PhotoGrid Site 1672131927999

ರವಿಚಂದ್ರನ್ ಸೋಲಲು ಅಸಲಿ ಕಾರಣ ತಿಳಿಸಿದ ಎಸ್ ನಾರಾಯಣ್! ಹೇಳಿದ್ದೇನು ನೋಡಿ!!

Cinema entertainment

S. Narayan about V. Ravichandran ಒಂದು ಕಾಲದಲ್ಲಿ ಕನ್ನಡಿಗರಿಗೆ ಸಿನಿಮಾ ಅಂದ್ರೆ ಹೀಗೆ ಇರಬೇಕು ಎನ್ನುವ ಪರಿಕಲ್ಪನೆಯನ್ನು ಕಲಿಸಿಕೊಟ್ಟಿದ್ದೇ ಕ್ರೇಜಿಸ್ಟಾರ್ ರವಿಚಂದ್ರನ್ (Crazystar Ravichandran) ಅಂದ್ರೆ ಅತಿಶಯೋಕ್ತಿಯಲ್ಲ. ಕನ್ನಡ ಸಿನಿಮಾ ರಂಗ ಕಂಡ ಅತ್ಯದ್ಭುತ ಕಲೆಗಾರ ರವಿಚಂದ್ರನ್. ರವಿಚಂದ್ರನ್ ಅವರು ಛಲವಾದಿ, ಹಠವಾದಿ, ಒಬ್ಬ ಅತ್ಯುತ್ತಮ ಕನಸುಗಾರ. ಸಿನಿಮಾ ಅಂದ್ರೆ ಹೀಗೆ ಇರಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದಿರುವಂತಹವರು.

ಸ್ಯಾಂಡಲ್ ವುಡ್ (Saldalwood) ಗೆ ಅತ್ಯದ್ಭುತ ಸಿನಿಮಾಗಳನ್ನ ಕೊಟ್ಟು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಅವರ ಸಿನಿಮಾಗಳು (Film) ಸೋಲುತ್ತಿವೆ ಇದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಹಲವರಲ್ಲಿ ಇಂದಿಗೂ ಹಾಗೆಯೇ ಇದೆ ಆದರೆ ಈ ಬಗ್ಗೆ ಎಸ್ ನಾರಾಯಣ್ (S.Narayan) ಸೂಚಿಸಿದ್ದಾರೆ. ಕನ್ನಡ ಸಿನಿಮಾ ಕಂಡ ಮತ್ತೋರ್ವ ಅತ್ಯದ್ಭುತ ಕಲಾವಿದ ಎಸ್ ನಾರಾಯಣ್ ಅವರು ನಿರ್ದೇಶಕನಾಗಿ ನಿರ್ಮಾಪಕನಾಗಿ ಸಾಕಷ್ಟು ಕಲಾ ಸೇವೆ ಮಾಡಿದ್ದಾರೆ.

S. Narayan about V. Ravichandran

ಇವರು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ರವಿಚಂದ್ರನ್ ಅವರ ಸಿನಿಮಾದ ಸೋಲಿನ ಬಗ್ಗೆ ಮಾತನಾಡಿದರು. ಎಸ್ ನಾರಾಯಣ್ ಅವರು ಹೇಳುವಂತೆ ‘ರವಿಚಂದ್ರನ್ ಅವರ ಶಾಂತಿ ಕ್ರಾಂತಿ (Shanti Kranti Film) ಸಿನಿಮಾ ಆಗಲೇ ಗೆಲ್ಲಬೇಕಿತ್ತು ಅದೊಂದು ಸಿನಿಮಾ ಗೆದ್ದಿದ್ದರೆ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದವು. ಆ ಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಇಂಡಸ್ಟ್ರಿಗೆ ಪರಿಚಯ ಮಾಡಿದ್ದು ರವಿಚಂದ್ರನ್.

V. Ravichandran Films
V. Ravichandran Films

ಅವರು ಆಗಲೇ ಒಂದು ಸಿನಿಮಾವನ್ನು ಬೇರೆಬೇರೆ ಭಾಷೆಗಳಲ್ಲಿ ನಿರ್ದೇಶನ (Direction) ಮಾಡಿದರು. ಶಾಂತಿ ಕ್ರಾಂತಿ ಸಿನಿಮಾದ ಸೋಲು ರವಿಚಂದ್ರನ್ ಒಬ್ಬರ ಸೋಲಲ್ಲ ಅದು ಕನ್ನಡ ಸಿನಿಮಾ ಇಂಡಸ್ಟ್ರಿಯ ಸೋಲು. ನಾನು ಆ ಸಿನಿಮಾವನ್ನು ನಿರ್ದೇಶನ ಮಾಡಿಲ್ಲ ನಿರ್ಮಾಪಕ (Producer)ನೂ ಅಲ್ಲ ಆದರೂ ವೈಯಕ್ತಿಕವಾಗಿ ಆ ಸಿನಿಮಾದ ಸೋಲು ನನಗೆ ನೋವನ್ನು ಉಂಟು ಮಾಡಿದೆ’ ಎಂದಿದ್ದಾರೆ.

ಮಾತು ಮುಂದುವರಿಸಿದ ಎಸ್ ನಾರಾಯಣ್ ಅವರು ರವಿಚಂದ್ರನ್ ಅವರು ಸಿನಿಮಾಕ್ಕಾಗಿಯೇ ಬದುಕಿದವರು ಒಂದು ರೂಪಾಯಿ ಸಿನಿಮಾದಿಂದ ಗೆದ್ದರೂ ಅದನ್ನು ಮತ್ತೆ ಸಿನಿಮಾಕ್ಕೆ ಹಾಕುತ್ತಾರೆ ಅವರು ಯಾವ ಆಸ್ತಿಗಾಗಿ ಕೆಲಸ ಮಾಡಿಲ್ಲ ಸಿನಿಮಾದಿಂದ ಒಂದು ಕೋಟಿ ಆದಾಯ ಬಂದರೆ ಮುಂದಿನ ಸಿನಿಮಾಕ್ಕೆ ಒಂದುವರೆ ಕೋಟಿ ರೂಪಾಯಿ ಹಾಕುತ್ತಾರೆ.

S Narayan told the real reason for Ravichandran’s defeat! See what was said.

ಇತ್ತೀಚಿಗೆ ರವಿಚಂದ್ರನ್ ಅವರ ಸಿನಿಮಾಗಳು ಸೋಲುತ್ತಿವೆ ಇದು ನಿಜಕ್ಕೂ ವಿಷಾದನೀಯ ಆದರೆ ಇದು ರವಿಚಂದ್ರನ್ ಅವರ ಸೋಲಲ್ಲ ನಮ್ಮ ಉದ್ಯಮದ ಸೋಲು. ಹಾಗೆ ನೋಡಿದರೆ ರವಿಚಂದ್ರನ್ ಎಂದಿಗೂ ಸೋತಿಲ್ಲ ಅವರ ಸಿನಿಮಾಗಳು ಸೋತಿವೆ ಅಷ್ಟೇ. ಅವರೊಬ್ಬ ಛಲವಾದಿ, ಕನಸುಗಾರ ಮತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಕಮ್ ಬ್ಯಾಕ್ ಮಾಡುತ್ತಾರೆ ಜನ ಅವರನ ಮತ್ತೆ ಒಪ್ಪಿಕೊಳ್ಳುತ್ತಾರೆ.

ಕ್ರಿಸ್ಮಸ್ ಪಾರ್ಟಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಅಜಯ್ ದೇವಗನ್ ಪುತ್ರಿ ನ್ಯಾಸಾ ದೇವಗನ್! ವಿಡಿಯೋದಲ್ಲಿ ಈಕೆಯ ಅವತಾರ ನೋಡಿ ಬೆಚ್ಚಿಬಿದ್ದ ಸ್ಟಾರ್ ನಟಿಯರು!!

ಹೌದು ನಟನೆ, ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಎಲ್ಲಾದ್ರಲ್ಲೂ ರವಿಚಂದ್ರನ್ ಅವರು ಎತ್ತಿದ ಕೈ ಅವರು ಅತ್ಯುತ್ತಮ ತಂತ್ರಜ್ಞ ಕೂಡ ಹೌದು ಆದರೂ ಅವರ ಸಿನಿಮಾಗಳು ಸೋಲ್ತಾ ಇರೋದಕ್ಕೆ ಸರಿಯಾದ ಕಾರಣವೇನು ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ಸದ್ಯದಲ್ಲೇ ರವಿಚಂದ್ರನ್ ಅವರು ಮತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸುವಂತಹ ಸಿನಿಮಾ ಮಾಡುತ್ತಾರಾ? ಲಕ್ ಅವರ ಕೈ ಹಿಡಿಯುತ್ತಾ ಕಾದು ನೋಡಬೇಕು.

Leave a Reply

Your email address will not be published. Required fields are marked *