PhotoGrid Site 1672891892748

ಸೀರೆಯಲ್ಲಿಯೇ ಜಿಮ್ ನಲ್ಲಿ ವರ್ಕೌಟ್ ಮಾಡಿ ಟ್ರ್ಯಾಕ್ಟರ್ ಟೈಯರ್ ಎತ್ತಿದ ಮಹಿಳೆ! ವಿಡಿಯೋ ನೋಡಿ ನಡುಗಿದ ಜನತೆ!!

ಸುದ್ದಿ

ಇತ್ತೀಚಿಗೆ ಮಹಿಳೆಯರು ಸಾಮಾಜಿಕ ಜಾಲತಾಣ (Social Media)ದಲ್ಲಿ ಹೆಚ್ಚು ಸಕ್ರಿಯರಾಗಿ ಇರುತ್ತಾರೆ ಸೆಲೆಬ್ರಿಟಿ (Celebrities) ಗಳನ್ನು ನೋಡಿದರೆ ಇನ್ಸ್ಟಾಗ್ರಾಮ್ (Instagram) ನಂತಹ ಸಾಮಾಜಿಕ ವೇದಿಕೆಗಳು ಅವರನ್ನು ಇನ್ನಷ್ಟು ಜನರ ನಡುವೆ ಗುರುತಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತಿವೆ ಅಂದರೆ ತಪ್ಪಾಗಲಾರದು. ಸಿನಿಮಾ (Film)ಗಳಲ್ಲಿ ಹೆಚ್ಚು ನಟನೆ ಮಾಡದೆ ಇದ್ದರೂ ಕೂಡ ತಮ್ಮ ಫೋಟೋಗಳನ್ನು ಹಾಗೂ ರೀಲ್ ಮಾಡುವುದರ ಮೂಲಕ instagram ನಲ್ಲಿ ಲಕ್ಷಾಂತರ ಫಾಲೋಸ್ ಹೊಂದಿರುತ್ತಾರೆ.

ಇನ್ನು ಸಾಮಾನ್ಯರು ಕೂಡ ಕಡಿಮೆಯಲ್ಲ ಹಿಂದಿನ ಯುವಕ ಯುವತಿಯರು (Youngsters) ತಮ್ಮ ದಿನದ ಬಹುತೇಕ ಸಮಯವನ್ನು ಕಳೆಯುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುತ್ತಾರೆ ತಮ್ಮದೇ ಆದ ರೀತಿಯಲ್ಲಿ ರೀಲ್ಸ್ (Reels) ಮಾಡುವುದರ ಮೂಲಕ ಜನರ ನಡುವೆ ಗುರುತಿಸಿಕೊಳ್ಳುತ್ತಾರೆ. ಯಾವುದಾದರೂ ಹಾಡಿಗೆ ಟ್ರೆಂಡಿ ಆಗಿ ರೀಲ್ಸ್ (Reels ಮಾಡಿ ಜನರ ಗಮನ ಸೆಳೆಯುತ್ತಾರೆ.

ಅಷ್ಟೇ ಅಲ್ಲ ಒಂದು ಹಾಡನ್ನು ಫ್ರೆಂಡ್ ಮಾಡುವ ಶಕ್ತಿಯು ಕೂಡ ಈ ಸೋಶಿಯಲ್ ಮೀಡಿಯಾಗೆ ಇದೆ. ಹೆಣ್ಣು ಮಕ್ಕಳೇ ಸ್ಟ್ರಾಂಗು (Strong) ಗುರು ನಮ್ಮ ಅಪ್ಪು( Puneeth Rajkumar) ಹೇಳಿದ ಈ ಮಾತು ಕೆಲವ ಹೆಣ್ಣು ಮಕ್ಕಳಿಗೆ ನಿಜಕ್ಕೂ ಸರಿಯಾಗಿ ಅನ್ವಯಿಸುತ್ತೆ. ಗಂಡಸರು ಮಾಡಲು ಸಾಧ್ಯವಾಗದೆ ಇರುವ ವಿಷಯಗಳನ್ನು ಕೂಡ ಹೆಣ್ಣು ತಾನು ಮಾಡಬಹುದು ಎಂಬುದನ್ನು ಈಗಾಗಲೇ ಸಾಕಷ್ಟು ಬಾರಿ ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಮೂಲಕ ತೋರಿಸಿದ್ದಾಳೆ.

