ದೊಡ್ಮನೆಯಿಂದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಯಾರಾದರೂ ಎಂಟ್ರಿ ಕೊಟ್ರೆ ಅವರನ್ನು ಬಹಳ ಪ್ರೀತಿಯಿಂದ ಕನ್ನಡ ಜನತೆ ಸ್ವಾಗತಿಸುತ್ತೆ. ಯಾಕೆಂದರೆ ರಾಜಕುಮಾರ್ (Rajakumar) ಹಾಗೂ ಅವರ ಮೂರು ಮಕ್ಕಳ ಮೇಲಿರುವ ಅಭಿಮಾನ ಪ್ರೀತಿ ಅವರ ಇಡೀ ಕುಟುಂಬದ ಮೇಲೆ ಅಭಿಮಾನವನ್ನು ಹುಟ್ಟುಹಾಕಿದೆ.
ಡಾಕ್ಟರ್ ರಾಜ್ ಕುಟುಂಬದಿಂದ ಈಗಾಗಲೇ ಕೆಲವರು ಸಿನಿಮಾ ಇಂಡಸ್ಟ್ರಿಗೆ ಬಂದು ಹೆಸರು ಮಾಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಡಾಕ್ಟರ್ ಶಿವರಾಜ್ ಕುಮಾರ್ (Shivaraj kumar) ಪುನೀತ್ ರಾಜಕುಮಾರ್ (Puneeth Rajkumar) ಅವರ ಬಗ್ಗೆ ಅಂತೂ ಹೇಳುವ ಹಾಗೆ ಇಲ್ಲ.
ಅದೇ ರೀತಿಯಾಗಿ ಡಾಕ್ಟರ್ ರಾಜಕುಮಾರ್ ಅವರ ಮಗಳಾದ ಪೂರ್ಣಿಮಾ ಹಾಗೂ ನಟ ರಾಮಕುಮಾರ್ ಅವರ ಮಗಳು ಧನ್ಯ ರಾಮ್ ಕುಮಾರ್ (Dhanya Ramkumar). ಮಗ ಧೀರೆನ್ ರಾಮ್ ಕುಮಾರ್ (Dhiren Ramkumar)ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿಯಾಗಿ ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳಾದ ವಿನಯ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಕೂಡ ಸಿನಿಮಾದಲ್ಲಿ ವೃತ್ತಿಯನ್ನು ಕಂಡುಕೊಂಡಿದ್ದಾರೆ. ಅದೇ ರೀತಿಯಾಗಿ ಶಿವಣ್ಣ ಅವರ ಮಗಳು ಕೂಡ ಸಿನಿಮಾ ನಿರ್ಮಾಣ ಮಾಡೋದ್ರಲ್ಲಿ ತೊಡಗಿದ್ದಾರೆ.
ಇದೀಗ ಡಾಕ್ಟರ್ ರಾಜಕುಮಾರ್ ಅವರ ಮನೆಯ ಮತ್ತೊಂದು ಕುಡಿ ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೆ ಮುಂದಾಗಿದೆ. ಅವರೇ ಷಣ್ಮುಖ ಗೋವಿಂದರಾಜು. ಡಾಕ್ಟರ್ ರಾಜಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಅವರ ಮಗ ಷಣ್ಮುಖ ಗೋವಿಂದರಾಜು ಸಿನಿಮಾದಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ.
