ಪ್ರೀತಿ ಪ್ರೇಮ ಸರ್ವೇ ಸಾಮಾನ್ಯವಾಗಿದೆ. ಹೌದು, ಪ್ರೀತಿ ಎಂದರೆ ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಸಿನಿಮಾ ಹಾಡು ಕೇಳಿದರೆ ಈ ಪ್ರೀತಿ ಎಷ್ಟು ಡೇಂ’ಜರ್ ಎಂದು ತಿಳಿಯುತ್ತದೆ. ಹೌದು, ಪ್ರತಿಯೊಬ್ಬರು ಕೂಡ ಪ್ರೀತಿಗಾಗಿ ಹಾತೊರೆಯುತ್ತಾರೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡಬೇಕು.
ಆದರೆ ಈ ಪ್ರೀತಿ ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಬೇಕಿಲ್ಲ. ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು, ಆ ಪ್ರೀತಿ ಬೇರೆ ಯಾವುದು ಅಡ್ಡಿಯಾಗಲಾಗದು, ಎರಡು ಮನಸ್ಸು ಇಷ್ಟ ಪಟ್ಟರೆ ಸಾಕು ಅಲ್ಲಿ ಪ್ರೀತಿ ಚಿಗುರುತ್ತದೆ. ಇನ್ನು ಕೆಲವರು ಈ ಪ್ರೀತಿಪ್ರೇಮದ ಹೆಸರಿನಲ್ಲಿ ಹಣ ಗಳಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಪ್ರೀತಿಸಿ ನಂಬಿಸಿ ಮೋಸ ಮಾಡುತ್ತಾರೆ ಕೂಡ. ಆದರೆ ಆಂಧ್ರಪ್ರದೇಶದಲ್ಲಿಯೊಂದು ಘಟನೆ ನಡೆದಿದೆ.
ಇತ್ತೀಚಿಗೆ ಯುವತಿಯೊಬ್ಬಳು ಹಣದ ಆಸೆಯಿಂದ ಸರ್ಕಾರಿ ನೌಕರರ ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ದ’ರೋಡೆ ಮಾಡುತ್ತಿದ್ದಳು. ಕೊನೆಗೂ ಈ ಆ’ರೋಪಿಗಳು ಪೊ’ಲೀಸರಿಗೆ ಕೈಗೆ ಸಿಕ್ಕಿ ಬಿದ್ದಿದ್ದಾರೆ. ವಿಶಾಖಪಟ್ಟಣ ಪ್ರದೇಶದ ಗಜುವಾಕದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು ಈ ವಿವಾಹಿತ ರೇಣುಕಾ.
ಈಕೆಯು ಮದುವೆಗೂ ಮೊದಲು ಶ್ರೀನಿವಾಸ ಎನ್ನುವ ಹುಡುಗನ ಪ್ರೀತಿಸಿದಳು. ಆದರೆ ಕೆಲವು ಕಾರಣದಿಂದಾಗಿ ಶ್ರೀನಿವಾಸನನ್ನು ಆಕೆಗೆ ಮದುವೆ ಆಗಲಿಲ್ಲ. ಆದಾದ ಬಳಿಕ ಆ ಪ್ರದೇಶದ ಸರ್ಕಾರಿ ನೌಕರ ಒಬ್ಬರನ್ನು ಆಕೆ ಮದುವೆಯಾದಳು. ಹೀಗಿರುವಾಗ ಮದುವೆಯಾಗಿ ಒಂದೇ ವಾರಕ್ಕೆ ರೇಣುಕಾ ಗರ್ಭಿಣಿಯಾದಳು. ಆದರೆ ರೇಣುಕಾಳ ಪತಿ ರೇಣುಕಾಳನ್ನು ಬಿಟ್ಟುಹೋದನು. ಕೊನೆಗೆ ರೇಣುಕಾ ಶ್ರೀನಿವಾಸನ ಆಶ್ರಯ ಪಡೆದುಕೊಂಡಳು.
ರೇಣುಕಾಳು ಶ್ರೀನಿವಾಸನನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸಿದಳು. ಆದರೆ ಅತನು ರೇಣುಕಾಳನ್ನು ಮದುವೆಯಾಗಲು ಒಪ್ಪಲಿಲ್ಲ. ಹೀಗಿರುವಾಗ ಶ್ರೀನಿವಾಸ ರೇಣುಕಾಳನ್ನು ಸಂಬಂಧಿಕನಾಗಿರುವ ಸೇನಾಧಿಕಾರಿಯ ಹತ್ತಿರ ಮಾತನಾಡುತ್ತಾನೆ. ರೇಣುಕಾಳನ್ನು ಮದುವೆಯಾಗುವಂತೆ ಒಪ್ಪಿಸುತ್ತಾನೆ. ತನ್ನ ಪ್ರಿಯಕರನ ಮಾತು ಕೇಳಿ ರೇಣುಕಾಳು ಸೇನಾಧಿಕಾರಿಯ ಜೊತೆಗೆ ವಿವಾಹವಾದಳು.
ಹೀಗೆ ಈ ದಂಪತಿಗಳು ಸುಖವಾಗಿ ಸಂಸಾರ ಮಾಡುತ್ತಿದ್ದರು. ಸೇನಾಧಿಕಾರಿಯಾಗಿದ್ದ ಕಾರಣ ಆತನು ಆರು ತಿಂಗಳಿಗೆ ಒಮ್ಮೆ ಮನೆಗೆ ಬಂದು ಹೋಗುತ್ತಿದ್ದನು. ಆದರೆ ಈ ರೇಣುಕಾಳು ತನ್ನ ವರಸೆ ತೋರಿಸಿಯೇ ಬಿಟ್ಟಳು. ಆ ಮನೆಯನ್ನು ದೋಚಿದಳು. ತದನಂತರದಲ್ಲಿ ಹಣದ ದುರಾಸೆಇಡೆ ರೇಣುಕ ಮತ್ತೋರ್ವ ಸರ್ಕಾರಿ ನೌಕರರ ಮದುವೆ ಮಾಡಿಕೊಂಡಳು. ತನ್ನ 2ನೇ ಪತಿ ಮನೆಗೆ ಅಪರೂಪಕ್ಕೆ ಬರುತ್ತಾನೆ ರೇಣುಕಾಳಿಗೆ ಗೊತ್ತಿತ್ತು.
ಆತ ಬಂದಾಗ ಮಾತ್ರ ಆತನೊಂದಿಗೆ ಸರಿಯಾದ ರೀತಿಯಲ್ಲಿ ಇರುತ್ತಿದ್ದಳು. ಈ ವಿಚಾರ ತಿಳಿದಾಗ ಆಕೆಯ ಎರಡನೇ ಪತಿ ಪೊಲೀಸರಿಗೆ ದೂರು ನೀಡುತ್ತಾನೆ. ಕದ್ದ ಹಣ ಚಿನ್ನಾಭರಣವನ್ನು ವಾಪಸ್ ಕೊಡುವಂತೆ ದೂರು ದಾಖಲಿಸಿದ್ದಾನೆ. ಸದ್ಯಕ್ಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ ರೇಣುಕಾ. ಇದೀಗ ಪೊಲೀಸರು ರೇಣುಕಾಳನ್ನು ಮತ್ತಷ್ಟು ತನಿಖೆ ಮಾಡುತ್ತಿದ್ದಾರೆ.