ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅನ್ನೋದು ಎಲ್ಲರಿಗೂ ಗೊತ್ತು. ಸಲ್ಮಾನ್ ಖಾನ್ ಅಂತೂ ಯಾವಾಗ ಮದುವೆ ಆಗ್ತಾರೆ ಅಂತ ಅಭಿಮಾನಿಗಳು ಕೇಳಿ ಕೇಳಿ ಇದೀಗ ಸಲ್ಮಾನ್ ಖಾನ್ ಅವರ ಮದುವೆಯ ವಿಷಯ ಒಂದು ಜೋಕ್ ಆಗಿ ಪರಿವರ್ತನೆಯಾಗಿದೆ. ಯಾರಾದರೂ ಮಾತಿಗೆ ‘ಸಲ್ಮಾನ್ ಖಾನ್ ಮದುವೆ ಆದಂತೆ’ ಎಂದು ಗಾದೆ ಮಾತು ಹೇಳುವ ಮಟ್ಟಿಗೆ, ಸಲ್ಮಾನ್ ಖಾನ್ ಮದುವೆಯ ವಿಚಾರ ಗಾಸಿಪ್ ಆಗಿದೆ.
ಇತ್ತೀಚೆಗೆ ಸೌತ್ ಸ್ಟಾರ್ ನಟ ಪ್ರಭಾಸ್ ಅವರನ್ನು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಕ್ಕೆ ಸಲ್ಮಾನ್ ಖಾನ್ ಮದುವೆ ಆದ ನಂತರ ಎಂದು ತಮಾಷೆ ಮಾಡಿದ್ದರು. ಇನ್ನು ಇದೀಗ ಬ್ರಹ್ಮಚಾರಿ ಆಗಿರುವ ಸಲ್ಮಾನ್ ಖಾನ್ ಅವರಿಗೆ ಗರ್ಲ್ ಫ್ರೆಂಡ್ಸ್ ಇರಲಿಲ್ಲ ಎಂದೇನು ಇಲ್ಲ. ಕೆಲವು ಬಾಲಿವುಡ್ ಸ್ಟಾರ್ ನಟಿಯರು ಜೊತೆಗೆ ಸಾಕಷ್ಟು ಬಾರಿ ಡೇಟಿಂಗ್ ಕೂಡ ಮಾಡಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಸಂಗೀತ ಬಿಜಲಾನಿ ಕೂಡ ಒಬ್ರು.
ಹೌದು 90ರ ದಶಕದಲ್ಲಿ ಸಲ್ಮಾನ್ ಖಾನ್ ಹಾಗೂ ಸಂಗೀತ ಬಿಜಲಾನಿ ಡೇಟಿಂಗ್ ಮಾಡುತ್ತಿದ್ದರು. ಇನ್ನೇನು ಇವರಿಬ್ಬರೂ ಮದುವೆ ಆಗ್ತಾರೆ ಅನ್ನುವಷ್ಟರಲ್ಲಿ ಬ್ರೇಕ್ ಅಪ್ ಆಗಿ ಹೋಗಿತ್ತು. ಇತ್ತೀಚಿಗೆ ಸಲ್ಮಾನ್ ಖಾನ್ ಅವರ ಹುಟ್ಟು ಹಬ್ಬದ ಪಾರ್ಟಿಯನ್ನು ಗ್ರಾಂಡ್ ಆಗಿ ಮುಂಬೈನಲ್ಲಿ ಆಚರಿಸಲಾಗಿತ್ತು. ಈ ಸಮಯದಲ್ಲಿ ಬಾಲಿವುಡ್ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಅದರಲ್ಲಿಯೂ ಸೆಂಟರ್ ಆಫ್ ಅಟ್ರಾಕ್ಷನ್ ಎಂಬಂತೆ ಸಂಗೀತ ಬಿಜಲಾನಿ ಕೂಡ ಭಾಗವಹಿಸಿದ್ದರು. ಇನ್ನು ಸೌತ್ ನ ಬೆಡಗಿ ಪೂಜಾ ಹೆಗ್ಡೆ, ಕೂಡ ಸಲ್ಮಾನ್ ಖಾನ್ ಅವರ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಸಲ್ಮಾನ್ ಖಾನ್ ಅವರ ಜೊತೆಗೆ ಸಿನಿಮಾ ಒಂದರಲ್ಲಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದಾರೆ. ಶಾರುಖ್ ಖಾನ್, ಟಬು, ಸುನಿಲ್ ಶೆಟ್ಟಿ, ಜನೀಲಿಯ, ರಿತೇಶ್ ದೇಶ್ ಮುಖ, ಸೋನಾಕ್ಷಿ ಸಿನ, ಕಾರ್ತಿಕ್ ಆರ್ಯನ್, ಜಾನ್ವಿ ಕಪೂರ್ ಮೊದಲಾದವರು ಕೂಡ ಸಲ್ಮಾನ್ ಖಾನ್ ಅವರ ಬರ್ತಡೇ ಪಾರ್ಟಿಯ ಮೆರುಗನ್ನ ಹೆಚ್ಚಿಸಿದ್ದರು.
