ನಾನು ಕಂಬಳ ನೋಡೋಕೆ ಹೋಗಿದ್ದು, ಯಾರೋ ಬಂದು ಎದೆಗೆ ಕೈ ಹಾಕ್ತಾನೆ, ಸುಮ್ನೆ ಇರಬೇಕಾ ಸರ್? ಕಂಬಳದಲ್ಲಿ ನಡೆದ ಘಟನೆಗೆ ಸ್ಪಷ್ಟನೆ ನೀಡಿದ ನಟಿ ಸಾನ್ಯಾ ಐಯ್ಯರ್!!

ಸುದ್ದಿ

ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ ದಕ್ಷಿಣ ಕನ್ನಡಕ್ಕೆ ಕಂಬಳ ನೋಡಲು ಹೋದಾಗ ಒಬ್ಬ ಕೂಡಿದ ಯುವಕ, ಸಾನಿಯಾ ಹಾಗೂ ಅವರ ಸ್ನೇಹಿತೆಯರ ಮೇಲೆ ಹ-ಲ್ಲೆ ಮಾಡಿದ್ದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಸಾನಿಯಾ ಅಯ್ಯರ್ ಹೇಳಿದ್ದೇನು ಗೊತ್ತಾ? ಘಟನೆಯ ಹನ್ನೆಲೆಯನ್ನು ನೋಡುವುದಾದರೆ, ಸಾನಿಯಾ ಅಯ್ಯರ್ ಅವರು ದಕ್ಷಿಣ ಕನ್ನಡಕ್ಕೆ ಜನವರಿ 29ಕ್ಕೆ ಕಂಬಳ (Kambala) ಕ್ಕೆ ಅತಿಥಿಯಾಗಿ ಹೋಗಿದ್ದರು.

ಕಂಬಳವನ್ನು ನೋಡಿ ಸಾನಿಯಾ ಅಯ್ಯರ್ ಹಾಗೂ ಅವರ ಸ್ನೇಹಿತೆಯರು ವಸತಿಗೆ ಹಿಂತಿರುಗಿದ್ದಾರೆ. ಬಳಿಕ ರಾತ್ರಿ ಮತ್ತೆ ಸ್ನೇಹಿತೆಯ ಜೊತೆ ಕಂಬಳ ನೋಡುವುದಕ್ಕೆ ಹೋಗಿದ್ದಾರೆ ಆಗ ಕುಡಿದ ಯುವಕನೊಬ್ಬ ಸಾನಿಯಾ ಅಯ್ಯರ್ ಅವರ ಸ್ನೇಹಿತೆಯ ಮೇಲೆ ಬಿದ್ದು ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಇದರಿಂದ ಭಯಗೊಂಡ ಸಾನಿಯಾ ಅಯ್ಯರ್ ಹಾಗೂ ಆಕೆಯ ಸ್ನೇಹಿತರು ಕಿರುಚಿಕೊಂಡಿದ್ದಾರೆ. ಆಗ ಕಂಬಳ ನೋಡಲು ಬಂದಿದ್ದ ಜನ ಒಟ್ಟಾಗಿದ್ದಾರೆ. ಆ ಸಂದರ್ಭದಲ್ಲಿ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿ ಓಡಿ ಪರಾರಿಯಾಗಿದ್ದಾನೆ.

ಸಾನಿಯಾ ಹೇಳಿದ್ದೇನು? “ಅತ್ಯಂತ ಅದ್ಭುತವಾಗಿ ಕಂಬಳ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಾನು ನನ್ನ ಸ್ನೇಹಿತೆಯರ ಜೊತೆ ಅತಿಥಿಯಾಗಿ ಹೋಗಿದ್ದೆ. ಕಂಬಳ ಕಾರ್ಯಕ್ರಮ ಮುಗಿಸಿ ಹಿಂತಿರುಗಿದೆವು. ಕಂಬಳ ರಾತ್ರಿಯಿಡೀ ನಡೆಯುತ್ತೆ. ಕಾಂತಾರ ಸಿನಿಮಾ ಆದ ನಂತರವಂತೂ ಸಾಕಷ್ಟು ಬೇರೆ ಬೇರೆ ಉರಿಂದಲು ಕೂಡ ಕಂಬಳ ನೋಡುವುದಕ್ಕೆ ಜನ ಬರುತ್ತಾರೆ.

