ಬಾಲಿವುಡ್ ನ ಬಾದ್ ಷಾ ಶಾರುಕ್ ಖಾನ್ (Sharukh Khan) ಅವರ ಮಗಳು ಸುಹಾನಾ ಖಾನ್ (Suhana Kjan) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಗಿನಿಂದ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಖಾನ್ ಕುಟುಂಬದ ಕುಡಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಓಪನಿಂಗ್ಸ್ (opnings) ನಲ್ಲಿಯೇ ಬಾಲಿವುಡ್ ಸಿನಿ ಪ್ರಿಯರಿಗೆ ಇಷ್ಟವಾಗಿದ್ದಾರೆ.
ಹೌದು, ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಮಗಳು ಸುಹಾನ ಖಾನ್ ಡಿ ಅರ್ಚಿಸ್ ಎನ್ನುವ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕಿ ಝೋಯಾ ಖಾನ್ (Zoya Khan) ಅವರ ಸಿನಿಮಾ ಇದಾಗಿದ್ದು ಬಹುತೇಕ ಸ್ಟಾರ್ ಕಿಡ್ (Star Kid) ಗಳನ್ನು ಈ ಸಿನಿಮಾದಲ್ಲಿ ಕಾಣಬಹುದು. ಇನ್ನು ಈ ಸಿನಿಮಾದ ಟೆಲಿಕಾಸ್ಟ್ ರೈಟ್ಸ್ ನೆಟ್ ಫ್ಲೀಕ್ಸ್ (Netflix) ಒಟಿಟಿ (OTT) ಗೆ ಸಿಕ್ಕಿದೆ.
ಈ ಸಿನಿಮಾ ಪ್ಯಾಕ್ ಆಫ್ ಆಗಿರುವ ಖುಷಿಯಲ್ಲಿ ಝೋಯಾ ಸಿನಿಮಾದ ಎಲ್ಲಾ ಕಾಸ್ಟ್ ಗಳಿಗೆ ಬಿಗ್ ಪಾರ್ಟಿ ನೀಡಿದ್ರು. ಇದರಲ್ಲಿ ಸುಹಾನಾ ಖಾನ್ ಕೂಡ ಭಾಗಿಯಾಗಿದ್ದರು. ಈ ಸಮಯದಲ್ಲಿ ಸುಹಾನಾ ಖಾನ್ ಧರಿಸಿದ ಕೆಂಪು ಬಣ್ಣದ ಬಾಡಿ ಕಾನ್ ಡ್ರೆಸ್ ಧರಿಸಿದ್ದು, ಸಿಕ್ಕಾಪಟ್ಟೆ ಟ್ರೊಲ್ (Trool) ಗೂ ಕೂಡ ಗುರಿಯಾಗಿತ್ತು.
ಇದೀಗ ಸುಹಾನಾ ಖಾನ್ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ದಿ ಅರ್ಚಿಡ್ ಸಿನಿಮಾದಲ್ಲಿ ಸ್ಟಾರ್ ಕಿಡ್ ಗಳಾದ, ಶಾರುಕ್ ಖಾನ್ ಪುತ್ರಿ ಸುಹಾನಾ, ನಟಿ ಶ್ರೀದೇವಿ ಪುತ್ರಿ ಖುಷಿ ಕಪೂರ್ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh bachhan) ಅವರ ಮೊಮ್ಮಗ ಅಗಸ್ತ್ಯ ಬಚ್ಚನ್ (Agastya Bachhan) ಕೂಡ ನಟಿಸಿದ್ದಾರೆ. ಇದೀಗ ಅಗಸ್ತ್ಯ ಹಾಗೂ ಸುಹಾನಾ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಶುರುವಾಗಿದೆ ಅಂತ ಬಿಟೌನ್ ಮತಂಡಿಕೊಳ್ಳುತ್ತಿದೆ.
ಹೌದು, ಸಿನಿಮಾ ಸೆಟ್ ನಲ್ಲಿ ಚೆನ್ನಾಗಿ ಬೆರೆಯುತ್ತಿದ್ದ ಸುಹಾನಾ ಹಾಗೂ ಅಗಸ್ತ್ಯ ಇಬ್ಬರು ಲವ್ ನಲ್ಲಿ ಬಿದ್ದಿದ್ದರಂತೆ. ಇದೀಗ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅಂತ ಸುದ್ದಿಯಾಗಿದೆ. ಸಿನಿಮಾ ಮಾಡ್ತಾ ಮಾಡ್ತಾ ಜೊತೆಗೆ ಅಭಿನಯಿಸಿದ ಅಗಸ್ತ್ಯ ಬಚ್ಚನ್ ಗೆ ಸುಹಾನಾ ಮೇಲೆ ಪ್ರೇಮಾಂಕುವಾಗಿದೆ. ಅದಕ್ಕೆ ಸರಿಯಾಗಿ ರಣಬೀರ್ ಕಪೂರ್ ಅವರ ನ್ಯೂ ಇಯರ್ ಪಾರ್ಟಿಯಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಸುಹಾನಾ ಖಾನ್ ಮನೆಯವರಿಗೆ ಅಗಸ್ತ್ಯ ನನ್ನು ಪರಿಚಯ ಮಾಡಿಸಿದ್ದಾರೆ. ಇವರ ಲವ್ ಸ್ಟೋರಿಗೆ ಪುಷ್ಠಿ ನೀಡುವಂತೆ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಕೂಡ ಮಗನ ಲೈಫ್ ಪಾರ್ಟನರ್ ಸುಹಾನಾ ಆಗೋದಕ್ಕೆ ಗ್ರೀನ್ ಸಿಗ್ನಲ್ ಬೇರೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ಸ್ಟಾರ್ ಕೂಡ ಗಳು ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಒಂದಾದರೆ ಆಶ್ಚರ್ಯವೇನೂ ಇಲ್ಲ.
ಇತ್ತೀಚಿಗೆ ಸುಹಾನಾ ಗೆ ಡೇಟಿಂಗ್ ಮಾಡುವಂತೆ ಸಲಹೆ ನೀಡುತ್ತೇನೆ ಎಂದು ಕಾರ್ಯಕ್ರಮ ಒಂದರಲ್ಲಿ ಗೌರಿ ಖಾನ್ ಹೇಳಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಗೌರಿ ಖಾನ್ ಅವರನ್ನು ಜನ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಮಗಳಿಗೆ ಎಂಥ ಸಂಸ್ಕಾರ ಕೊಟ್ಟಿದ್ದೀರಾ ಅಂತ ಜನ ಬೈದಿದ್ದರು.
ಅದೇನೇ ಇರಲಿ ಬಾಲಿವುಡ್ ಮಂದಿ ಇಂತಹ ಗಾಸಿಪ್ ಗಳಿಗೆಲ್ಲಾ ಕ್ಯಾರೇ ಅನ್ನಲ್ಲ. ಅವರ ಬಗ್ಗೆ ಎಷ್ಟೇ ಟ್ರೊಲ್ ಮಾಡಿದ್ರು ಅವರಿಗೆ ಸರಿ ಅನ್ನಿಸಿದ್ದನ್ನು ಮಾಡುತ್ತಾರೆ. ಸುಹಾನಾ ಖಾನ್ ಕೂಡ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಸಕ್ರಿಯರಾಗಿ ಇರುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಆಗಿ ಕಾಣಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಈ ಸುದ್ದಿ ನಿಮಗೆ ಇಷ್ಟವಾದರೆ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.