ಸಿನಿಮಾ ತಾರೆಯರು ಅಂದ್ರೆ ಅಭಿಮಾನಿಗಳಿಗೆ ದೇವರ ಸಮಾನ. ಸಾಕಷ್ಟು ಜನರು ತಮ್ಮ ನೆಚ್ಚಿನ ನಟ ನಟಿಯರನ್ನ ದೇವರು ಎಂದೇ ಭಾವಿಸುತ್ತಾರೆ. ಹಾಗಾಗಿ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವರು ಅಭಿಮಾನ ವಿಚಿತ್ರವಾಗಿರುತ್ತದೆ. ಅಭಿಮಾನದ ಹೆಸರಿನಲ್ಲಿ ಏನೆಲ್ಲಾ ಸರಿ ತಪ್ಪುಗಳನ್ನ ಮಾಡುವವರು ಇದ್ದಾರೆ. ಇತ್ತೀಚಿಗೆ ಸಿನಿಮಾರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವ ಆಗಿರುವುದು ಅತಿರೇಕ ಎನಿಸುವ ಅಭಿಮಾನದಿಂದ ಅಂದ್ರೆ ತಪ್ಪಾಗಲ್ಲ. ಅಭಿಮಾನಿಗಳಿಂದ ಸಿನಿಮಾ ಎಷ್ಟು ಓಡುತ್ತೋ, ಅಷ್ಟೇ ಅಭಿಮಾನದ ಹೆಸರಿನಲ್ಲಿ ಫ್ಯಾನ್ ವಾರ್ ಕೂಡ ನಡೆಸುತ್ತಾರೆ.
ಆದರೆ ಕೆಲವರಂತೂ ನಿಜವಾಗಿಯೂ ಸ್ಟಾರ್ ನಟ ನಟಿಯರನ್ನ ಬಹಳ ಅಭಿಮಾನದಿಂದಲೇ ನೋಡುತ್ತಾರೆ, ಅವರನ್ನ ಗೌರವಿಸುತ್ತಾರೆ. ಕೆಲವರಿಗೆ ತಮ್ಮ ನೆಚ್ಚಿನ ನಟ ನಟಿ (Star stress) ಯರ ಬಗ್ಗೆ ಹುಚ್ಚು ಪ್ರೇಮ ಇರುತ್ತೆ. ಪ್ರೀತಿ ತನ್ನ ನೆಚ್ಚಿನ ನಟನ ಮೇಲಿನ ಅತಿಯಾದ ಪ್ರೀತಿ ಹಾಗೂ ಅಭಿಮಾನದಿಂದ ಆ ಮಹಿಳಾ ಅಭಿಮಾನಿ ಮಾಡಿದ್ದೇನು ಗೊತ್ತಾ? ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತೆ.
ಬಹುಶಃ ಈವರೆಗೆ ಇಂತಹ ಸಾಹಸವನ್ನು ಯಾವ ಅಭಿಮಾನಿಯೂ ಮಾಡಿರಲಿಕ್ಕಿಲ್ಲ. ಮುಂಬೈನ ಮಲಬಾರಿನ ನಿವಾಸಿ ನಿಶಾ ಪಾಟೀಲ್ (Nisha Patil). ಇವರು ಮುಂಬೈ (Mumbai) ನಲ್ಲಿ ಬರೋಬ್ಬರಿ 10 ಕೋಟಿ ಬೆಲೆಯ ಮನೆಯಲ್ಲಿ ವಾಸವಾಗಿದ್ದರು. ಇವರ ಜೊತೆಗೆ ಇವರ ಸಹೋದರರು ವಾಸವಾಗಿದ್ದಾರಂತೆ. ಅಂದ ಹಾಗೆ ನಿಶಾ ಪಾಟೀಲ್ ಈಗ ಬದುಕಿಲ್ಲ. ಆದರೆ ಸಾ-ಯುವುದಕ್ಕೂ ಮುನ್ನ ತಮ್ಮ ಒಟ್ಟು 73 ಕೋಟಿ ಮೌಲ್ಯದ ಆಸ್ತಿಯನ್ನ ನೆಚ್ಚಿನ ನಟನ ಹೆಸರಿಗೆ ಬರೆದು ಸಾ-ವ-ನ್ನಪ್ಪಿದ್ದಾರೆ.
