ಸಿನಿಮಾ ರಂಗದಲ್ಲಿ ನಾಯಕಿ ನಟಿಯರು, ಏನೇ ಮಾತನಾಡಿದರೂ ಅದು ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ. ಮಾತನಾಡುವ ಪ್ರತಿ ಮಾತುಗಳು ಮಾದ್ಯಮಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತೆ. ಹಲವರು ತಮ್ಮ ಮಾತಿನಿಂದ ಸಾಕಷ್ಟು ಟ್ರೋಲ್ ಆಗುತ್ತಾರೆ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಹಲವು ಹುಡುಗಿಯರು ಫಿಲ್ಟರ್ ಇಲ್ಲದೆ ನೇರವಾಗಿ ಮಾತನಾಡುತ್ತಾರೆ. ಇದೀಗ ನಟಿ ರೆಜಿಯಾ ಡಬ್ಬಲ್ ಮೀನಿಂಗ್ ಜೋಕ್ ಮಾಡಿ ಟ್ರೊಲ್ ಗೆ ಗುರಿಯಾಗಿದ್ದಾರೆ.
ನಟಿ ರೆಜಿನಾ ಕ್ಯಾಸಂಡ್ರಾ ನೀಡಿದ ಹೇಳಿಕೆಯೊಂದು ಈಗ ಬಾರಿ ಚರ್ಚೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರೆಜಿನಾ ಅವರ ಮಾತಿಗೆ ತಲೆಕೆಡಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆಗುತ್ತಿರುವ ನಟಿ ರಜಿನ ಅವರ ಹೇಳಿಕೆ ಏನು ಗೊತ್ತಾ ಹೇಳ್ತೀವಿ ಮುಂದೆ ಓದಿ. ನಟಿ ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ’ಸಾಕಿನಿ ಧಾಕಿನಿ’ ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾಕ್ಕೆ ಸುಧೀರ್ ವರ್ಮ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಭಾಗಶಃ ಮುಗಿದಿದ್ದು ಇನ್ನೇನು ತೆರೆ ಕಾಣುವ ನಿರೀಕ್ಷೆ ಇದೆ ಹಾಗಾಗಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಜಿನಾ ಬ್ಯುಸಿಯಾಗಿದ್ದಾರೆ. ಒಂದಾದ ಮೇಲೆ ಬಂದಂತೆ ಮಾಧ್ಯಮಗಳಲ್ಲಿ ಸಂದರ್ಶನವನ್ನು ಕೂಡ ನೀಡುತ್ತಿದ್ದಾರೆ. ನಟಿ ರೆಜಿನ ಕನ್ನಡದಲ್ಲಿ ಕೂಡ ನಟಿಸಿದ್ದಾರೆ 2010ರಲ್ಲಿ ಸೂರ್ಯಕಾಂತಿ ಎನ್ನುವ ಸಿನಿಮಾದ ಮೂಲಕ ಕನ್ನಡಕ್ಕೂ ಪರಿಚಯಿತರಾದರು ನಟಿ ರೆಜಿನಾ.
ಈ ಸಿನಿಮಾದಲ್ಲಿ ನಟ ಚೇತನ್ ಕುಮಾರ್ ಅವರಿಗೆ ಜೋಡಿಯಾಗಿ ರೆಜಿನಾ ಅಭಿನಯಿಸಿದ್ರು. ಇದೀಗ ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ ರೆಜಿನಾ. ಅಂದಹಾಗೆ ತಮ್ಮ ಸಾಕಿನಿ ಧಾಕಿನಿ ಎನ್ನುವ ಸಿನಿಮಾದ ಪ್ರಚಾರದ ಸಮಯದಲ್ಲಿ ರೆಜಿನಾ ಮಾಧ್ಯಮದ ಎದುರು ಹೇಳಿದ ಬಂದು ಜೋಕ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದು ಹುಡುಗರ ಲೈಂ-ಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು.
