ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪ ಅವರ ಮಗಳು ಚಾರಿತ್ರ್ಯ ಇದೀಗ ಹೆಚ್ಚು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಗೋಲ್ಡನ್ ಸ್ಟಾರ್ ಅವರು ತಮ್ಮ ಮಗಳ ಬರ್ತಡೇ ಯನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಿದರು ಇದಕ್ಕೆ ಬಹುತೇಕ ಎಲ್ಲಾ ಸಿನಿಮಾ ತಾರೆಯರು ಕೂಡ ಬಂದಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಪಕ್ಕ ಫ್ಯಾಮಿಲಿ ಮ್ಯಾನ್. ತನ್ನ ಹೆಂಡತಿ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿಸುತ್ತಾರೆ.
ಜೊತೆಗೆ ತಮಗೆ ಬಿಡುವಾದಾಗಲಿಲ್ಲ ಮನೆಯವರ ಜೊತೆ ಸಂಭ್ರಮದಿಂದ ಸಮಯ ಕಳೆಯುತ್ತಾರೆ. ಗಣೇಶ್ ಅವರು ಇತ್ತೀಚಿಗೆ ತ್ರಿಬಲ್ ರೈಡಿಂಗ್ ಸಿನಿಮಾದ ರೈಡಿಂಗ್ ಮುಗಿಸಿದ್ದಾರೆ. ಈ ಸಿನಿಮಾಕ್ಕೆ ಫಿಫ್ಟಿ ಫಿಫ್ಟಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಗೋಲ್ಡನ್ ಸ್ಟಾರ್ ಒಂದಾದ ಮೇಲೆ ಒಂದು ಸಿನಿಮಾ ಒಪ್ಪಿಕೊಂಡು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುತ್ತಾರೆ. ಆದರೆ ಯಾವುದೇ ಸಮಯದಲ್ಲಿ ಬ್ರೇಕ್ ಸಿಕ್ಕರು ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳ ಜೊತೆಯೂ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಗಣೇಶ ಅವರ ಪತ್ನಿ ಶಿಲ್ಪ ಕೂಡ ತುಂಬಾನೇ ಫೇಮಸ್. ಅವರು ಹೆಚ್ಚು ರಾಜಕೀಯ ಪಕ್ಷಗಳ ಜೊತೆಗೆ ಕಾಣಿಸಿಕೊಳ್ಳುತ್ತಾರೆ. ಬಿಜೆಪಿಯ ಪ್ರಚಾರಕ್ಕೆ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಲ್ಪ ತುಂಬಾನೇ ಆಕ್ಟಿವ್. ತಮ್ಮ ಮಗಳ ಜೊತೆಗೂ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಾರೆ.
Instagram ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಶಿಲ್ಪ ಅವರ ಮಗಳು ಚಾರಿತ್ರ್ಯ ಕೂಡ ಸಿನಿಮಾ ರಂಗಕ್ಕೆ ಬರುವ ಎಲ್ಲಾ ಲಕ್ಷಣಗಳು ಇದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ಅವರ ಪುತ್ರಿ ಚಾರಿತ್ರ್ಯ ಈಗಾಗಲೇ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ ಅದರಲ್ಲೂ ತಂದೆಯ ಸಿನಿಮಾದಲ್ಲಿಯೇ ಮೊದಲ ಬಾರಿಗೆ ಚಾರಿತ್ರ್ಯ ಬಣ್ಣ ಹಚ್ಚಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಚಿತ್ರದಲ್ಲಿ ಪುಟ್ಟ ಪಾತ್ರ ಒಂದರಲ್ಲಿ ಚಾರಿತ್ರ್ಯ ಕಾಣಿಸಿಕೊಂಡಿದ್ದಾರೆ.
ಇದೀಗ ಓದುತ್ತಿರುವ ಚಾರಿತ್ರ್ಯ ಮುಂಬರುವ ದಿನಗಳಲ್ಲಿ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಚಾರಿತ್ರ್ಯ ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರ ಜೊತೆಗೆ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಸಮಯದಲ್ಲಿಯೂ ಕೂಡ ಹಲವಾರು ಸ್ಯಾಂಡಲ್ವುಡ್ ತಾರೆಯರು ಮನೆಗೆ ಆಗಮಿಸಿದ್ದರು. ಇನ್ನು ಚಾರಿತ್ರ್ಯ ಇನ್ಸ್ಟಾಗ್ರಾಮ್ ನಲ್ಲಿ ತನ್ನದೇ ಹೊಂದಿದ್ದು 22 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಚಾರಿತ್ರಿಯ ಇತ್ತೀಚೆಗೆ ಕ್ರಿಕೆಟ್ ನ ಬೆಸ್ಟ್ ಪ್ಲೇಯರ್ ಸುರೇಶ್ ರೈನಾ ಅವರ ಜೊತೆಗೆ ಕಾಣಿಸಿಕೊಂಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಕ್ರಿಕೆಟ್ ಪ್ರಿಯ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತಾರೆಯರ ಮ್ಯಾಚ್ ಗಳಲ್ಲಿಯೂ ಕೂಡ ಗಣೇಶ್ ಆಟವಾಡಿದ್ದಾರೆ. ಇತ್ತೀಚಿಗೆ ಗಣೇಶ ಅವರ ಮಗಳು ಚಾರಿತ್ರ್ಯ ಸ್ಟಾರ್ ಕ್ರಿಕೆಟರ್ ಸುರೇಶ್ ರೈನ ಅವರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಾರಿತ್ರ್ಯ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಈಗಾಗಲೇ ಚಾರಿತ್ರ್ಯ ಸುರೇಶ್ ರೈನ ಅವರ ಜೊತೆಗೆ ಇರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳನ್ನು ಪಡೆದುಕೊಂಡಿದೆ.