PhotoGrid Site 1676883382293

ಎರಡನೇ ಹೆಂಡತಿಯನ್ನು ಮನೆಗೆ ಕರೆತಂದ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್! ಬೆಚ್ಚಿಬಿದ್ದ ಸಲ್ಮಾನ್ ಖಾನ್, ಹೇಳಿದ್ದೇನು ನೋಡಿ!!

ಸುದ್ದಿ

ಸಲ್ಮಾನ್ ಖಾನ್ ಅವರದ್ದು ಬಹಳ ದೊಡ್ಡ ಪರಿವಾರ. ಆದರೆ ಎಲ್ಲರೂ ಯಾವುದೇ ವೈಮನಸ್ಸು ಇಲ್ಲದೆ ಈಗಲೂ ಒಂದಾಗಿಯೆ ಇದ್ದಾರೆ. ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಸಲ್ಮಾ ಖಾನ್ ಅವರನ್ನು ಮದುವೆ ಆಗಿದ್ದರು. ನಂತರ ಅವರು ಬಾಲಿವುಡ್ ನಟಿ ಹಾಗೂ ಡ್ಯಾನ್ಸರ್ ಆಗಿದ್ದ ಹೆಲೆನ್ ಅವರನ್ನು ಮದುವೆ ಆಗುತ್ತಾರೆ. ಮದುವೆಯಾಗಿ ಹೆಲಿನ್ ಅವರನ್ನು ಮನೆಗೆ ಕರೆದುಕೊಂಡು ಬಂದ ಸಲೀಂ ಖಾನ್ ಹೆಲನ್ ಅವರನ್ನು ಮಕ್ಕಳ ಮುಂದೆ ಕೂರಿಸಿ ಹೇಳಿದ್ದೇನು ಗೊತ್ತಾ?

ಸಲೀಂ ಖಾನ್ ಅವರು ಸಲ್ಮಾ ಖಾನ್ ಅವರನ್ನ 1964 ರಲ್ಲಿ ವಿವಾಹವಾಗುತ್ತಾರೆ. ಈ ದಂಪತಿಗಳ ಮಕ್ಕಳು ಬಾಲಿವುಡ್ ನಟ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಅಲ್ವಿರಾ ಖಾನ್ ಈ ನಾಲ್ಕು ಜನ ಮಕ್ಕಳು ಹುಟ್ಟಿದ ನಂತರ 1981 ರಲ್ಲಿ ಹೆಲೆನ್ ಅವರನ್ನೂ ಸಲೀಂ ಮದುವೆಯಾಗುತ್ತಾರೆ. ಸಲೀಂ ಖಾನ್ ಹೆಲೆನ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದು. ಹೆಲೆನ್ ಹಾಗೂ ಸಲೀಂ ಖಾನ್ ಇಬ್ಬರು ಒಂದೇ ಸಿನಿಮಾದಲ್ಲಿ ವರ್ಕ್ ಮಾಡುತ್ತಿರುತ್ತಾರೆ.

ಆ ಸಂದರ್ಭದಲ್ಲಿ ಪ್ರೀತಿಸುತ್ತಾರೆ. ಸಲೀಂ ಗೆ ಮದುವೆಯಾಗಿ ಮಕ್ಕಳಿರುವ ವಿಚಾರ ಗೊತ್ತಿದ್ದರೂ ಕೂಡ ಹೆಲೆನ್ ಗೆ ಅವರ ಮೇಲೆ ಪ್ರೀತಿ ಆಗುತ್ತದೆ. ಆದ್ರೆ ಸಲೀಂ ಮದುವೆಯಾಗಿದ್ದರೂ ಕೂಡ ಹೆಲನ್ ಅವರನ್ನ ಪ್ರೀತಿಸಿ ನಂತರ ಅವರ ಕೈ ಬಿಡದೆ ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅತ್ಯುತ್ತಮ ನಟಿ ಹಾಗೂ ಡ್ಯಾನ್ಸರ್. 60 70ರ ದಶಕದಲ್ಲಿ ಸಿನಿಮಾ ರಂಗವನ್ನು ಆಳಿದ ನಟಿ.

ಅವರು ಸಿನಿಮಾದಲ್ಲಿ ಕೆಲಸ ಮಾಡುವಾಗ ಸಲೀಂ ಅವರನ್ನು ಭೇಟಿಯಾಗಿ ನಂತರ ಮದುವೆಯಾಗುತ್ತಾರೆ ಮನೆಗೆ ಕರೆದುಕೊಂಡು ಬಂದು ಮಕ್ಕಳೆಲ್ಲರೂ ನ ತೋರಿಸಿ ಜೊತೆಗೆ ಸಲ್ಮಾನ್ ಖಾನ್ ಅವರನ್ನು ಕೂರಿಸಿ ಇನ್ನೊಂದು ಮದುವೆಯಾಗಿರುವ ವಿಚಾರವನ್ನು ಹೇಳುತ್ತಾರೆ. ಹೆಲೆನ್ ಅವರು ಎಂತಹ ಪರಿಸ್ಥಿತಿಯಿಂದ ಬಂದವರು ಎನ್ನುವಂತದನ್ನ ವಿವರಿಸುತ್ತಾರೆ. ನಂತರ ಮಕ್ಕಳಿಗೆ ಸಲೀಂ ಹೀಗೆ ಹೇಳುತ್ತಾರೆ.

