Tamanna Bhatia : ಚಿತ್ರರಂಗದಲ್ಲಿ ಕಲಾವಿದೆಯರು ಸಾಕಷ್ಟು ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ ಕಾ-ಸ್ಟಿಂಗ್ ಕೌಚ್ ಕೂಡ ಒಂದು. ನಟಿಯರು ತಮಗೆ ಉತ್ತಮ ಅವಕಾಶ ಸಿಗಬೇಕು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಬೇಕು ಅಂದ್ರೆ ಕೆಲವು ನಿರ್ಮಾಪಕರು, ನಿರ್ದೇಶಕರು ಅಷ್ಟೇ ಯಾಕೆ ನಟರು ಕೂಡ ಕಮಿಟ್ಮೆಂಟ್ ಕೇಳುತ್ತಾರೆ. ಇಂತಹ ವಿಚಾರವನ್ನು ಹೇಳುವುದಕ್ಕಾಗಿ ಮೀ-ಟೂ ಎನ್ನುವ ಅಭಿಯಾನ ಆರಂಭವಾಗಿತ್ತು.
ಇದಾದ ಬಳಿಕ ಕೆಲವು ಕಲಾವಿದೆಯರು ಧೈರ್ಯವಾಗಿ ಕಾಸ್ಟಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ತಮಗೆ ಆದ ಅನ್ಯಾಯ ಹಾಗೂ ತಮ್ಮ ಮೇಲೆ ಆಗಿರುವ ದೌ-ರ್ಜ-ನ್ಯದ ಬಗ್ಗೆ ಹೇಳಿಕೊಂಡಿದ್ದಾರೆ ಆದರೆ ಈ ನಡುವೆಯೂ ಸಾಕಷ್ಟು ಜನ ನೋವನ್ನು ಅನುಭವಿಸಿ ಸುಮ್ಮನಾದವರು ಕೂಡ ಇದ್ದಾರೆ. ಇದೀಗ ನಟಿ ತಮನ್ನಾ ಭಾಟಿಯಾ ಸಂದರ್ಶನ ಒಂದರಲ್ಲಿ ಕಾ-ಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಮಿಲ್ಕ್ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಭಾಟಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದಿಗೂ ಬಹು ಬೇಡಿಕೆಯ ನಟಿ ಎನಿಸಿರುವ ತಮನ್ನಾ ಭಾಟಿಯ ಕನ್ನಡದಲ್ಲಿ ಕೂಡ ಒಂದು ಹಾಡಿಗೆ ನೃತ್ಯ ಮಾಡಿದ್ದಾರೆ.
ಇತ್ತೀಚೆಗೆ ತಮನ್ನಾ ಭಾಟಿಯಾ Hindi ಚಾನೆಲ್ ಒಂದರ ಸಂದರ್ಶನದ ವೇಳೆ ಕಾಸ್ಟಿಂಗ್ ಬಗ್ಗೆ ಮಾತನಾಡಿದ್ದಾರೆ ಇಷ್ಟು ದೊಡ್ಡ heroine ಕೂಡ ಇಂತಹ ಸಮಸ್ಯೆಯನ್ನು ಎದುರಿಸಿದ್ರಾ? ಎಂದು ನಿಮಗೂ ಆಶ್ಚರ್ಯವಾಗಬಹುದು. ತಮನ್ನಾ ಭಾಟಿಯಾ ಅವರು ಹೇಳುವ ಹಾಗೆ, ಅವರು ಅವಕಾಶವನ್ನು ಕೇಳಿಕೊಂಡು ಹಿಂದಿ ನಿರ್ಮಾಪಕರೊಬ್ಬರ ಬಳಿ ಹೋಗುತ್ತಾರೆ.

ಆಗ ಅವರ manager ನೇರವಾಗಿ ನಿಮಗೆ ಅವಕಾಶ ಬೇಕು ಅಂದ್ರೆ ನಿರ್ಮಾಪಕರನ್ನು ಸಂತೋಷಪಡಿಸಬೇಕು ಅವರು ಹೇಳಿದ ಹಾಗೆ ಕೇಳಬೇಕು ಒಂದು ಸಾರಿ ನೀವು ಅವರ ಗೆಸ್ಟ್ ಹೌಸ್ ಗೆ ಹೋದರೆ ಸಾಕು ಮಿಕ್ಕಿದ್ದೆಲ್ಲವನ್ನ ಅವರೇ ನೋಡಿಕೊಳ್ಳುತ್ತಾರೆ ಎಂದು manager ಹೇಳಿದ್ದರಂತೆ. ಕಡಲ ತೀರದಲ್ಲಿ ಕಲರ್ ಫುಲ್ ಆಗಿ ಕಾಣಿಸಿದ ಗೀತಾ ಸೀರಿಯಲ್ ಅಮ್ಮನ ಪಾತ್ರದಾರಿ ಶರ್ಮಿತಾ ಗೌಡ! ನಟಿಯ ಸೌಂದರ್ಯಕ್ಕೆ ಮನಸೋತ ಅಭಿಮಾನಿಗಳು, ಇಲ್ಲಿವೆ ನೋಡಿ ಫೋಟೋಸ್!!
ಈ ಮಾತಿನ ಹಿಂದಿನ ಅಸಲಿ ವಿಷಯ ಅರ್ಥವಾಗಿ ತಾನು ಅಲ್ಲಿಂದ ಕೂಡಲೇ ಹೊರಟು ಬಂದಿದ್ದೆ ಎಂದು Tamanna Bhatia ಹೇಳಿಕೊಳ್ಳುತ್ತಾರೆ. ಕಾ-ಸ್ಟಿಂಗ್ ಕೌಚ್ ಎನ್ನುವ ಭೂತ ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಸು ಹೊಕ್ಕಾಗಿದೆ ಇದರಿಂದ ಕಲಾವಿದೆಯರು ಆಚೆ ಬರದ ಹೊರತು, ಇದನ್ನು ನೇರವಾಗಿ ಎದುರಿಸದ ಹೊರತು ಈ ಸಮಸ್ಯೆಗಳು ತಪ್ಪಿದ್ದಲ್ಲ.