ನಾವು ರಾತ್ರಿ ಆಯೋಜಕರಿಗೆ ಹೇಳದೆ ಕಂಬಳವನ್ನು ಮತ್ತೊಮ್ಮೆ ನೋಡೋಣ ಎಂದು ಸ್ಥಳಕ್ಕೆ ಹೋದೆವು. ಎಲ್ಲರಂತೆ ನಿಂತು ನೋಡುತ್ತಿದ್ದೆವು. ಒಮ್ಮೆ ಅಲ್ಲಿಗೆ ಹೋಗಿ ಹಿಂತಿರುಗುವ ಉದ್ದೇಶ ನಮ್ಮದಾಗಿತ್ತು. ಆದರೆ ಎಲ್ಲಿಂದಲೋ ಬಂದ ವ್ಯಕ್ತಿ ನನ್ನ ಸ್ನೇಹಿತೆಯರ ಮೇಲೆ ಎರಗಿದ. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದೇ ಗೊತ್ತಾಗಲಿಲ್ಲ. ಜೋರಾಗಿ ಕಿರುಚಿಕೊಂಡೆವು.

ಜನರೆಲ್ಲಾ ಸೇರಿದರು. ವ್ಯಾಲೆಂಟಿಯರ್ ಆಗಿದ್ದ ಹುಡುಗರು ನಮ್ಮ ರಕ್ಷಣೆಗೆ ಬಂದರು. ನಾವು ಅಲ್ಲಿದ್ದಿದ್ದು ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ಬರುವಷ್ಟರಲ್ಲಿ ಆ ವ್ಯಕ್ತಿ ಜನರ ಮಧ್ಯದಿಂದ ತಪ್ಪಿಸಿಕೊಂಡ. ಆ ಸಮಯದಲ್ಲಿ ನಾನು ವಾಯ್ಸ್ ರೈಸ್ ಮಾಡಿದೆ. ಆಯೋಜಕರು ಬಂದು ನಮ್ಮನ್ನು ಸೇಫ್ ಮಾಡಿ ಕರೆದುಕೊಂಡು ಹೋದರು. ಒಬ್ಬ ಹುಡುಗಿಯ ಮೇಲೆ ಹೀಗೆ ಆ-ಕ್ರ-ಮಣ ಆದರೆ ನಾವು ಸುಮ್ಮನಿರಬೇಕ? ಹುಡುಗಿಯರು ಸುಮ್ಮನಿದ್ದರೆ ಇಂಥ ಪುಂ-ಡರು ಹೆಚ್ಚಾಗೋದು. ಹಾಗಾಗಿ ನಮಗೆ ಇಂದು ಸ್ವಾತಂತ್ರ್ಯ ಇಲ್ಲದ ಹಾಗಾಗಿದೆ.

ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಯಾರೋ ಬಂದು ನಮ್ಮ ಎ-ದೆ ಮುಟ್ಟುತ್ತಾನೆ, ಬ್ಯಾಕ್ ಮುಟ್ಟುತ್ತಾನೆ ಅಂದ್ರೆ ಧ್ವನಿ ಎತ್ತದೆ ಸುಮ್ಮನೆ ಇರಬೇಕಾ? ನಾವು ಸುಮ್ಮನಿದ್ದರೆ ಇಂತಹ ಯುವಕರು ಇನ್ನಷ್ಟು ಹುಟ್ಟಿಕೊಳ್ಳುತ್ತಾರೆ” ಎಂದು ಸಾನಿಯಾ ಅಯ್ಯರ್ ತಮ್ಮ ಹತಾಶೆ, ಕೋಪವನ್ನು ಹೊರ ಹಾಕಿದ್ದಾರೆ. ನಿಜಕ್ಕೂ ಹೆಣ್ಣುಮಕ್ಕಳಿಗೆ ಅಷ್ಟು ಮಾತ್ರ ಸೇಫ್ಟಿ ಅನ್ನೋದು ನಮ್ಮ ಸಮಾಜದಲ್ಲಿ ಇಲ್ಲದಂತೆ ಆಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತೆ.

Leave a Reply

Your email address will not be published. Required fields are marked *