ಹೌದು ರೆಜಿನಾ ಡಬಲ್ ಮೀನಿಂಗ್ ಜೋಕ್ ಒಂದನ್ನ ಮಾಡಿದ್ದಾರೆ. ಇದಕ್ಕೆ ಹಲವರು ನಕ್ಕರೂ ಇನ್ನೂ ಕೆಲವರು ತಲೆ ಬಿಸಿ ಮಾಡಿಕೊಂಡಿದ್ದಾರೆ. ರೆಜಿನಾ ಹುಡುಗರ ಲೈಂ-ಗಿಕ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ’ಹುಡುಗರ ಬಗ್ಗೆ ನನಗೆ ಬಂದು ಜೋಕ್ ಗೊತ್ತಿದೆ ಆದರೆ ಇಲ್ಲಿ ಹೇಳಬೇಕೋ ಬೇಡವೋ ನನಗೆ ಗೊತ್ತಾಗುತ್ತಿಲ್ಲ’ ಅಂತ ಒಂದು ನಿಮಿಷ ಸುಮ್ಮನಾದ ರೆಜಿನ ಕೊನೆಗೂ ತಡೆದುಕೊಳ್ಳಲಾಗದೆ ತನಗೆ ಗೊತ್ತಿರುವ ಜೋಕ್ ಹೇಳಿಬಿಟ್ಟಿದ್ದಾರೆ.
ಹುಡುಗರ ಲೈಂ-ಗಿಕ ಸಾಮರ್ಥ್ಯ ಮ್ಯಾಗಿ ತರ ಕೇವಲ ಎರಡು ನಿಮಿಷಗಳಲ್ಲಿ ಮುಗಿಯುತ್ತೆ’ ಅಂತ ಜೋಕ್ ಮಾಡಿ ನಕ್ಕಿದ್ದಾರೆ. ಅಲ್ಲಿದ್ದವರು ಕೂಡ ಈ ಮಾತಿಗೆ ಹಲ್ಲು ಕಿರಿದರೂ, ನೆಟ್ಟಿದರು ಮಾತ್ರ ರೆಜಿನಾ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಮ್ಯಾಗಿಯನ್ನು ನಿಜವಾಗಿ ಎರಡು ನಿಮಿಷದಲ್ಲಿ ಮಾಡಲು ಸಾಧ್ಯವೇ ಇಲ್ಲ ಅಂತ ಡಬಲ್ ಮೀನಿಂಗ್ ಅರ್ಥದ ಕಾಮೆಂಟ್ ಮಾಡಿದ್ದಾರೆ.
ರೆಜಿನಾ ಅಭಿನಯಿಸುತ್ತಿರುವ ಸಾಕಿನಿ ಧಾಕಿನಿ ಸಿನಿಮಾ ಒಂದು ಕೊರಿಯನ್ ಸಿನಿಮಾದ ಕಥೆಯನ್ನು ಹೊಂದಿದೆ. ಮಿಡ್ ನೈಟ್ ರನ್ನರ್ಸ್ ಎನ್ನುವ ಕೊರಿಯನ್ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. 2017ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು.ಪೊಲೀಸ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮಾನವ ಕಳ್ಳ ಸಾಕಾಣಿಕೆಯನ್ನು ಬಯಲು ಎಳೆಯುವ ಕಥೆ ಇದು.
ಆದರೆ ಕೊರಿಯನ್ ಸಿನಿಮಾದಲ್ಲಿ ಇಬ್ಬರು ನಾಯಕ ನಟರು ಅಭಿನಯಿಸಿದ್ರೆ ಇಲ್ಲಿ ಇಬ್ಬರು ನಟಿಯರನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದು ವಿಶೇಷ. ಸಾಮಾನ್ಯವಾಗಿ ಕೊರಿಯನ್ ಮೂವಿಗಳಲ್ಲಿ ಕಥೆ ಬಹಳ ಸ್ಟ್ರಾಂಗ್ ಆಗಿ ಇರುತ್ತೆ. ಹಾಗಾಗಿ ಇದೀಗ ಸಾಕಿನಿ ಧಾಕಿನಿ ಕೂಡ ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿದೆ.