ ಬಂದೆ”. ಎಂಬುದಾಗಿ ಪ್ರಗತಿ ಅವರು ಹೇಳಿಕೊಂಡಿದ್ದಾರೆ. ಇನ್ನು ಹೀಗೆ ಕೆಲವು ನಟಿಯರು ತಮಗೆ ಆಗಿರುವಂತಹ ತೊಂದರೆಯನ್ನು ಓಪನ್ ಆಗಿ ಹೇಳುವುದರಿಂದ ಇತ್ತೀಚಿಗೆ ಸಿನಿಮಾಕ್ಕೆ ಎಂಟ್ರಿ ಕೊಡುವ ನಟಿಯರಿಗೆ ಖಂಡಿತವಾಗಿಯೂ ಧೈರ್ಯ ಬರಬಹುದು. ಸ್ಪೂರ್ತಿಯೂ ಆಗಬಹುದು.