IMG 20230316 152911

ರೈಲು ಹತ್ತಲು ನಿಂತಿದ್ದ ಮಹಿಳೆಯ ಬ್ಯಾಗ್ ನಿಂದ 4 ಲಕ್ಷ ಮೌಲ್ಯದ ಚಿನ್ನವನ್ನು ಎಗರಿಸಿದ ಕಳ್ಳಿಯರು! ಶಿವಮೊಗ್ಗದ ಆಂಟಿ ಕಳ್ಳಿಯರ ವಿಡಿಯೋ ಸಿಸಿಟಿವಿಯಲ್ಲಿ ಸಿಕ್ಕಿದೆ ನೋಡಿ!!

ಸುದ್ದಿ

ಸಾಮಾನ್ಯವಾಗಿ ಇಂದು ಜನನಿಬಿಡ ಪ್ರದೇಶದಲ್ಲಿ ಹೋಗುವುದಕ್ಕೆ ಭಯ ಬೀಳುವಂತಾಗಿದೆ ಅದರಲ್ಲೂ ಟ್ರೈನ್, ಬಸ್ ನಂತಹ ಸಾರ್ವಜನಿಕ ವಾಹನಗಳನ್ನು ಹತ್ತುವಾಗಲೂ ಕೂಡ ಯೋಚನೆ ಮಾಡಬೇಕು ಯಾಕೆಂದರೆ ಇಂತಹ ಜನ ಜಂಗುಳಿ ಇರುವ ಪ್ರದೇಶದಲ್ಲಿ ಸಾಕಷ್ಟು ಕಳ್ಳತನ, ದರೋಡೆ ಮೊದಲಾದ ಅಪಾಯಗಳು ಇರುತ್ತವೆ.

ಹೌದು, ರೈಲು ಪ್ರಮಾಣ ಪ್ರಯಾಣದಲ್ಲಿ ಇಂತಹ ಅಪಾಯ ಹೆಚ್ಚು. ಅದರಲ್ಲೂ ಸಾಮಾನ್ಯ ಬೋಗಿ ಅಲ್ಲಿ ಪ್ರಯಾಣಿಸುವಾಗ ಸಾಕಷ್ಟು ಜನ ಒಟ್ಟಿಗೆ ರೈಲು ಏರಲು ಬರುತ್ತಾರೆ ಆ ಸಮಯದಲ್ಲಿ ಚಾಲಕಿ ಕಳ್ಳರು ಯಾವ ವಿಚಿತ್ರದಲ್ಲಿ ನಮ್ಮ ಬಳಿ ಇರುವ ಬ್ಯಾಗ್ ದುಡ್ಡು ಅಥವಾ ಪರ್ಸ್ ಎಗರಿಸುತ್ತಾರೋ ಗೊತ್ತಾಗೋದಿಲ್ಲ. ಸಾಮಾನ್ಯವಾಗಿ ನೀವು ನೋಡಿರಬಹುದು ರೈಲು ನಿಲ್ದಾಣಗಳಲ್ಲಿ ಕ-ಳ್ಳರಿಂದ ಎಚ್ಚರಿಕೆ ಎಂದು ಬೋರ್ಡ್ ಹಾಕಿರುತ್ತಾರೆ.

ಆದರೂ ಕೆಲವರು ಇದರ ಬಗ್ಗೆ ಗಮನ ಕೊಡುವುದಿಲ್ಲ ಅದರಿಂದ ಕ-ಳ್ಳತನದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಇಂತಹ ಒಂದು ಘಟನೆ ಇತ್ತೀಚಿಗೆ ನಡೆದಿದ್ದು, ಇಬ್ಬರು ಚಾಲಾಕಿ ಕಳ್ಳಿಯರ ಕ-ಳ್ಳತನ ಮಾಡುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇಂದ್ರಾಳಿ ರೈಲು ನಿಲ್ದಾಣದಲ್ಲಿ ಮಂಗಳವಾರ ನಡೆದ ಘಟನೆ ಇದು.

ಮಂಗಳೂರು ಮುಂಬೈ ಎಕ್ಸ್ಪ್ರೆಸ್ ರೈಲು ನಿಲ್ದಾಣಕ್ಕೆ ಬಂದು ನಿಂತಿತ್ತು ಮಧ್ಯಾಹ್ನ 3:30ಕ್ಕೆ ಹೊರಡಲಿರುವ ರೈಲು ಇದಾಗಿತ್ತು. ರೈಲು ಬಂದು ನಿಲ್ಲುತ್ತಿದ್ದಂತೆ ಪ್ರಯಾಣಿಕರು ತಮ್ಮ ತಮ್ಮ ಹೆಸರು ದಾಖಲಾದ ಭೋಗಿಗಳ ಒಳಗೆ ಹತ್ತಲು ತರಾತುರಿಯಲ್ಲಿ ಹೋಗುತ್ತಿದ್ದರು ಈ ಸಮಯದಲ್ಲಿ ಸಾಕಷ್ಟು ಜನಜಂಗುಳಿ ಕೂಡ ಇತ್ತು.

