PhotoGrid Site 1674907628511

ಮಗಳ ವಿಡಿಯೋ ನೋಡಿ ಗರಂ ಆದ ನಟ ಶಾರುಖ್ ಖಾನ್ ಕಾಮೆಂಟ್ ಮಾಡಿ ಹೇಳಿದ್ದೇನು ಗೊತ್ತಾ? ಬಾಲಿವುಡ್ ನಲ್ಲಿ ನಡುಕ!!

ಸುದ್ದಿ

ಸದ್ಯ ಬಾಲಿವುಡ್ ನಲ್ಲಿ ಪಠಾಣ್ ಸಿನಿಮಾದ ಹಂಗಾಮ ಜೋರಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪಠಾಣ್ ಸಿನಿಮಾದ ಮೂಲಕ ಶಾರುಖ್ ಬಾಲಿವುಡ್ ಗೆ ಕಂ ಬ್ಯಾಕ್ ಮಾಡಿದ್ದಾರೆ. ಶಾರುಖ್ ಖಾನ್( Sharukh Khan) ಅವರ ಅಭಿನಯದ ಪಠಾಣ್ ಸಿನಿಮಾ ತೆರೆಕಂಡು ಎರಡು ದಿನಗಳು ಕಳೆದಿವೆ. ದಾಖಲೆಯ ಮಟ್ಟದಲ್ಲಿ ಬಾಕ್ಸ್ ಆಫೀಸ್ (Box Office) ಉಡೀಸ್ ಮಾಡುತ್ತಿದೆ ಪಠಾಣ್ ಸಿನಿಮಾ. ಕೇವಲ ಎರಡೇ ದಿನದಲ್ಲಿ 130 ಕೋಟಿಗೂ ಅಧಿಕ ಹಣ ಕಮಾಯಿ ಮಾಡಿದೆ ಎಂದು ಚಿತ್ರ ವಿಮರ್ಶಕರು ಹೇಳುತ್ತಿದ್ದಾರೆ.

ಶಾರುಖ್ ಖಾನ್ ಇದೀಗ ಸಾಮಾಜಿಕ ಜಾಲತಾಣ (Social Media) ದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡುತ್ತಿದ್ದಾರೆ. ಶಾರುಖ್ ಖಾನ್ ತರವೇ ಅವರ ಮಗಳು ಸುಹಾನ ಖಾನ್ (Suhana Khan) ಹಾಗೂ ಆರ್ಯನ್ ಖಾನ್ (Aryan Khan) ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ (Trend) ಆಗಿದ್ದಾರೆ. ಇವರಿಬ್ಬರೂ ಒಂದಲ್ಲ ಒಂದು ವಿಷಯಕ್ಕೆ ಟ್ರೋಲ್ (Troll) ಆಗುತ್ತಿರುತ್ತಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ (Active) ಇರುವ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ತಮ್ಮ ಮಕ್ಕಳ ಫೋಟೋ ಹಾಗೂ ಪೋಸ್ಟ್ ಗಳಿಗೂ ಕೂಡ ಕಮೆಂಟ್ ಮಾಡುತ್ತಾರೆ. ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಈಗಾಗಲೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಸಾಕಷ್ಟು ಹಾಟ್ (Hot) ಹಾಗೂ ಬೋಲ್ಡ್ (Bold) ಆಗಿರುವಂತಹ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ.

ಇತ್ತೀಚಿಗೆ ಸುಹಾನಾ ಖಾನ್ ಹಂಚಿಕೊಂಡಿದ್ದ ಫೋಟೋ ಒಂದಕ್ಕೆ ಶಾರುಖ್ ಖಾನ್ ಕಮೆಂಟ್ ಮಾಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಹಾನ ಖಾನ್ ಇತ್ತೀಚೆಗೆ ದುಬೈನಲ್ಲಿ ನಡೆದ ಪಾರ್ಟಿಯಲ್ಲಿ ಸಕ್ಕತ್ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಈ ಸಮಯದಲ್ಲಿ ಸಾಕಷ್ಟು ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಶೇರ್ ಮಾಡಿದ್ದಾರೆ.

ಇನ್ನು ಈ ಫೋಟೋಗೆ ಕಮೆಂಟ್ ಮಾಡಿದ ಶಾರುಖ್ ತುಂಬಾ ಮುದ್ದಾದ ಮಗು ಎಂದು ಹೇಳಿದ್ದಾರೆ, ಜೊತೆಗೆ ಮನೆಯಲ್ಲಿ ಧರಿಸುವ ಪೈಜಾಮಕ್ಕಿಂತ ಇದು ವಿಭಿನ್ನವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಗಳು ಡ್ರೆಸ್ ಬಗ್ಗೆ ನಟ ಶಾರುಖ್ ಖಾನ್ ಕಮೆಂಟ್ ಮಾಡಿರೋದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಗಳು ಮನೆಯಲ್ಲಿ ಹೇಗೆ ಇರ್ತಾರೆ ಅನ್ನೋದನ್ನ ಶಾರುಖ್ ಕಾಮೆಂಟ್ ಮೂಲಕವೇ ತಿಳಿಸಿದ್ದಾರೆ.

ಇನ್ನು ಅಭಿಮಾನಿಗಳು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಶಾರುಖ್ ನೇರವಾಗಿ ಉತ್ತರ ನೀಡಿದ್ದಾರೆ ಪಠಾಣ್ ರಿಲೀಸ್ ಬಳಿಕ ಏನು ಮಾಡುತ್ತೀರಾ ಎಂದು ಕೇಳಿದರೆ ಶಾರುಖ್ ಮಕ್ಕಳೊಂದಿಗೆ ಮನೆಯಲ್ಲಿ ಹರಟೆ ಹೊಡೆಯುತ್ತೇನೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಶಾರುಖ್ ಖಾನ್ ತಮ್ಮ ಪರಿವಾರದ ಜೊತೆಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರಂತೆ. ಆದರೂ ಸಿನಿಮಾದಲ್ಲಿ ಇದೀಗ ಹೆಚ್ಚು ಬ್ಯುಸಿ ಆಗಿರುವ ನಟ ಶಾರುಖ್ ಶೂಟಿಂಗ್ ನಲ್ಲಿ ಹೆಚ್ಚು ಸಮಯ ಕಳೆಯುವಂತೆ ಆಗಿದೆ.

Leave a Reply

Your email address will not be published. Required fields are marked *