ಇನ್ನು ಸಲ್ಮಾನ್ ಖಾನ್ ಅವರ ಬರ್ತಡೇ ಪಾರ್ಟಿಗೆ ಸಂಗೀತ ಬಿಜಲಾನಿ ಆಗಮಿಸಿದ್ದು ವಿಶೇಷವಾಗಿತ್ತು. ಕಡು ನೀಲಿ ಬಣ್ಣದ ಮಿಂಚುವ ಶಾರ್ಟ್ ಬಾಡಿ ಕಾನ್ ಧರಿಸಿ ಸಂಗೀತ ಬಿಜಲಾನಿ ಮಿಂಚುತ್ತಿದ್ದರು. ಹೌದು ಸಲ್ಮಾನ್ ಖಾನ್ ಅವರ 57ನೇ ಹುಟ್ಟುಹಬ್ಬದ ಆಚರಣೆಗೆ ಸಂಗೀತ ವಿಜಲಾನಿ ಆಗಮಿಸಿದ್ದರು. ಸುಮಾರು 10 ವರ್ಷಗಳ ಕಾಲ ಇವರಿಬ್ಬರೂ ಡೇಟಿಂಗ್ ಮಾಡಿದ್ದಾರೆ.
ಸಂಗೀತ ಬಿಜಲಾನಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಮದುವೆ ಆಗಿದ್ದರು. ಇವರು ಬಳಿಕ ವಿ-ಚ್ಛೇ=ದ-ನ ತೆಗೆದುಕೊಂಡಿದ್ದಾರೆ. ಇನ್ನು ಹುಟ್ಟುಹಬ್ಬಕ್ಕೆ ಆಗಮಿಸಿದ ಮಾಜಿ ಪ್ರೇಯಸಿಯನ್ನ ಬಹಳ ಪ್ರೀತಿಯಿಂದ ಬೀಳ್ಕೊಟ್ಟರು ಸಲ್ಮಾನ್ ಖಾನ್. ಸಂಗೀತ ಬಿಜಿಲಾನಿ ಅವರನ್ನು ಪಾರ್ಟಿ ಮುಗಿದ ನಂತರ ಕಾರ್ ವರೆಗೂ ಸಲ್ಮಾನ್ ಖಾನ್ ಅವರೇ ಕರೆದುಕೊಂಡು ಹೋದರು.
ಜೊತೆಗೆ ಹಗ್ ಮಾಡಿ ಸಿಹಿ ಮುತ್ತನ್ನು ನೀಡಿ ಕಳುಹಿಸಿದರು ಇನ್ನು ಕಾರ್ ಡೋರ್ ಕೂಡ ತಾನೇ ಓಪನ್ ಮಾಡಿ ಸಂಗೀತ ಅವರನ್ನ ಕಳುಹಿಸಿಕೊಟ್ಟರು ತುಂಬಾನೇ ವೈರಲ್ ಆಗುತ್ತಿದೆ ನೆಟ್ಟಿಗರು ಈ ವಿಡಿಯೋ ನೋಡಿ ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ.
View this post on Instagram