ಪ್ರೀತಿ ಪ್ರೇಮ ಅನ್ನೋದು ಹೊಸ ವಿಚಾರವೇನು ಅಲ್ಲ. ಅದು ಯಾರ ಮೇಲೆ ಯಾವಾಗ ಆಗುತ್ತೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಕೆಲವೊಂದು ಪ್ರೇಮ ಪ್ರಕರಣಗಳು ನಿಜಕ್ಕೂ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಇಂತಹ ಪ್ರಕರಣಗಳನ್ನು ನೋಡಿದಾಗ, ಪ್ರೀತಿಸುವ ಮೊದಲು ಒಮ್ಮೆಯಾದರೂ ಯೋಚಿಸುವುದೇ ಇಲ್ಲವೇ ಎನಿಸುತ್ತದೆ. ಇಂತಹ ಒಂದು ಕುರುಡು ಪ್ರೇಮ ಪ್ರಕರಣ ದಾಖಲಾಗಿದ್ದು ಹೈದ್ರಾಬಾದ್ ನ ಚಂದಾನಗರದಲ್ಲಿ.
ಫೆಬ್ರವರಿ 14ರಂದು ಒಬ್ಬ ಶಿಕ್ಷಕಿ ಹಾಗೂ ವಿದ್ಯಾರ್ಥಿ ಇಬ್ಬರು ಹೈದರಾಬಾದಿನ ಚಂದಾನಗರದಿಂದ ಬೆಂಗಳೂರಿಗೆ ತೆರಳಿದ್ದಾರೆ. ತನ್ನ ಮೊಮ್ಮಗಳು ಮನೆಗೆ ಬಾರದೇ ಇದ್ದಾಗ, ಶಿಕ್ಷಕಿಯ ಅಜ್ಜಿ ಚಂದಾನಗರ ಪೊಲೀಸ್ ಠಾಣೆಯಲ್ಲಿ ಮೊಮ್ಮಗಳು ಕಳೆದುಹೋಗಿದ್ದಾಳೆ ಎಂದು ಪ್ರಕರಣವನ್ನು ದಾಖಲಿಸಿದ್ದರು ಅದೇ ರೀತಿ ವಿದ್ಯಾರ್ಥಿ ಕಾಣೆಯಾಗಿದ್ದನು.
ಮಗ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಆತನ ಪೋಷಕರು ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಕಿ-ಡ್ನಾ-ಪ್ ಕೇಸ್ ಅನ್ನು ದಾಖಲಿಸಿದ್ದರು. 26 ವರ್ಷದ ಶಿಕ್ಷಕಿ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಇಬ್ಬರು ಪರಾರಿಯಾಗಿದ್ದು ಇವರಿಬ್ಬರ ಪ್ರೀತಿಯ ವಿಷಯ ಈಗ ನಗರದ ತುಂಬಾ ಸುದ್ದಿ ಮಾಡಿದೆ. ಆದರೆ ಅದೇನಾಯ್ತೋ ಗೊತ್ತಿಲ್ಲ, ಎಲ್ಲಿಯವರೆಗೆ ಹೋಗಿದ್ದರೋ ಗೊತ್ತಿಲ್ಲ, ಪೊಲೀಸರು ತಮ್ಮ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದ ಕೂಡಲೇ ಆ ಶಿಕ್ಷಕಿ ಹಾಗೂ ವಿದ್ಯಾರ್ಥಿ ಇಬ್ಬರು ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ.
ಮನೆಗೆ ವಾಪಸ್ ಮಗ ಹಾಗೂ ಶಿಕ್ಷಕಿ ಬಂದಿದ್ದಕ್ಕೆ ಆಯಾ ಮನೆಯವರು ಕೂಡ ತಾವು ನೀಡಿದ ದೂರನ್ನು ವಾಪಸ್ ಪಡೆದಿದ್ದಾರೆ. ಆದರೆ ಆರಂಭದಲ್ಲಿ ಶಿಕ್ಷಕಿ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಯಾರೂ ಗೊತ್ತಿರಲಿಲ್ಲ ಆದರೆ ಈ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿ ತನಿಖೆ ಮಾಡಿದ ನಂತರ ಶಿಕ್ಷಕಿ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಂತರ ಇವರಿಬ್ಬರೂ ನಗರವನ್ನು ತೊರೆದು ಬೇರೆ ಕಡೆ ಹೋಗಿ ಜೀವನ ನಡೆಸಲು ಯೋಜಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಎರಡು ಕುಟುಂಬಗಳು ದೂರನ್ನು ವಾಪಸ್ ತೆಗೆದುಕೊಂಡ ನಂತರವೂ ಪೊಲೀಸರು ಆ 26 ವರ್ಷದ ಶಿಕ್ಷಕಿ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಇಬ್ಬರನ್ನು ಠಾಣೆಗೆ ಕರೆಸಿ ಆಪ್ತ ಸಮಾಲೋಚನೆ ಕೊಡಿಸಿದ್ದಾರೆ. ಶಾಲೆಗೆ ಹೋಗುವ ವಯಸ್ಸಿನಲ್ಲಿ ಪ್ರೀತಿ ಪ್ರೇಮಕ್ಕೆ ಬಿದ್ದರೆ ಜೀವನವೇ ಹಾಳಾಗುತ್ತದೆ ಎಂದು ಆ ವಿದ್ಯಾರ್ಥಿಗೆ ತಿಳಿ ಹೇಳಲಾಗಿದೆ. ಅದೇ ರೀತಿಯಾಗಿ ಶಿಕ್ಷಕಿ ಪಾಠ ಮಾಡುವುದನ್ನ ಬಿಟ್ಟು ಹೀಗೆ ವಿದ್ಯಾರ್ಥಿಯ ತಲೆಯಲ್ಲಿ ಪ್ರೀತಿ ಪ್ರೇಮ ಎನ್ನುವ ವಿಷಯವನ್ನು ತುಂಬಬಾರದು ಅದು ಅವರ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂಬುದಾಗಿಯೂ ಶಿಕ್ಷೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಆಪ್ತ ಸಲಹೆಗಾರರು.