ತಾವು ಮಾಡಿದ ತಪ್ಪನ್ನು ಮುಚ್ಚಿಡಲು ಹರಸಾಹಸ ಪಡುತ್ತಾರೆ. ಕೆಲವೊಮ್ಮೆ ತಮ್ಮ ಮುಖವಾಡಗಳು ಬೆಳಕಿಗೆ ಬರುತ್ತದೆ ಎಂದು ಹೆದರಿ, ಜೀವವನ್ನು ಕಳೆದುಕೊಳ್ಳುವವರು ಇದ್ದಾರೆ. ಇಂತಹದ್ದೇ ಘಟನೆಯೊಂದು ಶ್ರೀಕಾಕುಳಂ ಜಿಲ್ಲೆಯಲ್ಲೂ ನಡೆದಿದೆ. ಶ್ರೀಕಾಕುಳಂ ಜಿಲ್ಲೆಯ ಲಾವೇರು ಮಂಡಲ ಕೇಶವರಾಯನಿಪಾಲೇನಿಯದ 32 ವರ್ಷದ ಬೋನೇಲ ಪ್ರಿಯಾಂಕಾ ಅಲಿಯಾಸ್ ಅಂಕಮ್ಮ ಹಾಗೂ 30 ವರ್ಷದ ಬೋನೇಲ ಸಂತೋಷ್ ಕೀ’ಟನಾಶಕ ಕುಡಿದು ಆತ್ಮ- ಹತ್ಯೆಗೆ ಯತ್ನಿಸಿದ್ದಾರೆ.
ಇಬ್ಬರಲ್ಲಿ ಪ್ರಿಯಾಂಕಾ ಮೃ’ತಪಟ್ಟರೆ, ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಸಾ-ವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರಿಬ್ಬರೂ ಬದುಕನ್ನು ಮುಗಿಸಲು ಯೋಜನೆ ರೂಪಿಸಲು ಕಾರಣವಾಗಿದ್ದು ಅ’ನೈತಿಕ ಸಂಬಂಧ. ಅಂದಹಾಗೆ, ಪ್ರಿಯಾಂಕಾ ಹನ್ನೆರಡು ವರ್ಷಗಳ ಹಿಂದೆ ಸೂರ್ಯನಾರಾಯಣ ಅವರನ್ನು ವಿವಾಹವಾದರು.
ಸೂರ್ಯನಾರಾಯಣ ಖಾಸಗಿ ಕಂಪನಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಪ್ರಿಯಾಂಕಾ ಸುತ್ತಮುತ್ತಲಿನ ಗ್ರಾಮಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.ಈ ದಂಪತಿಯದ್ದು ಮೂವರು ಮಕ್ಕಳಿರುವ ಮುದ್ದಾದ ಕುಟುಂಬ. ಮೂವರೂ ಶಾಲೆಗೆ ಹೋಗುತ್ತಿದ್ದರು. ಹೀಗಿರುವಾಗ ಪ್ರಿಯಾಂಕಾ ಮೂರು ವರ್ಷಗಳ ಹಿಂದೆ ಬೋನೇಲ ಸಂತೋಷ್ ಎಂಬ ಆಟೋ ಚಾಲಕನನ್ನು ಭೇಟಿಯಾಗಿದ್ದರು. ಅವರ ಪರಿಚಯವು ಕೊನೆಗೆ ಅ’ನೈತಿಕ ಸಂಬಂಧವಾಗಿ ಮಾರ್ಪಟ್ಟಿದೆ.
ಆಕೆ ಮೂರು ಮಕ್ಕಳ ತಾಯಿ, ತನಗಿಂತ ದೊಡ್ಡವಳು ಎಂದು ತಿಳಿದಿದ್ದರೂ ಕೂಡ ಸಂತೋಷ್ ಅವಳೊಂದಿಗೆ ಸಂಬಂಧ ಹೊಂದಲು ಬಯಸಿದ್ದನು. ಆದರೆ ಮೋಹಕ್ಕೆ ಪ್ರಿಯಾಂಕಾಳು ತನಗೆ ಮೂವರು ಮಕ್ಕಳಿದ್ದಾರೆ ಎನ್ನುವುದನ್ನು ಮರೆತಿದ್ದಳು. ಕೆಲ ವರ್ಷಗಳಿಂದ ಇವರಿಬ್ಬರು ಗುಟ್ಟಾಗಿ ಅ’ನೈತಿಕ ಸಂಬಂಧ ಹೊಂದಿದ್ದ ವಿಚಾರವು ಪತಿ ಸೂರ್ಯನಾರಾಯಣನಿಗೆ ತಿಳಿಯಿತು.