ಇದೇ ಸಮಯದಲ್ಲಿ ಇಬ್ಬರೂ ಹೆಂಗಸರು ತಾವು ಕೂಡ ಆ ರೈಲಿನಲ್ಲಿ ಪ್ರಯಾಣ ಮಾಡುವವರಂತೆ ಜನರ ನಡುವೆ ಸೇರಿಕೊಳ್ಳುತ್ತಾರೆ. ಅಲ್ಲಿ ಒಬ್ಬ ಮಹಿಳೆ ಇನ್ನೇನು ರೈಲು ಹತ್ತಬೇಕು ಅಷ್ಟರಲ್ಲಿ ಆಕೆಯ ಬ್ಯಾಗ್ ನಲ್ಲಿ ಇದ್ದ ಚಿ-ನ್ನಾಭರಣವನ್ನು ಒಬ್ಬ ಕಳ್ಳಿ ಲ-ಪಟಾಯಿಸಿದ್ದಾಳೆ. ಹೌದು ಮಂಗಳೂರು ಮುಂಬೈ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಲು ಹೊರಟಿದ್ದ ಕೂತ್ಯಾರಿನ ಪುನಿತ ವಸಂತ್ ಹೆಗ್ಡೆ ಎಂಬುವರ ವ್ಯಾನಿಟಿ ಬ್ಯಾಗ್ ನಲ್ಲಿ 100 ಗ್ರಾಂ ಚಿನ್ನಾಭರಣವನ್ನು ಎ-ಗರಿಸಿದ್ದಾರೆ.

ಇದು ಸುಮಾರು ನಾಲ್ಕು ಲಕ್ಷ ಮೌಲ್ಯ ಹೊಂದಿದೆ. ಹೀಗೆ ಆಕೆ ಅತ್ಯಂತ ಚಾಣಾಕ್ಷತನದಿಂದ ಕಳ್ಳತನ ಮಾಡಿದ್ದು ಕೊನೆಗೆ ರೈಲು ಹೊರಡುತ್ತಿದ್ದಂತೆ ಇಬ್ಬರು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸರಿಯಾಗಿದ್ದು ಮಣಿಪಾಲ ಪೊಲೀಸರು ಆ ಕಳ್ಳಿಯರನ್ನ ಘಟನೆ ನಡೆದ ಕೇವಲ ಎಂಟು ಗಂಟೆಯ ಒಳಗೆ ಬಂಧಿಸಿದ್ದಾರೆ. ಈ ಕಳ್ಳಿಯರಲ್ಲಿ ಒಬ್ಬಳು 41 ವರ್ಷದ ಶಿವಮೊಗ್ಗದ ಲಲಿತ ಬೋವಿ ಹಾಗೂ ಮತ್ತೊಬ್ಬಳು 61 ವರ್ಷದ ಸುಶೀಲಾ ಬೋವಿ ಎಂದು ತಿಳಿದುಬಂದಿದೆ.

ನಿನ್ನೆ ಬೆಳಗ್ಗೆ ಸುಮಾರು 7:00ಯ ಹೊತ್ತಿಗೆ ಮಣಿಪಾಲದ ಟೈಗರ್ ಸರ್ಕಲ್ ನಲ್ಲಿ ಬಸ್ಸಿಗಾಗಿ ಇವರಿಬ್ಬರು ಕಾಯುತ್ತಾ ನಿಂತಿರುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಯಾಣಿಕರಿಗೆ ಒಂದು ಒಳ್ಳೆಯ ಎಚ್ಚರಿಕೆ ನೀಡುತ್ತಿದೆ ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗಬಹುದು. ಇಲ್ಲಿ ಯಾರು ಕಳ್ಳಿಯರು ಯಾರು ಪ್ರಯಾಣಿಕರು ಎಂದು ಗುರುತಿಸುವುದಕ್ಕೂ ಸಾಧ್ಯವಿಲ್ಲ ಅವರು ತಮ್ಮ ಮೇಲೆ ಒಂದು ಚೂರು ಅನುಮಾನ ಬರದೇ ಇರುವ ರೀತಿಯಲ್ಲಿ ಕಳ್ಳತನ ಮಾಡುತ್ತಾರೆ.

ಅವರನ್ನು ಅಂಟಿಕೊಂಡೇ ಜನ ಇದ್ದರೂ ಕೂಡ ಪಕ್ಕದಲ್ಲಿ ಇರುವವರಿಗೆ ಆಕೆ ಕಳ್ಳತನ ಮಾಡುತ್ತಿರುವುದರ ಬಗ್ಗೆ ಸಣ್ಣ ಸುಳಿವು ಕೂಡ ಸಿಗುವುದಿಲ್ಲ. ಪ್ರಯಾಣ ಮಾಡುವಾಗ ನಾವು ಮೈ ಮರೆತು ನಮ್ಮ ನಮ್ಮ ವಸ್ತುಗಳ ಮೇಲೆ ಕಾಳಜಿ ಮಾಡದೆ ಇದ್ದರೆ ಇಂತಹ ಅನಾಹುತ ನಡೆಯಬಹುದು. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಸ್ವಲ್ಪ ಮುತುವರ್ಜಿ ವಹಿಸಿದರೆ ಒಳ್ಳೆಯದು.

Leave a Reply

Your email address will not be published. Required fields are marked *