ಇದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿರುವ ಧಾ-ರು-ಣ ಘಟನೆ. ಪೊಲೀಸರು ಈ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದಾಗ ನಿಜಾಂಶ ತಿಳಿದು ಬಂದಿದೆ. ಅದು ಸಾಮಾನ್ಯ ವ್ಯಕ್ತಿಯು ಅಲ್ಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಹೌದು ಆತ ಪೊಲೀಸ್ ಪೇದೆ ಎಂದು ವರದಿಯಾಗಿದೆ. ಆಸ್ತಿಯ ಸಲುವಾಗಿ ಗಂಡ ಹೆಂಡತಿಯರ ನಡುವೆ ಜಗಳ ಆಗಿತ್ತು. ಇದೇ ಜಗಳ ತಾರಕಕ್ಕೆ ಹೋಗಿ ಹೆಂಡತಿಯನ್ನು ಹ-ತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಪತ್ನಿಯನ್ನು ಹ-ತ್ಯೆ ಮಾಡಿದ ವ್ಯಕ್ತಿ ಯತೆಂದ್ರ ಕುಮಾರ್ ಯಾದವ್ ಎಂದು ಪೊಲೀಸರು ಗುರುತಿಸಿದ್ದಾರೆ. ಹ-ತ್ಯೆ ಮಾಡಿದ ನಂತರ ತನ್ನ ಮೂರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಆತ ಜಾಗದಿಂದ ಪರಾರಿಯಾಗಿದ್ದಾನೆ. ಯತೆಂದ್ರ ಕುಮಾರ್ ಯಾದವ್ ತನ್ನ ಪತ್ನಿ ಸರೋಜಾ ಯಾದವ್ ಳನ್ನು ಶಿಕೋಹಾಬಾದ್ ನಲ್ಲಿರುವ ತನ್ನ ಮನೆಯಲ್ಲಿಯೇ ಹ-ತ್ಯೆ ಮಾಡಿದ್ದಾನೆ ಕೃ-ತ್ಯ ಎಸಗಿ ಪರಾರಿಯಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಆರೋಪಿ ಯತೆಂದ್ರ ಕುಮಾರ್ ಯಾದವ್ ಆವಪುರ ಗ್ರಾಮದವರು. ಮಾರ್ಚ್ 2020ರಲ್ಲಿ ಪೊಲೀಸ್ ಹುದ್ದೆಗೆ ಆತ ಆಯ್ಕೆಯಾಗಿದ್ದ. ಅದಕ್ಕೂ ಮೊದಲು ಮಧುರದಲ್ಲಿ ಈ ವ್ಯಕ್ತಿಯ ವಿರುದ್ಧ ಪ್ರಕರಣ ಒಂದು ದಾಖಲಾಗಿತ್ತು. ಹಾಗಾಗಿ ಆರು ತಿಂಗಳ ಕಾಲ ಪೊಲೀಸ್ ಕೆಲಸದಿಂದ ಅಮಾನತ್ತುಗೊಳಿಸಲಾಗಿತ್ತು.
ಯಾದವ್ ಒಬ್ಬ ಮಹಿಳೆಯನ್ನ ಮದುವೆಯಾಗಲು ಒತ್ತಾಯಿಸಿ ಆಕೆಯನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ನಂತರ ಮಹಿಳೆ ಹೇಳಿಕೆಯನ್ನ ಪಡೆದು ಈ ಆರೋಪವನ್ನು ಕೈ ಬಿಡಲಾಯಿತು. ನಂತರ ವಿವಾಹ ಇಬ್ಬರಿಗೂ ಒಪ್ಪಿಗೆಯಾಗಿದೆ ಎಂದು ಕೂಡ ಮಹಿಳೆ ತಿಳಿಸಿದ್ದಳು. ಆದರೆ ಯಾದವ್ ಮಾತ್ರ ಆ ಮಹಿಳೆಯೊಂದಿಗೆ ಅ-ಕ್ರ-ಮ ಸಂ-ಬಂ-ಧ ಹೊಂದಿದ್ದ.
ತನ್ನ ಪ್ರೇಮಿಯ ಜೊತೆಗೆ ಇರಲು ತನ್ನ ಮನೆಯನ್ನು ಮಾರಾಟ ಮಾಡಲು ಯಾದವ್ ನಿರ್ಧರಿಸಿದ್ದ. ಆದರೆ ಆರೋಪಿಯು ಮೃ-ತ ಮಹಿಳೆಯ ಜೊತೆ ಅಂದರೆ ತನ್ನ ಪತ್ನಿ ಸರೋಜಾ ಜೊತೆ ಮನೆ ಮಾರಾಟ ಮಾಡುವುದಕ್ಕಾಗಿ ಆಗಾಗ ಜಗಳ ಆಡುತ್ತಿದ್ದ. ಹೆಂಡತಿಗೆ ಒಪ್ಪಿಗೆ ಕೊಡುವಂತೆ ಒತ್ತಡ ಹೇರಿದ ಆದರೆ ಆಕೆ ಒಪ್ಪಲಿಲ್ಲ. ಇದೇ ಸಿಟ್ಟಿನಿಂದ ಸರೋಜಾಳನ್ನು ಕೊಂ-ದಿದ್ದಾನೆ ಎನ್ನಲಾಗಿದೆ.
ಯಾದವ್ ನಿರ್ಮಿಸಿದ ಹೊಸ ಮನೆ ಸರೋಜಾ ಅವರ ಹೆಸರಿನಲ್ಲಿ ಇತ್ತು. ಈ ಆಸ್ತಿಯ ಮೌಲ್ಯ ಸುಮಾರು 40 ಲಕ್ಷ ರೂಪಾಯಿ. ತನ್ನ ಪ್ರೇಮಿಯ ಜೊತೆ ಇರುವುದಕ್ಕಾಗಿ ಯಾದವ್ ಈ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದ ಹಾಗಾಗಿ ಸರೋಜಾಳ ಬಳಿ ಸಹಿ ಹಾಕುವಂತೆ ಕೇಳುತ್ತಿದ್ದ. ಇದೀಗ ಯತೆಂದ್ರ ಯಾದವ್ ಹಾಗೂ ಆತನ ಮಕ್ಕಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಹ-ತ್ಯೆಗೆ ಒಳಗಾದ ಸರೋಜಾಳ ತಂದೆ ರಾಮಪ್ರಕಾಶ್ ನಾವು ಶನಿವಾರದಿಂದಲೂ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಯಾದವ್ 2ನೇ ಮದುವೆಯಾಗಲು ಬಯಸಿದ್ದರಿಂದ ನನ್ನ ಮಗಳು ಸಿಕ್ಕಾಪಟ್ಟೆ ಸಂಕಷ್ಟಕ್ಕೆ ಒಳಗಾಗಿದ್ದಳು. ಭಾನುವಾರ ರಾತ್ರಿ ಯತೆಂದ್ರ ನನ್ನ ಮಗ ಗೋಲುರಾಮ್ ಗೆ ಕರೆ ಮಾಡಿ ಸರೋಜಾ ಪ್ರಾ-ಣ ಬಿಟ್ಟಿರುವುದಾಗಿ ತಿಳಿಸಿದ್ದಾನೆ. ಕೂಡಲೆ ಪೊಲೀಸರಿಗೆ ತಿಳಿಸಿ ನಾವು ಸರೋಜಾಳ ಶ-ವವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ ಎಂದು ರಾಮಪ್ರಕಾಶ್ ಹೇಳಿದ್ದಾರೆ.