ಸ್ನೇಹಿತರೆ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನಗೆ ಪಾಠ ಹೇಳಿಕೊಡುತ್ತಿದ್ದ 52 ವರ್ಷದ ಶಿಕ್ಷಕನನ್ನೇ ಪ್ರೀತಿಸಿ ಮದುವೆಯಾಗಿದ್ದಾಳೆ. ಈ ಪ್ರೇಮ ವಿವಾಹ ನಮಗೆ ಮೊಗ್ಗಿನ ಮನಸ್ಸು ಸಿನಿಮಾವನ್ನು ನೆನಪಿಸುತ್ತೆ. ಈ ಸಿನಿಮಾದಲ್ಲಿ ಶಿಕ್ಷಕನನ್ನ ವಿದ್ಯಾರ್ಥಿನಿಯೊಬ್ಬಳು ಪ್ರೀತಿಸಿ ಪ್ರೇಮಪತ್ರ ನೀಡುತ್ತಾಳೋ ಅದೇ ರೀತಿ ಇಲ್ಲಿಯೂ ರಿಯಲ್ ಲೈಫ್ ನಲ್ಲಿ ನಡೆದಿದೆ. ಆದರೆ ಈ ಕಥೆ ಸ್ವಲ್ಪ ಮುಂದುವರೆದು ಇವರಿಬ್ಬರು ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ.
ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ ಇತ್ತೀಚೆಗೆ ಪಾಕಿಸ್ತಾನದಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತಿವೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ವಯಸ್ಸಿನ ಅಂತರ ಇರುವ ಪ್ರೇಮ ವಿವಾಹಗಳು ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿವೆ. 20 ವರ್ಷದ ಜೋಹ ನೂರ್ ಎನ್ನುವ ಹುಡುಗಿ 52 ವರ್ಷದ ಸಾಜಿದ್ ಅಲಿಯನ್ನ ಪ್ರೀತಿಸಿ ವಿವಾಹವಾಗಿದ್ದಾಳೆ.
ಇವರಿಬ್ಬರ ನಡುವೆ ಸುಮಾರು 32 ವರ್ಷಗಳ ಅಂತರವಿದೆ ಆದರೆ ಪ್ರೀತಿಗೆ ಇವೆಲ್ಲ ಯಾವ ಲೆಕ್ಕ ಬಿಡಿ. ಹಾಗಾಗಿ ಒಬ್ಬರನ್ನೊಬ್ಬರು ಇಷ್ಟಪಟ್ಟ ಮೇಲೆ ಇದೆಲ್ಲವನ್ನು ತಳ್ಳಿ ಮದುವೆಯಾಗುವುದೇ ಸೂಕ್ತ ಎಂದು ಈ ಜೋಡಿ ಭಾವಿಸಿದೆ ಹಾಗಾಗಿ ಇದೀಗ ಇಬ್ಬರು ಮದುವೆಯಾಗಿದ್ದು ಪಾಕಿಸ್ತಾನದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಜಿದ್ ಬಳಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡ ಜೋಹಾ ನೀವು ನನ್ನನ್ನ ಪ್ರೀತಿಸುತ್ತಿದ್ದರೆ ಮದುವೆಯಾಗಲೇಬೇಕು ನನಗೆ ನೀವಂದ್ರೆ ತುಂಬಾ ಇಷ್ಟ ನಿಮ್ಮನ್ನ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೇನೆ ಎಂದು ಒಂದು ವಾರಗಳ ಸಮಯ ನೀಡುತ್ತಾಳೆ. ಈ ಒಂದು ವಾರದ ಗ್ಯಾಪ್ ನಲ್ಲಿ ಜೋಹಳನ ಪ್ರೀತಿಸುವುದಕ್ಕೆ ಶುರು ಮಾಡುತ್ತಾರೆ ಸಾಜಿದ್.
ಆದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕಾರಣಕ್ಕಾಗಿ ಸಾಜಿದ್ ಹಾಗೂ ಜೋಹಾ ಅವರ ಸಂಬಂಧಿಕರು ಮನೆಯವರು ಕೋಪಗೊಳ್ಳುತ್ತಾರೆ ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸುವುದಿಲ್ಲ ಹಾಗಾಗಿ ಇಂತಹ ಹುಡುಗಿಯರು ನಿನ್ನ ಹಿಂದೆ ಬೀಳುತ್ತಾರೆ ಎಂದು ಹೇಳುತ್ತಾರೆ ಆದರೆ ಜೋಹಾ ನೂರ್ ಮಾತ್ರ ತಮ್ಮಿಬ್ಬರ ನಡುವೆ ಇರುವ ಪ್ರೀತಿಯ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಾಳೆ.
ಕೊನೆಗೆ ಮನೆಯವರ ವಿರೋಧದ ನಡುವೆಯೂ ಸಾಜಿದ್ ಹಾಗೂ ಜೋಹ ಇಬ್ಬರೂ ಮದುವೆಯಾಗುತ್ತಾರೆ ಇದೀಗ ಪ್ರೀತಿಯಿಂದ ಸಂಸಾರ ನಡೆಸುತ್ತಿರುವ ಸಾಜಿದ್ ಹಾಗೂ ಜೋಹಾ ಸಂದರ್ಶನದಲ್ಲಿ ತಮ್ಮ ಪ್ರೀತಿಯ ಕಥೆಯನ್ನು ಅನಾವರಣ ಮಾಡಿದ್ದಾರೆ. ಸಾಜಿದ್ ಅತ್ಯುತ್ತಮ ಶಿಕ್ಷಕ ಈ ಪ್ರದೇಶದಲ್ಲಿ ಅವರಷ್ಟು ಉತ್ತಮವಾಗಿ ಪಾಠ ಮಾಡುವವರು ಬೇರೆ ಯಾರು ಇಲ್ಲ ಎಂದು ಹೊಗಳಿಕೆಯನ್ನು ಮಾಡಿದರೆ ಅತ್ಯುತ್ತಮವಾಗಿ ಅಭ್ಯಾಸ ಮಾಡುತ್ತಾಳೆ.
ಹಾಗೂ ಆಕೆಯೇ ಉತ್ತಮವಾಗಿ ಆಹಾರ ತಯಾರಿಸುತ್ತಾಳೆ. ಜೊತೆಗೆ ಕಚೇರಿಯಲ್ಲಿ ಚಹವನ್ನು ಕೂಡ ಚೆನ್ನಾಗಿ ಮಾಡಿಕೊಡುತ್ತಾಳೆ ಅಂತ ಸಾಜಿತ್ ತನ್ನ ಪತ್ನಿ ನೂರಾ ಬಗ್ಗೆ ಸಂತೋಷದ ಮಾತುಗಳನ್ನು ಆಡಿದ್ದಾರೆ. ವಯಸ್ಸಿನ ಅಂತರ ಇದ್ದರೂ ಕೂಡ ಪ್ರೀತಿಯನ್ನು ಗೆದ್ದು ಇವರಿಬ್ಬರು ಮದುವೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿವೆ ಗುರು ಶಿಷ್ಯರ ನಡುವಿನ ಸಂಬಂಧ ತುಂಬಾ ಪವಿತ್ರವಾಗಿರುವುದು ಇವರ ನಡುವೆ ಪ್ರೀತಿಯು ಮೂಡಿ ಮದುವೆಯಾಗಿರುವುದು ನಿಜಕ್ಕೂ ಖುಷಿಯ ವಿಚಾರ ಇವರಿಬ್ಬರು ಜೀವನದಲ್ಲಿ ಸಂತೋಷವಾಗಿರಲಿ ಅಂತ ನೆಟ್ಟಿಗರು ಹಾರೈಸಿದ್ದಾರೆ.