shilpa shetty about fitness :ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್ ಸಿನಿರಂಗದಲ್ಲಿ ನಟಿಸಿ ಬದುಕು ಕಟ್ಟಿಕೊಂಡವರು. ವಯಸ್ಸು 47 ಆದರೂ ಕೂಡ ಹದಿನೆಂಟರ ಯುವತಿ ಕಾಣಿಸುತ್ತಾರೆ.. ಇದಕ್ಕೆ ಕಾರಣ ಶಿಲ್ಪಾ ಶೆಟ್ಟಿ ಫಿಟ್ ನೆಸ್ ಗೆ ಕೂಡುವ ಮಹತ್ವ. ಹೌದು, ಫಿಟ್ನೆಸ್ ಕ್ವೀನ್ ಎಂದೇ ಖ್ಯಾತಿ ಗಳಿಸಿರುವ ಶಿಲ್ಪಾ ಶೆಟ್ಟಿ ಬ್ಯೂಟಿಗೆ ಫಿದಾ ಆಗದವರು ಯಾರು ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ಶಿಲ್ಪಾ ಶೆಟ್ಟಿ ಆಗಾಗ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗೆ ಒಂದಲ್ಲ ಒಂದು ವಿಷಯದ ಕುರಿತಾಗಿ ಸುದ್ದಿಯಾಗುವ ಶಿಲ್ಪಾ ಶೆಟ್ಟಿಯ ಬ್ಯೂಟಿ ಹಾಗೂ ನಟನೆಗೆ ಫಿದಾ ಆಗದವರು ಯಾರು ಅಲ್ಲ.
ಲಾಕ್‍ಡೌನ್ ಟೈಮ್ ನಲ್ಲಿ ತಮ್ಮ ಫನ್ನಿ ಹಾಗೂ ಫಿಟ್ನೆಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ಎಂದಿನಂತೆ ನಾನಾ ರೀತಿಯ ವರ್ಕೌಟ್ ಮಾಡುತ್ತಿದ್ದರು. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ತಮ್ಮ ಅಭಿಮಾನಿಗಳಿಗೆ ಫಿಟ್ ನೆಸ್ ಬಗ್ಗೆ ಸಲಹೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲೂ ವ್ಯಾಯಾಮ ಹಾಗೂ ಯೋಗದ ಭಂಗಿಗಳನ್ನು ಮಾಡಿದ್ದು , ವಿಡಿಯೋ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ತನ್ನ ತರಬೇತಿಯ ತುಣುಕುಗಳನ್ನು ಹಂಚಿಕೊಂಡಿದ್ದು,
ವೇದ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಶ್ವೇತಾ ಚಂಗಪ್ಪ! ಇವರ ಪಾತ್ರ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!
ಇದರಲ್ಲಿ ಕಿಬ್ಬೊಟ್ಟೆಯ, ಶ್ರೋಣಿ ಕುಹರದ, ಸೊಂಟ ಮತ್ತು ಕೆಳ ಬೆನ್ನಿನ ಸ್ನಾಯುಗಳ ವ್ಯಾಯಾಮ ಭಂಗಿಗಳನ್ನು ಶೇರ್ ಮಾಡಿಕೊಂಡಿದ್ದಾರೆ.ದೇಹದ ಪ್ರತಿಯೊಂದು ಸ್ನಾಯು ಸಹ ಮುಖ್ಯ. ಬೆನ್ನುಮೂಳೆಯನ್ನು ಆರೋಗ್ಯವಾಗಿಡಲು ಕೆಲವು ವ್ಯಾಯಾಮವನ್ನು ಅಗತ್ಯವಾಗಿ ಮಾಡಬೇಕು. ಹೀಗಾಗಿ ನಟಿ ಶಿಲ್ಪಾ ಅವರು ಕೆಲವು ಕೋರ್ ಟ್ರೈನಿಂಗ್ ಸಲಹೆ ನೀಡಿದ್ದಾರೆ. ಈ ಕೋರ್ ಟ್ರೈನಿಂಗ್ ಇದು ಫಿಟ್ನೆಸ್ ಉತ್ಸಾಹಿಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.
