ಇತ್ತೀಚಿಗೆ ಕಾರಣ ಜೋಹರ್ ಅವರ ಕಾಫಿ ವಿಥ್ ಕಾರಣ ಸಂಚಿಕೆಯಲ್ಲಿ ಸೋನಂ ಕಪೂರ್ ಹಾಗೂ ಅರ್ಜುನ್ ಕಪೂರ್ ಅತಿಥಿಯಾಗಿ ಬರಲಿದ್ದಾರೆ ಈ ಸಂದರ್ಭದಲ್ಲಿ ಮಾತನಾಡಿರುವ ಕೆಲವು ತುಣುಕುಗಳು ಪ್ರೋಮೋ ದಲ್ಲಿ ಬಿಡುಗಡೆಯಾಗಿದೆ ಇದೀಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸೋನಂ ಕಪೂರ್ ಅವರ ಫನ್ನಿ ಉತ್ತರಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಿರ್ಮಾಪಕ ಎಂದು ಗುರುತಿಸಿಕೊಂಡಿರುವ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಎಷ್ಟು ಪಾಪ್ಯುಲಾರಿಟಿ ಪಡೆದುಕೊಂಡಿದೆ ಎಂಬುದು ನಿಮಗೆಲ್ಲರಿಗೂ ಗೊತ್ತು. ಅದರ ಜೊತೆಗೆ ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಿದೆ. ಆದರೆ ಕರಣ್ ಜೋಹರ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಕರಣ್ ಜೋಹರ್ ಸಾಕಷ್ಟು ವಯಕ್ತಿಕ ಪ್ರಶ್ನೆಗಳನ್ನು ಸೆಲಿಬ್ರೆಟಿಗಳಿಗೆ ಕೇಳುತ್ತಾರೆ. ಸೆಲೆಬ್ರಿಟಿಗಳು ಕೂಡ ಓಪನ್ ಆಗಿಯೇ ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾರೆ. ಕರಣ್ ಜೋಹರ್ ಅವರ ನೆಪೋಟಿಸಂ ಬಗ್ಗೆ ಸಾಕಷ್ಟು ಟೀಕೆಗಳು ಬರುತ್ತವೆ. ಜೊತೆಗೆ ಸೆಲೆಬ್ರಿಟಿಗಳ ಬಳಿ ಲೈಂಗಿಕ ವಿಚಾರದ ಬಗ್ಗೆಯೂ ಓಪನ್ ಆಗಿ ಮಾತನಾಡುತ್ತಾರೆ ಎಂದು ಸಾಕಷ್ಟು ಸಲ ಕರಣ್ ಜೋಹರ್ ಅವರನ್ನ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದು ಇದೆ.
ಈಗಾಗಲೇ ಬಾಲಿವುಡ್ ಮಾತ್ರವಲ್ಲದೇ ಸೌತ್ ನಾವ್ ಕೆಲವು ಸ್ಟಾರ್ ನಟ ನಟಿಯರು ಕೂಡ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಸೋನಂ ಕಪೂರ್ ಮತ್ತು ಅರ್ಜುನ್ ಕಪೂರ್ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಸೋನಂ ಕಪೂರ್ ನೀಡಿದ ಫನ್ನಿ ಉತ್ತರಗಳು ಈಗಾಗಲೇ ಸಾಕಷ್ಟು ವೈರಲ್ ಆಗಿವೆ.
ಈ ಬಾರಿ ಸೋನಂ ಕಪೂರ್ ಅವರ ಜೊತೆ ಅವರ ಸೋದರ ಸಂಬಂಧಿ ಅರ್ಜುನ್ ಕಪೂರ್ ಕೂಡ ಈ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಸೋನಂ ಕಪೂರ್ ಕಪ್ಪು ಬಣ್ಣದ ಡ್ರೆಸ್ ಧರಿಸಿ ಸುಂದರವಾಗಿ ಕಂಗೊಳಿಸುತ್ತಿದ್ದಾರೆ. ಅರ್ಜುನ್ ಟ್ಯಾನ್ ಜಾಕೆಟ್ ಧರಿಸಿ ಹ್ಯಾಂಡ್ ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಸೋನಂ ಈ ಹಿಂದೆಯೂ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜೊತೆಗೆ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ಕೂಡ ನೀಡಿದ್ದರು.
ರಣಧೀರ ಕಪೂರ್, ಉತ್ತಮ ಬಾಯ್ ಫ್ರೆಂಡ್ ಮೆಟೀರಿಯಲ್ ಅಲ್ಲ ಎಂಬುದರ ಬಗ್ಗೆ ಸೋನಂ ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕನಿಷ್ಠ ಒಂದು ನಿಮಿಷದ ಅರ್ಜುನ್ ಕಪೂರ್ ಹಾಗೂ ಸೋನಂ ಕಪೂರ್ ಭಾಗವಹಿಸಿದ ಕಾರ್ಯಕ್ರಮದ ಟೀಸರ್ ರಿಲೀಸ್ ಆಗಿದೆ ಉತ್ತಮ ಫಾರ್ಮ್ ನಲ್ಲಿ ಇರುವ ಈ ಕಾರ್ಯಕ್ರಮದ ನೋಡಿ ಜನರು ಎಪಿಸೋಡ್ ನೋಡಲು ಕಾತುರರಾಗಿ ಕಾಯುತ್ತಿದ್ದಾರೆ.
ನನ ಸಹೋದರರು ನನ್ನ ಎಲ್ಲಾ ಸ್ನೇಹಿತರ ಜೊತೆ ಮಲಗಿದ್ದಾರೆ ಈಗ ಯಾರು ಉಳಿದಿಲ್ಲ ಎಂದು ಸೋನು ಹೇಳಿದ್ದಾರೆ. ಇದನ್ನು ಕೇಳಿ ಅರ್ಜುನ್ ಕಪೂರ್ ನಾಚಿ ನೀರಾಗಿದ್ದು ಮಾತ್ರವಲ್ಲದೆ ನೀವೆಂತಾ ಸಹೋದರಿ ನೀವು ನನ್ನ ಬಗ್ಗೆ ಏನು ಹೇಳುತ್ತಿದ್ದೀರಿ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.
ಆಗೋದು ಸೋನಂ ಕಪೂರ್ ಬಂದ್ರೆ ಒಂದಿಷ್ಟು ಟ್ರೋಲ್ ಆಗೋದು ಖಂಡಿತ ಹಾಗಾಗಿ ಅರ್ಜುನ್ ಕಪೂರ್ ಕೂಡ ಮಹಿಳೆಯರೇ ಮತ್ತು ಮಹನೀಯರೇ ಸೋನಂ ಕಪೂರ್ ಮತ್ತೆ ಮರಳಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಎಪಿಸೋಡ್ ಸಕ್ಕತ್ ಫನ್ನಿ ಆಗಿದ್ದು ಜನರು ಈ ಎಪಿಸೋಡ್ ನೋಡಲು ಕಾಯುತ್ತಿದ್ದಾರೆ.