“ನೀವು ನಿಮ್ಮ ತಾಯಿಯನ್ನು ಪ್ರೀತಿಸಿದಷ್ಟು, ಇವಳನ್ನು ಪ್ರೀತಿಸುತ್ತೀರಿ ಎಂದು ನಾನು ನಿರೀಕ್ಷೆ ಮಾಡುವುದಿಲ್ಲ ಆದರೆ ಆಕೆಯ ಬಗ್ಗೆ ಗೌರವವಿರಲಿ”. ಎಂದು ಹೇಳುತ್ತಾರೆ. ಇತ್ತೀಚಿಗೆ ಸಲ್ಮಾ ಖಾನ್ ಹಾಗೂ ಸಲೀಂ ಖಾನ್ ಅವರ ಮಗ ಅರ್ಬಾಜ್ ದಿ ಇನ್ವಿನ್ಸಿಬಲ್ಸ್‌ನ ಎನ್ನುವ ಟಾಪ್ ಶೋ ಒಂದನ್ನು ನಡೆಸಿಕೊಡುತ್ತಾರೆ. ಇತ್ತೀಚಿನ ಸಂಚಿಕೆಯಲ್ಲಿ, ಅರ್ಬಾಜ್ ಅವರ ಸ್ಟೆಪ್ ಮದರ್ ಹೆಲೆನ್ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮದುವೆಯಾಗಿ ಬಂದಾಗ ತಂದೆ ಹೇಳಿದ ಮಾತುಗಳನ್ನು ನೆನಪಿಸಿಕೊಂಡರು. ಜೊತೆಗೆ ಹೆಲನ್ ಅವರ ಬಗ್ಗೆ ಅರ್ಬಾದ್ ತಮಗಿರುವ ಗೌರವ ಹಾಗೂ ಪ್ರೀತಿಯನ್ನು ಕೂಡ ಹೇಳಿಕೊಂಡಿದ್ದಾರೆ. ನಮ್ಮ ಕುಟುಂಬವನ್ನು ಈಗಲೂ ಒಟ್ಟಿಗೆ ಇರಿಸಿದ್ದಕ್ಕಾಗಿ ಹೆಲೆನ್‌ಗೆ ಧನ್ಯವಾದ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಮಾತನಾಡಿ ಸಲೀಂ ಖಾನ್ ಅವರ ಮನೆಯಲ್ಲಿ ತಮ್ಮ ಅನುಭವವನ್ನು ಕೂಡ ಶೇರ್ ಮಾಡಿದ್ದಾರೆ. ಮೊದಲು ಸಲ್ಮಾ ಖಾನ್ ಅವರನ್ನ ನೋಡಿದರೆ ಭಯವಾಗುತ್ತಿತ್ತು.

ಅವರು ಬಾಲ್ಕನಿ ಯಲ್ಲಿ ನಿಂತಿದ್ದರು ನಾನು ಅವರನ್ನು ನೋಡಿ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಅವರನ್ನು ಎದುರಿಸುವುದು ನನಗೆ ಕಷ್ಟವಾಗುತ್ತಿತ್ತು. ಎಂದು ಹೆಲೆನ್ ಹೇಳುತ್ತಾರೆ.ಸಲೀಂ ಖಾನ್ ಎರಡನೇ ಮದುವೆಯಾಗಿ ಬಂದರು ಕೂಡ ಸಲ್ಮಾನ್ ಖಾನ್ ಅಷ್ಟಾಗಿ ವಿರೋಧಿಸುವುದಿಲ್ಲ. ಮೊದಲು ಬೇಸರ ಎನಿಸಿದರು ನಂತರ ಹೆಲೆನ್ ಅವರ ಜೊತೆ ಸಲ್ಮಾ ಖಾನ್ ಚೆನ್ನಾಗಿಯೇ ಬರೆಯುತ್ತಾರೆ ಈಗಲೂ ಒಂದಾಗಿರುವ ಇವರ ಕುಟುಂಬ ಅಚ್ಚರಿ ಮೂಡಿಸುತ್ತದೆ.

ಇನ್ನು ಈ ಕುಟುಂಬದಲ್ಲಿ ಜನಿಸಿರುವ ಸಲ್ಮಾನ್ ಖಾನ್ ಮಾತ್ರ ಈಗಲೂ ಒಂಟಿಯಾಗಿದ್ದಾರೆ ಅಪ್ಪ ಎರಡು ಮದುವೆ ಆಗಿದ್ದರು ಮಗ ಒಂದು ಮದುವೆಯನ್ನು ಕೂಡ ಆಗಿಲ್ವಲ್ಲ ಅಂತ ಕೆಲವೊಮ್ಮೆ ಸಲ್ಮಾನ್ ಖಾನ್ ಅವರ ಬಗ್ಗೆ ಟೀಕಾ ಪ್ರಹಾರಗಳು ಕೂಡ ನಡೆಯುತ್ತವೆ. ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿ ಆಗಿರುವ ಸಲ್ಮಾನ್ ಖಾನ್, ಈಗಲೂ ಬ್ಯಾಚುಲರ್ ಲೀಸ್ಟ್ ನಲ್ಲಿ ಇದ್ದಾರೆ.

Leave a Reply

Your email address will not be published. Required fields are marked *