ಅದೃಷ್ಟವಂತ ನಟ ಯಾರು ಗೊತ್ತಾ? ಬಾಲಿವುಡ್ ನ ಫೇಮಸ್ ಸ್ಟಾರ್, ಕೆ ಜಿ ಎಫ್ ನ ಅಧಿಕ ಸಂಜಯ್ ದತ್ (Sanjay datt). ಸಂಜಯ್ ದತ್ ಅವರು ಬಾಲಿವುಡ್ (Ballywood) ನಲ್ಲಿ ಮಾತ್ರವಲ್ಲ ದೇಶಾದ್ಯಂತ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಅವರ ಮುನ್ನ ಬಾಯಿ ಎಂಬಿಬಿಎಸ್ (Munna bai MBBS) ಸಿನಿಮಾದಿಂದ ಹಿಡಿದು ಇಲ್ಲಿಯವರೆಗೆ ಸಾಕಷ್ಟು ಹಿಟ್ ಸಿನಿಮಾಗಳನ್ನ ಜನರು ಈಗಲೂ ಮೆಚ್ಚಿಕೊಳ್ಳುತ್ತಾರೆ. ಇಂತಿಪ್ಪ ಸಂಜಯ್ ದತ್ ಅವರ ಹೆಸರಿಗೆ ಅವರ ಅಭಿಮಾನಿ ಕೋಟ್ಯಂತರ ಆಸ್ತಿಯನ್ನು ಬರೆದಿಟ್ಟು ಸಾ-ವನ್ನಪ್ಪಿದ್ದಾರೆ.
ಅಷ್ಟೇ ಅಲ್ಲ ತಮ್ಮ ಬ್ಯಾಂಕ್ ಲೋಕರ್ ನಲ್ಲಿ ಇದ್ದ ಲಕ್ಷಾಂತರ ಬೆಲೆಬಾಳುವ ಆಭರಣಗಳನ್ನು ಕೂಡ ಸಂಜಯ್ ದತ್ ಅವರ ಹೆಸರಿಗೆ ಆಕೆ ಬರೆದಿದ್ದರು. ಈ ಘಟನೆ ನಡೆದಿರುವುದು 2018ರಲ್ಲಿ. ಆದರೆ ಈಗ ಈ ಘಟನೆಯ ಬಗ್ಗೆ ಮತ್ತೊಂದಿಷ್ಟು ಚರ್ಚೆ ಆರಂಭವಾಗಿದೆ. ಏಕೆಂದರೆ ಈಗ ಜನರು ಅಭಿಮಾನದ ಹೆಸರಿನಲ್ಲಿ ತಮ್ಮ ಅಂಕೆ ಮೀರಿ ವರ್ತಿಸುತ್ತಾರೆ. ಅಭಿಮಾನ ಅಂದರೆ ಅಗ್ರಸ್ಸಿವ್ನೆಸ್ ಎನ್ನುವಂತೆ ಆಡುತ್ತಾರೆ. ಇಂಥವರ ನಡುವೆ ನಿಶಾ ಪಾಟೀಲ್ ನಂತಹ ಅಭಿಮಾನಿಗಳು ವಿಶೇಷವಾಗಿ ಕಾಣಿಸುತ್ತಾರೆ.
ಆದರೆ ಇಷ್ಟೊಂದು ಮೊತ್ತದ ಆಸ್ತಿಯನ್ನು ನಿಶಾ ಪಾಟೀಲ್ ಸಂಜಯ್ ದತ್ ಅವರ ಹೆಸರಿಗೆ ಬರೆದಿದ್ದರು ಕೂಡ ಅವರು ಆ ಹಣವನ್ನಾಗಲಿ ಆಭರಣಗಳನ್ನಾಗಲಿ ತೆಗೆದುಕೊಂಡಿಲ್ಲ. ಎಲ್ಲವನ್ನು ಆಕೆಯ ಸಹೋದರರಿಗೆ ಹಾಗೂ ಸಂಬಂಧ ಪಟ್ಟವರಿಗೆ ಹಿಂತಿರುಗಿಸಿದ್ದಾರೆ. ಆಕೆಯ ಆಸ್ತಿ ಬೇಡ ಅವರ ಅಭಿಮಾನ ಒಂದು ಇದ್ದರೆ ಸಾಕು ಎನ್ನುವಂತಹ ಸಂಜಯ್ ದತ್ ಕೂಡ ನಿಜಕ್ಕೂ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ.