ಟಿಕ್ ಟಾಕ್ (Tik Tok) ಹಾಗೂ ಡಬ್ಸ್ಮ್ಯಾಶ್ (Dubsmash)ಗಳ ಹಾವಳಿ ಶುರುವಾದ ಮೇಲೆ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಂತಹ ಸಾಕಷ್ಟು ಪ್ರತಿಭೆಗಳಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಕೂಡ ಒಬ್ಬರು. ಹೌದು ಗೆಳೆಯರೇ ತಮ್ಮ ಲಿಪ್ಸಿಂಗ್ ವಿಡಿಯೋಗಳು (lip sync videos), ಡ್ಯಾನ್ಸ್ ವಿಡಿಯೋ (dance videos) ಗಳ ಮೂಲಕ ಜನರ ಗಮನವನ್ನು ಸೆಳೆದಿದಂತಹ ಅದೆಷ್ಟೋ ಟಿಕ್ ಟಾಕ್ ಸ್ಟಾರ್ ಗಳನ್ನು ನಾವು ನೋಡಿದ್ದೇವೆ. ಆದರೆ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಫೇಮಸ್ ಆಗಿದ್ದು ಬೇರೆಯ ರೀತಿಯ ವಿಡಿಯೋಗಳಿಂದಲೇ.
ಇನ್ನು ಬಿಗ್ ಬಾಸ್ ಮನೆಗೂ ಹೋಗುವ ಅವಕಾಶವನ್ನು ಪಡೆದುಕೊಂಡು ಇನ್ನಷ್ಟು ನೇಮ್ ಗಳಿಸಿಕೊಂಡಂತಹ ಸೋನು ಸದ್ಯ ಯೂಟ್ಯೂಬ್ (youtube) ಚಾನಲ್ ಮೂಲಕ ಜನರಿಗೆ ಹತ್ತಿರವಾಗಲು ಒಂದಲ್ಲ ಒಂದು ವಿಶೇಷ ಚಾಲೆಂಜ್ಗಳನ್ನು ಹಾಗೂ ಜನರಿಗೆ ಉಪಯುಕ್ತ ವಾಗುವಂತಹ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ.
ಹೀಗಿರುವಾಗ ಹೆಣ್ಣು ಮಕ್ಕಳಿಗಾಗಿ ಯಾವ ರೀತಿಯ ಬ್ರಾಗಳನ್ನು ಉಪಯೋಗಿಸಬೇಕು ಹಾಗೂ ಯಾವ ರೀತಿಯ ಪ್ಯಾಂಟೀಸ್ ಹಾಕಿಕೊಂಡರೆ ಹೆಚ್ಚಿನ ಕಂಫರ್ಟ್( comfort) ದೊರಕುತ್ತದೆ ಎಂಬುದನ್ನು ತಿಳಿಸುವ ಸಲುವಾಗಿ ವಿಡಿಯೋ ಒಂದನ್ನು ಮಾಡಿದ್ದಾರೆ. ಆದರೆ ಈ ಒಂದು ವಿಡಿಯೋ ನೆಟ್ಟಿಗರ ಹಾಸ್ಯಕ್ಕೆ ಗುರಿಯಾಗಿದ್ದು, ಸಾಕಷ್ಟು ಜನ ಈ ಒಂದು ವಿಡಿಯೋವನ್ನು ಟ್ರೋಲ್ ಮಾಡಲಾರಂಬಿಸಿದ್ದಾರೆ.
ಹೌದು ಗೆಳೆಯರೇ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರ ನೆನಪಿಗೆ ಬರುವುದು ಐಫೋನ್ 12 (iPhone 12) ರಂತಹ ವಿಡಿಯೋಗಳು. ಹೌದು ಗೆಳೆಯರೇ ಇವರು ಮಾತನಾಡುವ ಶೈಲಿ, ಬೇರೊಬ್ಬರೊಂದಿಗೆ ವರ್ತಿಸುವಂತಹ ರೀತಿ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಾರಿ ಟ್ರೋಲ್ ಮಾಡಲಾಗುತ್ತದೆ.
