ಸಿನಿಮಾ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ಹೊಸದೇನು ಅಲ್ಲ. ಅದರಲ್ಲೂ ಕೆಲವು ನಟಿಯರು ಸಿನಿಮಾಗಳಿಗಿಂತಲೂ ಹೆಚ್ಚಾಗಿಯೇ ಸಾಮಾಜಿಕ ಜಾಲತಾಣಗಳಾಲ್ಲಿ ಸಕ್ರಿಯರಾಗಿರುತ್ತಾರೆ. ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಹೊಂದಿರುವ ಕೆಲವು ನಟಿಯರು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.
ಅದಕ್ಕಾಗಿ ಅವರು ಆಸ್ಕ್ ಮೀ ಎನಿಥಿಂಗ್ ಎನ್ನುವಂತಹ ಒಂದು ಸೆಶನ್ ನಡೆಸಿ ಇನ್ಟಾಗ್ರಾಮ್ ನಲ್ಲಿ ಚಿಟ್ ಚಾಟ್ ಮಾಡುತ್ತಾರೆ. ಇನ್ಸ್ಟಾಗ್ರಾಮ್ ಅತ್ಯಂತ ಪ್ರಭಾವಶಾಲಿಯಾದ ಸೋಶಿಯಲ್ ಮೀಡಿಯಾ. ಹಾಗಾಗಿ ಇದರಲ್ಲಿ ಬಹುತೇಕ ಎಲ್ಲಾ ತಾರೆಯರೂ ಆಕ್ಟಿವ್ ಇರುತ್ತಾರೆ. ನಟಿ ಶ್ರುತಿ ಹಾಸನ್ ಕೂಡ ಇದಕ್ಕೆ ಹೊರತಾಗಿಲ್ಲ.
ಹೌದು, ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಮಿಂಚಿದ ಶ್ರುತಿ ಹಾಸನ್ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಆದರೆ ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರೋದನ್ನಂತೂ ಬಿಟ್ಟಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ರುತಿ ಹಾಸನ್ ಅವರಿಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಎಷ್ಟೇ ತಲೆತಿಂದರೂ ಸ್ವಲ್ಪವೂ ಬೇಸರಪಟ್ಟುಕೊಳ್ಳದೆ ಅದಕ್ಕೆಲ್ಲಾ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತಾರೆ ನಟಿ ಶ್ರುತಿ ಹಾಸನ್.
ಶ್ರುತಿ ಹಾಸನ್ ಹಾಗೂ ಅವರ ಅಭಿಮಾನಿಗಳ ಜೊತೆ ನಡೆಸಿದ ಚಿಟ್ ಚಾಟ್ ಇದೀಗ ವೈರಲ್ ಆಗುತ್ತದೆ. ಶ್ರುತಿ ಹಾಸನ್ ಅವರಿಗೆ ಜನರು ಸದಾ ಕೇಳುವ ಪ್ರಶ್ನೆ, ಮದುವೆ ಯಾವಾಗ ಆಗುತ್ತೀರಾ ಅಂತ. ಈ ಪ್ರಶ್ನೆಗೆ ಇದನ್ನೇ ಕೇಳಿ ಕೇಳಿ ಸಾಕಾಗಿದೆ ಬೇರೆ ಏನಾದರೂ ಕೇಳಿ ಅಂತ ಶ್ರುತಿ ಹಾಸನ್ ಉತ್ತರ ನೀಡಿದ್ದರು.
ಇನ್ನು ಹಿಂದೊಮ್ಮೆ ಕಿಸ್ ಅನ್ನು ಕೇಳಿದ ಅಭಿಮಾನಿಗೆ ಕಿಸ್ ಕೊಟ್ಟು ತಾವು ಅಭಿಮಾನಿಗಳ ಜೊತೆ ಇದ್ದೇನೆ ಎಂದು ತೋರಿಸಿಕೊಂಡಿದ್ದರು ನಟಿ ಶ್ರುತಿ ಹಾಸನ್. ಅಷ್ಟೇ ಅಲ್ಲ ಇತ್ತೀಚಿಗೆ ಅವರ ಕಾಲಿನ ಬಗ್ಗೆಯೂ ಅಭಿಮಾನಿ ಒಬ್ಬ ಪ್ರಶ್ನೆ ಮಾಡಿದ್ದ. ಸದ್ಯ ಇದು ವೈರಲ್ ಆಗಿದ್ದು, ನೆಟ್ಟಿಗರು ಸಾಕಷ್ಟು ಕಮೆಂಟ್ ಮಾಡಿದ್ದಾರೆ.
ನಿಮ್ಮ ಕಾಲು ಗಂಟಿನ ನೋವು ಹೇಗಿದೆ ಏಂಜಲ್ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದ ಇದಕ್ಕೆ ಶ್ರುತಿ ಹಾಸನ್ ತಕ್ಷಣವೇ ಕಾಲಿನ ಫೋಟೋವನ್ನು ಕಳುಹಿಸಿ ಬಿಟ್ಟಿದ್ದಾರೆ. ಈಗ ಪರವಾಗಿಲ್ಲ ಅಷ್ಟು ನೋವಿಲ್ಲ, ಸ್ವಲ್ಪ ಊದಿಕೊಂಡಿತ್ತು. ಆದರೆ ಈಗ ಕಡಿಮೆ ಆಗಿದೆ ಎಂದು ಶ್ರುತಿ ಹಾಸನ್ ಉತ್ತರ ನೀಡಿದ್ದಾರೆ.
ಶ್ರುತಿ ಹಾಸನ್ ಅವರ ಎರಡು ಸಿನಿಮಾಗಳು ಸಂಕ್ರಾಂತಿಯ ಸಮಯದಲ್ಲಿ ತೆರೆ ಕಂಡಿದ್ದವು. ಇದೀಗ ಪ್ರಭಾಸ್ ಹಾಗೂ ನಿರ್ದೇಶಕ ಪ್ರಶಾಂತ ನೀಲ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾದಲ್ಲಿಯೂ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಶ್ರುತಿ ಹಾಸನ್ ಅವರ ಸಿನಿಮಾಗಳು ಸೋಲುತ್ತಿವೆ, ಅಲ್ಲದೆ ಅವರು ಹೆಚ್ಚಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಆದರೆ ಇದೀಗ ಮತ್ತೆ ಕೆಲವು ಸಿನಿಮಾದ ಮೂಲಕ ಶ್ರುತಿ ಹಾಸನ್ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾಗಳು ಗೆಲ್ಲುತ್ತವೆಯೇ ಕಾದು ನೋಡಬೇಕು. ಇನ್ನು ಶ್ರುತಿ ಹಾಸನ್ ತಮ್ಮ ಲವರ್ ಶಂತನು ಬಗ್ಗೆ ಅಂತೂ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಹಾಗಾಗಿ ಇವರಿಬ್ಬರ ಮದುವೆ ಯಾವಾಗ ಆಗುತ್ತೆ ಅನ್ನೋದು ಕೂಡ ಅಭಿಮಾನಿಗಳ ಕುತೂಹಲ.