ಅಶೋಕ್ ಕಡಬ ನಿರ್ದೇಶನದ ನಿಂಬಿಯಾ ಬನಾದ ಮ್ಯಾಗ ಚಿತ್ರದಲ್ಲಿ ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ ನಟಿಸುವುದಕ್ಕೆ ಸಹಿ ಹಾಕಿದ್ದಾರೆ ಡಿಸೆಂಬರ್ ನಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ ಅಂತ ಷಣ್ಮುಖ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
“ನನಗೆ ನಟಿಸುವ ಆಸೆ ಯಾವಾಗ್ಲೂ ಇತ್ತು, ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ನಾನು ಸಂದರ್ಶನ ಒಂದರಲ್ಲಿ ಅಜ್ಜನ ಬಗ್ಗೆ ಮಾತನಾಡಿರುವುದನ್ನು ನೋಡಿದ ಅಶೋಕ್ ಕಡಬ ಅವರು ಕಳೆದ ವರ್ಷ ನನಗೆ ಸ್ಕ್ರಿಪ್ಟ್ ಹೇಳಿದರು. ನಾನು ನನ್ನ ನಿರ್ಮಾಣದ ಪ್ರಾಜೆಕ್ಟ್ ಒಂದರ ಕೊನೆಯ ಹಂತದಲ್ಲಿ ಇದ್ದುದರಿಂದ.
ಅದೇ ಸಮಯಕ್ಕೆ ಈ ಅವಕಾಶವು ಸಿಕ್ಕಿದ್ದರಿಂದ ಸಿನಿಮಾ ನಟಿಸಲು ಒಪ್ಪಿಕೊಂಡೆ, ಕಾಲೇಜಿನಲ್ಲಿ ಸ್ವಲ್ಪ ಥಿಯೇಟರ್ ಕೆಲಸ ಮಾಡಿದ್ದೇನೆ ನನ್ನ ಅಜ್ಜನ ಚಿತ್ರಗಳನ್ನು ನೋಡಿ ಅವರ ಸಂಭಾಷಣೆಗಳನ್ನು ಕನ್ನಡಿಯ ಮುಂದೆ ಪ್ರಾಕ್ಟೀಸ್ ಮಾಡುತಿದ್ದೆ. ಅದೇ ರೀತಿ ನಟನಾ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕೆಲವು ಚಲನಚಿತ್ರ ಕಾರ್ಯಕಾರಗಳಲ್ಲಿಯೂ ಕೂಡ ತೊಡಗಿಕೊಂಡಿದ್ದೆ” ಎಂದು ಷಣ್ಮುಖ ಅವರು ಹೇಳಿಕೊಂಡಿದ್ದಾರೆ.
ಇನ್ನು ತಾನು ನಟಿಸುತ್ತಿರುವ ಸಿನಿಮಾದ ಬಗ್ಗೆ ಷಣ್ಮುಖ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ “ನಿಂಬಿಯ ಬನಾದ ಮ್ಯಾಗ ಎನ್ನುವ ಶೀರ್ಷಿಕೆಯಿಂದ ನಾನು ಭಾವುಕನಾಗಿದ್ದೇನೆ. ಇದು ಅಮ್ಮ ಮತ್ತು ಮಗನ ಬಗ್ಗೆ ಇರುವ ಒಂದು ಕಥೆ. ತಾಯಿಯ ಪಾತ್ರದಲ್ಲಿ ನಟಿ ಭವ್ಯ ನಟಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಭಾಗವನ್ನು ಮಲೆನಾಡು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಮೊದಲ ಬಾರಿಗೆ ಕ್ಯಾಮರಾ ಎದುರಿಸಿದಾಗ ಆತಂಕಗೊಂಡಿದೆ. ಆದರೆ ಎಲ್ಲರ ಸಹಕಾರದಿಂದ ನನಗೆ ಸಿನಿಮಾದಲ್ಲಿ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದು ಷಣ್ಮುಖ ಹೇಳಿದ್ದಾರೆ.
ಡಾಕ್ಟರ್ ರಾಜಕುಮಾರ್ ಕುಟುಂಬ ಅಂದ್ರೆ ಕಲಾಸೇವೆಗೆ ಮೀಸಲು. ಅದೇ ರೀತಿಯಾಗಿ ಷಣ್ಮುಖ ಕೂಡ ಸಿನಿಮಾದಲ್ಲಿ ಇನ್ನಷ್ಟು ಮುಂದುವರೆಯುತ್ತಾರ ಅವರ ಮೊದಲನೆಯ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕು.