PhotoGrid Site 1677560160152

ಮದುವೆಯಾದ ಯುವತಿ ಕಾಲೇಜ್ ಗೆ ಬಂದಾಗ ಶಿಕ್ಷಕ ಎಂತಾ ಪ್ರಶ್ನೆ ಕೇಳಿದ ಗೊತ್ತಾ? ಯುವತಿ ಕೊಟ್ಟ ಉತ್ತರ ಕೇಳಿ ಇಡೀ ಕಾಲೇಜ್ ಶೇಕ್ ನೋಡಿ!!

ಸುದ್ದಿ

ನಾವು ಜೀವನದಲ್ಲಿ ಹಲವಾರು ರೀತಿಯ ಪಾಠಗಳಿಂದ ನಮ್ಮ ಜೀವನವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳಬಹುದು ಹೀಗೆ ಎಲ್ಲರಿಗೂ ಪಾಠವಾಗುವ ಒಂದು ಕಥೆ ನಾವು ಈ ಲೇಖನದಲ್ಲಿ ಹೇಳುತ್ತಿದ್ದೇವೆ ನೋಡಿ. ಒಬ್ಬ ಮದುವೆಯಾದ ಮಹಿಳೆಯ ಧೈರ್ಯವಂತ ಉತ್ತರ ನೋಡಿ. ಒಬ್ಬ ಮಹಿಳೆ ಮದುವೆಯಾಗಿ ಮಗುವಾದ ನಂತರ ಕಾಲೇಜಿಗೆ ಹೋಗಿರುತ್ತಾಳೆ.

ಆಗ ಆ ಹುಡುಗಿಯನ್ನು ಕರೆದು ಶಿಕ್ಷಕರು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಅಲ್ಲಿ ಕಾಣಿಸುವ ಬೋರ್ಡ್ ಮೇಲೆ ನಿನಗೆ ಬಹಳ ಇಷ್ಟವಾದ ಹೆಸರುಗಳನ್ನು ಬರೀ ಎಂದು ಹೇಳುತ್ತಾರೆ. ಆಕೆ ತಕ್ಷಣ ಮೊದಲಿಗೆ ತನ್ನ ತಂದೆ ತಾಯಿ ಹೆಸರನ್ನು ಬರೆಯುತ್ತಾಳೆ. ನಂತರ ಎರಡನೆಯದಾಗಿ ಅಕ್ಕ-ತಂಗಿಯರ ಹೆಸರನ್ನು ಬರೆಯುತ್ತಾಳೆ. ಶಿಕ್ಷಕರು ಇದನ್ನ ನೋಡಿದ ಬಳಿಕ ಮತ್ತೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ.

ನೀನು ಈಗ ಇಲ್ಲಿ ಬರೆದಿರುವ ಹೆಸರುಗಳಲ್ಲಿ ಮೊದಲು ಎರಡು ಹೆಸರುಗಳನ್ನು ಅಳಿಸು ಎಂದು ಹೇಳುತ್ತಾರೆ. ಆಕ್ಗೆ ಬೇಸರವಾಗುತ್ತದೆ ಆದರೂ ಗುರುಗಳು ಹೇಳಿದರಲ್ಲ ಎಂದು ಎರಡು ಹೆಸರುಗಳನ್ನ ಅಳಿಸುತ್ತಾಳೆ. ಆಕೆ ಅಳಿಸುವ ಮೊದಲ ಎರಡು ಹೆಸರುಗಳು ತಂದೆ ಮತ್ತು ತಾಯಿ. ನಂತರ ಇನ್ನೂ ಎರಡು ಹೆಸರುಗಳನ್ನು ಅಳಿಸು ಎಂದು ಶಿಕ್ಷಕರು ಹೇಳುತ್ತಾರೆ. ಆಕೆ ಸಹೋದರಿಯರ ಹೆಸರನ್ನ ಅಳಿಸಿ ಹಾಕುತ್ತಾಳೆ.

