ಸಿನಿಮಾ ನಟ ನಟಿಯರು ಏನೇ ಮಾಡಿದರೂ ಸುದ್ದಿ ಆಗುತ್ತೆ. ಅವರ ವೃತ್ತಿ ಜೀವನದಲ್ಲಿ ಇರಲಿ ಅಥವಾ ವೈಯಕ್ತಿಕ ಜೀವನದಲ್ಲಿ ಇರಲಿ ಸ್ವಲ್ಪ ವ್ಯತ್ಯಾಸವಾದರೂ ಅದು ದೊಡ್ಡ ಸುದ್ದಿ ಆಗುತ್ತೆ. ಅಷ್ಟೇ ಅಲ್ಲ ಸಿನಿಮಾದ ಸ್ಟಾರ್ ನಟ ನಟಿಯರು ಹೇಳುವ ಒಂದೊಂದು ಹೇಳಿಕೆಗಳು ಅದೆಷ್ಟೋ ಗಾಸಿಪ್ ಗಳಿಗೆ ವಿವಾದಗಳಿಗೆ ಕಾರಣವಾಗಿವೆ. ತಾವು ಹೀಗೆ ಹೇಳಿಕೆಯನ್ನು ನೀಡಿದರೆ ಅದು ಸಿಕ್ಕಾಪಟ್ಟೆ ವೈರಲ್ ಆಗಬಹುದು ಎಂದು ಗೊತ್ತಿದ್ದೂ ಕೂಡ ಕೆಲವರು ವಿವಾದವನ್ನು ಉಂಟು ಮಾಡುವಂತಹ ಹೇಳಿಕೆಗಳನ್ನು ಕೊಡುತ್ತಾರೆ.
ನೀವು ಕೆಲವು ಕಲಾವಿದರ ಸಂದರ್ಶನಗಳನ್ನ ನೋಡಿದಾಗ ಅವರು ಮಾತನಾಡುವ ಕೆಲವು ವಿಷಯಗಳು ಸಿಕ್ಕಾಪಟ್ಟೆ ಗಾಸಿಪ್ ಕ್ರಿಯೇಟ್ ಮಾಡುತ್ತವೆ. ಈ ಹಿಂದೆ ನಟಿ ಸಮಂತಾ ರುತ್ ಪ್ರಭು ತನಗೆ ಆಹಾರಕ್ಕಿಂತಲೂ ಸೆ’ಕ್ಸ್ ಇಂಪಾರ್ಟೆಂಟ್ ಅಂತ ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಇದೇ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ಬಾಲಿವುಡ್ ನಟಿ ಮಲೈಕಾ ಅರೋರ ಕೂಡ ಒಂದು ಸಂದರ್ಶನದಲ್ಲಿ ಹೇಳಿದ್ರು.
ಇದೀಗ ಇನ್ನೊಬ್ಬ ನಟಿ ಕೊಟ್ಟಿರುವ ಹೇಳಿಕೆ ಸಿಕ್ಕಾಪಟ್ಟೆ ವಿವಾದವನ್ನು ಕ್ರಿಯೇಟ್ ಮಾಡಿದೆ. ಹೌದು ಹೀಗೆ ವಿಚಿತ್ರವಾದ ಹೇಳಿಕೆಯನ್ನ ಕೊಟ್ಟಿರುವವರು ನಟಿ ಶ್ರುತಿ ಹಾಸನ್. ನಟಿ ಶೃತಿ ಹಾಸನ್ ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು. ತೆಲುಗು ತಮಿಳು, ಹಿಂದಿ ಚಿತ್ರರಂಗದಲ್ಲಿ ನಟಿ ಶೃತಿ ಹಾಸನ್ ಅಭಿನಯಿಸಿದ್ದಾರೆ. ಇನ್ನು ಶೃತಿ ಹಾಸನ್ ಇತರದ ಹೇಳಿಕೆಯನ್ನ ಕೊಡ್ತಾ ಇರೋದು ಮೊದಲ ಬಾರಿಗೆ ಏನಲ್ಲ.
ಸಿನಿಮಾಗಿಂತಲೂ ಹೆಚ್ಚಾಗಿ ಕಾಂಟ್ರವರ್ಶಿಯಲ್ ವಿಷಯಗಳಿಂದಲೇ ಸುದ್ದಿಯಲ್ಲಿರೋದು ಶ್ರುತಿ ಹಾಸನ್. ಶೃತಿ ಹಾಸನ್ ಕೂಡ ಬಹುಭಾಷಾ ನಟಿ. ಬಾಲಿವುಡ್ ಟಾಲಿವುಡ್ ಕಾಲಿವುಡ್ ಎಲ್ಲಾ ಸಿನಿಮಾ ರಂಗದಲ್ಲಿಯೂ ಎಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ ನಟಿ. ಆದ್ರೆ ಇದೀಗ ಸಿನಿಮಾಗಳಲ್ಲಿ ಅಷ್ಟಾಗಿ ಶೃತಿ ಹಾಸನ್ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಗಾಯಕಿಯಾಗಿಯೂ ಕೂಡ ಶ್ರುತಿ ಹಾಸನ ಗುರುತಿಸಿಕೊಂಡಿದ್ದಾರೆ.
ಇನ್ನು ಸ್ಫುರದ್ರೂಪಿಯಾದ ಶೃತಿ ಹಾಸನ್ ಅವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಇತ್ತೀಚಿಗೆ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ ಅದೇನು ಗೊತ್ತಾ? ತನಗೆ ಮದುವೆಗೂ ಮುನ್ನ ಮಕ್ಕಳು ಮಾಡಿಕೊಳ್ಳುವ ಆಸೆ ಇದೆ ಅಂತ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ ಇದರಿಂದ ಅವರ ಅಭಿಮಾನಿಗಳು ಕೂಡ ಮುನಿಸಿಕೊಂಡಿದ್ದಾರೆ. ಶೃತಿ ಹಾಸನ್ ಈ ಹಿಂದೆ ದೊಡ್ಡ ವ್ಯಸನಿಯಾಗಿದ್ರು ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲದೆ ಅದರ ಬಗ್ಗೆ ಅವರೇ ಓಪನ್ ಆಗಿ ಹೇಳಿಕೊಂಡಿದ್ದರು.
ಇದೀಗ ಎಲ್ಲಾ ಸಂಪ್ರದಾಯಗಳನ್ನೂ ಮೀರಿ ಮದುವೆಗೂ ಮೊದಲು ಮಗುವನ್ನು ಪಡೆಯುವ ಆಸೆ ಇದೆ ಎಂದು ಹೇಳಿರುವ ಶ್ರುತಿ ಹಾಸನ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶೃತಿ ಹಾಸನ್ ಈ ಹೇಳಿಕೆಯನ್ನು ಯಾಕೆ ಕೊಟ್ಟರು ಗೊತ್ತಿಲ್ಲ. ಇದು ತಮಾಷೆಗೂ ಇರಬಹುದು. ಆದರೆ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಸಾಕಷ್ಟು ಜನ ಶ್ರುತಿ ಹಾಸನ್ ಅವರ ಈ ಹೇಳಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.