ಹೀಗೆ ಸೋಶಿಯಲ್ ಮೀಡಿಯಾದ ಮೂಲಕವೇ ಹೆಚ್ಚು ಹೆಚ್ಚು ಜನನ ಗಳಿಸಿಕೊಂಡು ತಮ್ಮ ಪವರ್ ತೋರಿಸುತ್ತಿರುವ ಮಹಿಳೆ ರೀನಾ ಸಿಂಗ್ (Reena Singh). ಹೌದು ನೀವು ಇನ್ಸ್ಟಾಗ್ರಾಮ್ ಅನ್ನು ಬಳಸುತ್ತಿದ್ದರೆ ಖಂಡಿತವಾಗಿಯೂ ರೀನ ಸಿಂಗ್ ಎನ್ನುವ ಮಹಿಳೆಯ ಪ್ರೊಫೈಲ್ ಚೆಕ್ ಮಾಡಿ. ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿರುವ ರೀನಾ ಸಿಂಗ್ 97.4k ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ರೀನಾ ಸಿಂಗ್ ಒಬ್ಬ ಫಿಟ್ನೆಸ್ ಟ್ರೈನರ್. ತಮ್ಮದೇ ಆದ ಫಿಟ್ನೆಸ್ ಟ್ರೈನಿಂಗ್ ಸೆಂಟರ್ ಹೊಂದಿರುವ ರೀನಾ ಸಿಂಗ್ ಯುವತಿಯರಿಗೆ ಅಷ್ಟೇ ಅಲ್ಲದೆ ಹುಡುಗರಿಗೂ ಕೂಡ ಫಿಟ್ನೆಸ್ ಹೇಳಿ ಕೊಡುತ್ತಾರೆ ಇವರು ಮಾಡುವ ಫಿಟ್ನೆಸ್ ಟ್ರಿಕ್ ಗಳು ಬಹಳ ವಿಭಿನ್ನವಾಗಿದ್ದು ಕೈ ತೋಳುಗಳ ಬಲ ಹೆಚ್ಚಿಸಿಕೊಳ್ಳಲು, ಹೊಟ್ಟೆ ಕರಗಿಸಲು ಎಲ್ಲದಕ್ಕೂ ತುಂಬಾನೇ ಸಹಾಯಕಾರಿಯಾಗುತ್ತೆ.

ಏರೋಬಿಕ್ಸ್ ಟ್ರೈನರ್ ಕೂಡ ಆಗಿರುವ ರೀನ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಇಷ್ಟೊಂದು ಫೇಮಸ್ ಆಗಿದ್ದು ಯಾಕೆ ಗೊತ್ತಾ? ಹೌದು ವರ್ಕೌಟ್ ಮಾಡುವುದು ಫಿಟ್ನೆಸ್ ಗಾಗಿ ಜಿಮ್ ಗೆ ಹೋಗುವುದು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ ಆದರೆ ರೀನಾ ಸಿಂಗ್ ಅವರ ಸ್ಪೆಷಾಲಿಟಿ ಅಂದ್ರೆ ಅವರು ಸೀರೆ ಉಟ್ಟುಕೊಂಡೇ ವರ್ಕ್ ಔಟ್ ಮಾಡುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು.

ಸಾಮಾನ್ಯವಾಗಿ ಜಿಮ್ ಹೋಗುವುದು ಅಂದ್ರೆ ಪ್ಯಾಂಟ್ ಹಾಗೂ ಶರ್ಟ್ ಕಡ್ಡಾಯ ಎನ್ನುವಂತೆ ಜನ ಅದನ್ನೇ ಧರಿಸುತ್ತಾರೆ ಆದರೆ ರೀನಾ ಸೀರೆಯಲ್ಲಿಯೇ ವರ್ಕೌಟ್ ಟ್ರೈನಿಂಗ್ ನೀಡುತ್ತಾರೆ. ಜೊತೆಗೆ ತಾವು ಕೂಡ ಸೀರೆ ಉಟ್ಟು ವರ್ಕೌಟ್ ಮಾಡುತ್ತಾರೆ ಹೀಗೆ ಸೀರೆ ಉಟ್ಟು ತಾವು ವರ್ಕೌಟ್ ಮಾಡುತ್ತಿರುವ ಸಾಕಷ್ಟು ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಸ್ಟ್ರಾಂಗ್ ವುಮೆನ್ ಗೆ ರೀನಾ ಸಿಂಗ್ ನಿಜಕ್ಕೂ ಮಾದರಿ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

 

View this post on Instagram

 

A post shared by Reena Singh (@reenasinghfitness)

Leave a Reply

Your email address will not be published. Required fields are marked *