ಮೂರನೇ ಹೆಸರನ್ನು ಅಳಿಸಿ ಹಾಕು ಎಂದಾಗ ಆಕೆಯ ಕಣ್ಣಲ್ಲಿ ನೀರು ತುಂಬುತ್ತದೆ ಯಾಕೆಂದರೆ ಅವಳ ಬಳಿ ಇದ್ದದ್ದು ಗಂಡ ಹಾಗೂ ಮಗು ಎನ್ನುವ ಆಯ್ಕೆ ಮಾತ್ರ. ಮದುವೆಯಾದ ಬಳಿಕ ಹೆಣ್ಣು ಗಂಡ ಹಾಗೂ ಮಗುವನ್ನು ಅತಿಯಾಗಿ ಪ್ರೀತಿಸುತ್ತಾಳೆ. ಅವರಿಬ್ಬರಲ್ಲಿ ಯಾರನ್ನು ಕಳೆದುಕೊಳ್ಳುವುದಕ್ಕೂ ಆಕೆಗೆ ಇಷ್ಟವಿರುವುದಿಲ್ಲ. ಆದರೂ ಈ ಎರಡು ಆಯ್ಕೆಯಲ್ಲಿ ಒಂದನ್ನು ಮಾತ್ರ ಆಯ್ದು ಕೊಳ್ಳಬೇಕು ಎಂದಾಗ ಆಕೆ ಮಗುವಿನ ಹೆಸರನ್ನ ಅಳಿಸಿ ಹಾಕುತ್ತಾಳೆ. ಕೊನೆಯಲ್ಲಿ ಗಂಡನ ಹೆಸರು ಮಾತ್ರ ಉಳಿದುಕೊಳ್ಳುತ್ತದೆ.

ಈಗ ಹೆಸರನ್ನು ಅಳಿಸಿ ಹಾಕಿದ್ದಕ್ಕೆ ಶಿಕ್ಷಕರು ಕಾರಣ ಕೇಳುತ್ತಾರೆ ಎಲ್ಲಾ ಹೆಸರನ್ನ ಬಿಟ್ಟು ಗಂಡನ ಹೆಸರನ್ನು ಮಾತ್ರ ಯಾಕೆ ಉಳಿಸಿದ್ದೀಯಾ ಎಂದು ಕೇಳುತ್ತಾರೆ. ಆಗ ಆಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? ತಂದೆ ತಾಯಿ ಮದುವೆ ಮಾಡಿ ಕೊಡುವವರೆಗೆ ನಮ್ಮನ್ನು ನೋಡಿಕೊಳ್ಳುತ್ತಾರೆ ಆದರೆ ಮದುವೆಯಾದ ನಂತರ ಆ ಸಂಬಂಧ ನಿಧಾನವಾಗಿ ಕಳಚಿಕೊಳ್ಳುತ್ತದೆ. ಸಹೋದರಿಯರು ಕೂಡ ಮದುವೆಯಾದ ಬಳಿಕ ನಮ್ಮಿಂದ ದೂರ ಆಗುತ್ತಾರೆ. ಇನ್ನು ಮೂರನೆಯದಾಗಿ ಮಕ್ಕಳು.

ನಮ್ಮ ಜೊತೆಗೆ ಇದ್ದರೂ ಅವರಿಗೆ ಮದುವೆಯಾದ ನಂತರ ನಮ್ಮನ್ನ ಬೇರೆಯದೇ ರೀತಿಯಲ್ಲಿ ನೋಡುತ್ತಾರೆ. ಆದರೆ ಎಂತಹದ್ದೇ ಸಂದರ್ಭವಾದರೂ ಸರಿ, ಎಂತಹ ಕಷ್ಟವಾದರೂ ಸರಿ ಮದುವೆಯಾಗಿ ಬಂದ ನಂತರ ಸಾಯುವರೆಗೂ ಗಂಡ ಮಾತ್ರ ಕೈ ಹಿಡಿದು ಜೊತೆಯಲ್ಲಿ ಇರುತ್ತಾನೆ. ಹಾಗಾಗಿ ಕೊನೆಯವರೆಗೂ ನಮ್ಮ ಜೊತೆ ಇರುವ ಗಂಡನ ಹೆಸರನ್ನು ಬೋರ್ಡ್ ನಿಂದ ಅಳಿಸಿ ಹಾಕಲಿಲ್ಲ ಎಂದು ಆಕೆ ಉತ್ತರ ಕೊಡುತ್ತಾಳೆ. ಆಕೆಯ ಉತ್ತರ ಕೇಳಿ ತರಗತಿಯಲ್ಲಿ ಇದ್ದವರೆಲ್ಲರ ಕಣ್ತುಂಬಿ ಬರುತ್ತದೆ. ಶಿಕ್ಷಕರೂ ಕೂಡ ಒಂದು ಕ್ಷಣ ಮೌನ ವಹಿಸುತ್ತಾರೆ.

Leave a Reply

Your email address will not be published. Required fields are marked *