ಕೋರ್ ತರಬೇತಿಯು ಗಾಯದ ಚೇತರಿಕೆಗೆ ಸಹಕಾರಿ ಆಗಿದೆ. ದೀರ್ಘಕಾಲದ ಬೆನ್ನುನೋವಿಗೆ ಪರಿಹಾರ ನೀಡುತ್ತದೆ ಎಂದು ನಂಬಿದ್ದಾರೆ. ಹೀಗಾಗಿ, ನಟಿ ಶಿಲ್ಪಾ ಹೊಸ ಕೋರ್ ತರಬೇತಿ ವಿಡಿಯೋ ತುಣುಕುಗಳ ಆಯ್ದ ಭಾಗಗಳನ್ನು ಶೇರ್ ಮಾಡಿದ್ದು, ಈ ಕೋರ್ ತರಬೇತಿಯು ಕಿಬ್ಬೊಟ್ಟೆಯ, ಶ್ರೋಣಿಯ, ಸೊಂಟ ಮತ್ತು ಕೆಳ ಬೆನ್ನಿನ ಸ್ನಾಯುಗಳ ವ್ಯಾಯಾಮವನ್ನು ಒಳಗೊಂಡಿದೆ.
shilpa shetty about fitness
ಅದರ ಜೊತೆಗೆ ಶಿಲ್ಪಾ ಶೆಟ್ಟಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ, ವಿ-ಸ್ಟ್ಯಾನ್ಸ್ ಸೈಡ್ ಟು ಸೈಡ್ ಮೊಣಕಾಲು ಟಕ್‌ನೊಂದಿಗೆ ವ್ಯಾಯಾಮ ಆರಂಭಿಸುವುದಾಗಿ ಸೂಚಿಸಿದ್ದು, ಮೂರು ಸೆಟ್ ಗಳಲ್ಲಿ 18 ಬಾರಿ ಪುನರಾವರ್ತಿಸಿ. ರಷ್ಯನ್ ಟ್ವಿಸ್ಟ್ ನ್ನು 12 ರಿಂದ 18 ಬಾರಿ ಮಾಡುತ್ತಾರೆ. ವಿರುದ್ಧ ದಿಕ್ಕಿನಲ್ಲಿ ತೋಳುಗಳನ್ನು ಬೀಸುವುದು 12 ರಿಂದ 18 ಬಾರಿ ಪುನರಾವರ್ತಿಸಿ. ದೇಹದ ವಿಶ್ರಾಂತಿಗೆ ಸ್ಟ್ರೆಚಿಂಗ್ ಮಾಡುವಂತೆ ಸಲಹೆ ನೀಡಿದ್ದಾರೆ. ಅದರ ಜೊತೆಗೆ ಮೊದಲ ಎರಡು ವ್ಯಾಯಾಮಗಳು ನೇರವಾಗಿ ಹೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತವೆ. ರೆಕ್ಟಸ್ ಅಬ್ಡೋಮಿನಿಸ್ ಮತ್ತು ಓರೆ ವ್ಯಾಯಾಮ.
ಮೂರನೇ ವ್ಯಾಯಾಮವು ಬೆನ್ನು ಮತ್ತು ಗ್ಲುಟ್ಗಳ ಮೇಲೆ ಪರಿಣಾಮ ಬೀರುತ್ತದೆ. ಕೋರ್ ತರಬೇತಿ ವೇಳೆ ಬಾಯಿಯ ಮೂಲಕ ಮೇಲಕ್ಕೆ ಹೋಗುವ ಮೂಲಕ ಉಸಿರನ್ನು ಬಿಡಬೇಕು. ಅದೇ ವೇಳೆ ಸ್ನಾಯುಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ಸಂಕುಚಿತಗೊಳಿಸಬೇಕು. ಕೆಳಗೆ ಹೋಗುವಾಗ ಮೂಗಿನ ಮೂಲಕ ಉಸಿರಾಡಬೇಕು. ನೀವು ವ್ಯಾಯಾಮವನ್ನು ನಿಧಾನವಾಗಿ ಮತ್ತು ನಿಯಂತ್ರಿತ ರೀತಿಯಲ್ಲಿ ಮಾಡ್ಬೇಕು. ಅದರ ಜೊತೆಗೆ ಉತ್ತಮ ಫಲಿತಾಂಶಕ್ಕೆ ಕೆಲವು ಕ್ರಿಯಾತ್ಮಕ ವ್ಯಾಯಾಮ ಮಾಡಿ ಎಂದು ನಟಿ ಸಲಹೆ ನೀಡಿದ್ದಾರೆ. ಶಿಲ್ಪಾ ಶೆಟ್ಟಿಯವರ ಸಲಹೆಯನ್ನು ಅವರ ಅದೆಷ್ಟೋ ಫ್ಯಾನ್ಸ್ ಗಳು ಫಾಲೋ ಮಾಡುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು.