ಮದುವೆ ಎನ್ನುವುದು ಬಹಳ ಪವಿತ್ರವಾದ ಸಂಬಂಧ. ಇಲ್ಲಿ ಹುಡುಗ ಹಾಗೂ ಹುಡುಗಿ ಪರಸ್ಪರ ಒಪ್ಪಿ ಮೆಚ್ಚಿ ಮದುವೆಯಾಗುತ್ತಾರೆ. ಗುರು ಹಿರಿಯರು ಇಬ್ಬರೂ ಬಹಳ ಪ್ರೀತಿಯಿಂದ ತಮ್ಮ ತಮ್ಮ ಮಕ್ಕಳ ಮದುವೆ ಮಾಡಿಕೊಡುತ್ತಾರೆ. ಜೀವನಪರ್ಯಂತ ಸುಖವಾಗಿ ಬಾಳಬೇಕು ಎಂದು ಹರಸುತ್ತಾರೆ, ಬಯಸುತ್ತಾರೆ.
ಯಾಕೆಂದರೆ ಒಮ್ಮೆ ಮದುವೆಯಾದ ಮೇಲೆ ಜೀವನಪರ್ಯಂತ ಆ ವ್ಯಕ್ತಿಯ ಜೊತೆಯೇ ಜೀವನ ಕಳೆಯಬೇಕು. ಆದರೆ ವಿಚಿತ್ರ ನೋಡಿ. ಅದೆಷ್ಟೋ ಸಂಬಂಧಗಳು ಊಹಿಸಲಾಗದ ರೀತಿಯ ಬೆಸೆದುಕೊಳ್ಳುತ್ತದೆ ನೋಡಿ. ನಾವು ಈಗ ಹೇಳುತ್ತಿರುವ ಘಟನೆ ಕೇಳಿದ್ರೆ ಖಂಡಿತವಾಗಿಯೂ ನಿಮಗೂ ಮನಸ್ಸು ಕರಗಬಹುದು. ಆತ ಮಾಡಿದ್ಡೆ ಸರಿ ಎನ್ನಿಸಬಹುದು.
ಆದರೆ ಅದಕ್ಕಿಂತ ಮೊದಲು ಘಟನೆ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ. ಮಾವನ ಮಗನ ಮದುವೆಯಾಗಲು ಹಸೆಮಣೆಗೆ ಬಂದ ಆಕೆ, ಮದುವೆಯಾಗಿದ್ದು ಮಾತ್ರ ಯಾರನ್ನ ಗೊತ್ತಾ?ಬಹುಶಃ ಆಕೆಯ ಜೀವನದಲ್ಲಿ ಈ ರೀತಿಯ ಒಂದು ಟ್ವಿಸ್ಟ್ ಸಿಗುತ್ತೆ ಅಂತ ಅವಳು ಊಹೆ ಕೂಡ ಮಾಡಿರಲಿಕ್ಕಿಲ್ಲ. ಈ ಘಟನೆ ನಡೆದಿರುವುದು.
ಬಿಹಾರದ ಸಮಸ್ತಿಪುರ ಎನ್ನುವ ಸ್ಥಳದಲ್ಲಿ. ಈ ಒಂದು ಅಪರೂಪದ ಮದುವೆಯ ಹಿಂದಿರುವ ಕಾರಣ ನೋಡುವುದಾದರೆ, ತಂದೆ ಎಂದು ಮಾವನ ಕಾಲಿಗೆ ಬಿದ್ದು ನಮಸ್ಕಾರ ಮಾಡಬೇಕಾಗಿದ್ದ ಸೊಸೆಯೇ ಮಾವನನ್ನು ಪತಿಯಾಗಿ ಸ್ವೀಕರಿಸಿದ ಘಟನೆ ಇದು. ಆತನ ಹೆಸರು ರೋಶನ್ ಲಾಲ್ ಅವರಿಗೆ 65 ವರ್ಷ ವಯಸ್ಸಾಗಿದೆ.
ಅದೇ ರೀತಿ ಅವರನ್ನು ಮದುವೆಯಾದ ಹುಡುಕಿ ಅವರ ಸೊಸೆ ಆಗಬೇಕಿದ್ದ ಸಪ್ನ. ಅವಳಿಗೆ 21 ವರ್ಷ ವಯಸ್ಸು. ಮಗನ ಕೊಟ್ಟು ಮದುವೆ ಮಾಡಲು ಹೊರಟ ರೋಶನ್ ಲಾಲ್ ಆಕೆಯ ಕೊರಳಿಗೆ ತಾಳಿ ಕಟ್ಟುವಂತಹ ಸಂದರ್ಭ ಒದಗಿ ಬರುತ್ತೆ. ರೋಶನ್ ಲಾಲ್ ಆಕೆಯನ್ನು ಮದುವೆಯಾಗುವ ನಿರ್ಧಾರ ಮಾಡಿದಾಗ ಜನ ಜಾಯಿಗೆ ಬಂದ ಹಾಗೆ ಮಾತನಾಡುತ್ತಾರೆ, ರೋಶನ್ ಲಾಲ್ ಗೆ ಬೈಯ್ಯುತ್ತಾರೆ. ಆದರೆ ರೋಶನ್ ಲಾಲ್ ಮಾತ್ರ ತಾನು ತೆಗೆದುಕೊಂಡಿರುವ ನಿರ್ಧಾರ ಸರಿ ಎಂದು ಭಾವಿಸುತ್ತಾರೆ ರೋಶನ್ ಲಾಲ್ ನಿರ್ಧಾರಕ್ಕೆ ಸ್ವಪ್ನಾಳ ಮನೆಯವರು ಕೂಡ ಒಪ್ಪುತ್ತಾರೆ.
ಅಷ್ಟಕ್ಕೂ ರೋಶನ್ ಲಾಲ್ ಸಪ್ನಾಳನ್ನು ಮದುವೆಯಾಗಿದ್ದು ಯಾಕೆ ಗೊತ್ತಾ. ರೋಶನ್ ಲಾಲ್ ಅವರ ಮಗನ ಜೊತೆಗೆ ಸಪ್ನಳ ಮದುವೆ ಫಿಕ್ಸ್ ಆಗಿತ್ತು. ಮದುವೆ ಎಲ್ಲ ಸಿದ್ಧತೆಗಳು ಕೂಡ ನಡೆದಿದ್ದವು. ಆದರೆ ರೋಷನ್ ಲಾಲ್ ಅವರ ಮಗ ಮದುವೆಯ ಹಿಂದಿನ ದಿನ ಮದುವೆಯ ಮಂಟಪವನ್ನೇ ಬಿಟ್ಟು ಓಡಿ ಹೋಗುತ್ತಾನೆ. ಈ ಸಮಯದಲ್ಲಿ ಮದುವೆ ಮುರಿದು ಹೋದರೆ ಎರಡು ಕುಟುಂಬದ ಮರ್ಯಾದೆ ಹೋಗುತ್ತೆ ಎಂದು ರೋಶನ್ ಲಾಲ್ ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ರೋಶನ್ ಲಾಲ್ ನಿರ್ಧಾರವನ್ನು ಸಪ್ನಾ ಮನೆಯವರು ಕೂಡಾ ಒಪ್ಪುತ್ತಾರೆ. ರೋಶನ್ ಲಾಲ್ ಈ ಕಾರಣಕ್ಕೆ ಸೊಸೆಯಾಗಬೇಕಿದ್ದ ಹುಡುಗಿಯನ್ನೇ ಮದುವೆ ಆಗುತ್ತಾರೆ.