ಹೀಗಾಗಿ ಪತ್ನಿಗೆ ಅವಮಾನ ಮಾಡಿದ್ದು, ಆ ಸಂಬಂಧದಿಂದ ದೂರ ಉಳಿಯುವಂತೆ ಹೇಳಿದ್ದ. ಆದರೆ ಆಕೆಯ ನಡುವಳಿಕೆ ಬದಲಾಗದ ಕಾರಣ ಗ್ರಾಮದ ಹಿರಿಯರ ಮುಂದೆ ಪಂಚಾಯ್ತಿಯನ್ನೂ ಕರೆದಿದ್ದನು. ಈ ಪಂಚಾಯತಿಯಲ್ಲಿ ಅವರಿಬ್ಬರಿಗೂ ಛೀಮಾರಿ ಹಾಕಲಾಗಿತ್ತು. ಇದರಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎಷ್ಟೇ ಹೇಳಿದರೂ ಪ್ರಿಯಾಂಕಾ ಮತ್ತು ಸಂತೋಷ್ ಬದಲಾಗಿಲ್ಲ, ಬೇರ್ಪಡಿಸಲು ಸಾಧ್ಯವಾಗಲಿಲ್ಲ.
ಹೀಗಿರುವಾಗ ತಮ್ಮ ಸಂಬಂಧಕ್ಕೆ ಎಲ್ಲವೂ ಅಡ್ಡಿಯಾಗುತ್ತಿದೆ ಎಂದು ಭಾವಿಸಿ, ಅವರು ಒಟ್ಟಿಗೆ ಸಾಯಲು ನಿರ್ಧರಿಸಿ, ಕೇಶವರಾಯನಿಪಾಲೆಂನಿಂದ ಚಿಲಕಪಾಲೆಂ ಹೋಗಿದ್ದಾರೆ. ಅಲ್ಲೇ ಇಬ್ಬರೂ ಸಮೀಪದ ತೋಟಕ್ಕೆ ತೆರಳಿ ಕೀ’ಟನಾಶಕ ಸೇವಿಸಿದ್ದಾರೆ. ಈ ವಿಷಯವನ್ನು ಗ್ರಾಮದ ಸ್ನೇಹಿತರು ಹಾಗೂ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಿದ್ದು, ನಾವು ಒಟ್ಟಿಗೆ ಬದುಕುವುದು ಅವರಿಗೆ ಇಷ್ಟವಿಲ್ಲ.
ಅದಕ್ಕೇ ನಾವು ಸಾ-ಯುತ್ತೇವೆ. ಸಾವಿನಲ್ಲಿಯೂ ಒಟ್ಟಿಗೆ ಇರುತ್ತೇವೆ ಎಂದು ಫೋನ್ ಕಟ್ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು ತರಾತುರಿಯಲ್ಲಿ ತೋಟಗಳಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ತೋಟದಲ್ಲಿಯೇ ಇದ್ದ ಈ ಇಬ್ಬರೂ ಆಗಲೇ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ. ಅದೇ ದಿನ ರಾತ್ರಿ ಶ್ರೀಕಾಕುಳಂನ ರಿಮ್ಸ್‌ಗೆ ಕರೆದೊಯ್ಯುವಾಗ ಪ್ರಿಯಾಂಕಾ ಸಾ-ವನ್ನಪ್ಪಿದ್ದಾರೆ.
ಸಂತೋಷ್ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಪ್ರಿಯಾಂಕಾ ಮೃ-ತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಹೊರ ಠಾಣೆ ಪೊಲೀಸರ ಮಾಹಿತಿ ಮೇರೆಗೆ ಎಚ್ಚರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ದುರಂತ ಘಟನೆಯಿಂದ ಮೂರು ಮಕ್ಕಳು ತಾಯಿಯಿಲ್ಲದೇ ಅನಾಥರಾಗಿರುವುದು ನಿಜಕ್ಕೂ ವಿಪರ್ಯಾಸ.