ತಮ್ಮ ಲಿಪ್ ಸಿಂಕ್ ವಿಡಿಯೋಗಳಿಂದ ಹೆಚ್ಚು ಜನಪ್ರಿಯತೆ ಪಡೆಯುವ ಬದಲು ಸೋನು ಶ್ರೀನಿವಾಸ ಗೌಡ ಈ ರೀತಿ ಹಸಿ ಬಿಸಿ ವಿಡಿಯೋಗಳಿಂದಲೇ ಭಾರಿ ಫೇಮಸ್ ಆದವರು ಎಂದರೆ ತಪ್ಪಾಗಲಾರದು. ಇನ್ನು ಓಟಿಪಿ ಪ್ಲಾಟ್ಫಾರ್ಮ್ (ott platform) ನಲ್ಲಿ ಪ್ರಸಾರವಾಗುತ್ತಿದ್ದಂತಹ ಬಿಗ್ ಬಾಸ್ (Bigg Boss) ಕಾರ್ಯಕ್ರಮಕ್ಕೆ ಸ್ಪರ್ದಿಯಾಗಿ ಎಂಟ್ರಿ ಕೊಟ್ಟಂತಹ ಸೋನು ಶ್ರೀನಿವಾಸ ಗೌಡ (Sonu Srinivas Gowda), ಸಾನಿಯಾ (Saniya Iyer), ರೂಪೇಶ್ ಶೆಟ್ಟಿ (Rupesh Shetty), ಆರ್ಯವರ್ಧನ್ ಗುರೂಜಿ (aryavardhan Guruji), ರಾಕೇಶ್ ಅಡಿಗ (Rakesh Adiga) ಅವರೊಂದಿಗೆ ದೊಡ್ಡಮನೆಯಲ್ಲಿ ವಿಭಿನ್ನವಾಗಿ ವರ್ತಿಸುವ ಮೂಲಕ ಫಿನಾಲೆ ಹಂತದವರೆಗೂ ತಲುಪಿದರು.
ಹೀಗೆ ಈ ಒಂದು ಕಾರ್ಯಕ್ರಮದ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಂತಹ ಸೋನು ಶ್ರೀನಿವಾಸ್ ಗೌಡ ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಇನ್ನಷ್ಟು ಹತ್ತಿರವಾಗಿಸಿಕೊಳ್ಳಲು ಒಂದಲ್ಲ ಒಂದು ವಿಶೇಷ ಹಾಗೂ ವಿಭಿನ್ನ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಕೇವಲ ಇನ್ಸ್ಟಾಗ್ರಾಮ್ (instagram) ರಿಲ್ಸ್ ಮೂಲಕ ಮಾತ್ರವಲ್ಲ ಯೂಟ್ಯೂಬ್(YouTube) ನಿಂದಲೂ ಜನರಿಗೆ ಹತ್ತಿರವಾಗಲು ಪ್ರಯತ್ನ ಪಡುತ್ತಿರುವ ಸೋನು.
ಹೋಂ ಟೂರ್ (home tour), ವಾಡ್ರೋಬ್ ಟೂರ್ (wardrobe tour), ಸ್ಕಿನ್ ಕೇರ್ (skin care) ಹೀಗೆ ಮುಂತಾದ ವಿಡಿಯೋಗಳನ್ನು ಮಾಡುತ್ತಿದ್ದರು. ಆದರಿಗ ಹುಡುಗಿಯರಿಗಾಗಿ ಬ್ರಾ ವಿಡಿಯೋ ಒಂದನ್ನು ಮಾಡಿದ್ದು ಈ ವಿಡಿಯೋ ಸದ್ಯ ನೆಟ್ಟಿಗರ ಹಾಸ್ಯಕ್ಕೆ ಗುರಿಯಾಗಿದೆ. ವಿಡಿಯೋ ಆರಂಭದಲ್ಲಿ ಸೋನು ಶ್ರೀನಿವಾಸ ಗೌಡ ನಾನು ಬ್ರಾ ವಿಡಿಯೋಗಳನ್ನು ಮಾಡುತ್ತಿರುವುದು ಕೇವಲ ಹುಡುಗಿಯರಿಗಾಗಿ ಹುಡುಗರಿಗಾಗಿ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದು.
ಯಾವ ರೀತಿಯ ಬ್ರಾಗಳನ್ನು ತೆಗೆದುಕೊಳ್ಳಬೇಕು ಅದು ಯಾವ ಕಂಪನಿಯದ್ದಾಗಿರಬೇಕು ಹಾಗೂ ಅವುಗಳನ್ನು ಹೇಗೆ ಧರಿಸಬೇಕೆಂಬುದನ್ನೆಲ್ಲ ಸೋನು ಶ್ರೀನಿವಾಸ್ ಗೌಡ ತಮ್ಮ ವಿಡಿಯೋದಲ್ಲಿ ವಿವರಿಸಿದ್ದು, ಪ್ರಮೋಷನ್ ಗಾಗಿ ಈ ವಿಡಿಯೋವನ್ನು ಮಾಡುತ್ತಿರುವುದು ಎಂದು ಸಹ ಹೇಳಿದ್ದಾರೆ. ಇವೆಲ್ಲವನ್ನೂ ನೋಡಿದಂತಹ ನೆಟ್ಟಿಗರು ದುಡ್ಡಿಗಾಗಿ ಯಾವ ವಿಡಿಯೋ ಬೇಕಾದರೂ ಮಾಡ್ತೀಯಾ ಎಂದು ಸೋನು ಶ್ರೀನಿವಾಸಗೌಡರ ಕಾಲೆಳೆದಿದ್ದಾರೆ.