ಸಾಮಾನ್ಯವಾಗಿ ಒಬ್ಬ ನಟ ಅಥವಾ ನಟಿಯರಿಗೆ ಸಾಮಾನ್ಯ ಜನರು ಅಭಿಮಾನಿಗಳಾಗಿರುತ್ತಾರೆ. ಅವರ ಮೆಚ್ಚಿನ ನಟ ನಟಿಯರನ್ನು ಆರಾಧಿಸುತ್ತಾರೆ. ಪೂಜಿಸುತ್ತಾರೆ. ಅದೇ ರೀತಿ ಕೆಲ ನಟ ನಟಿಯರಿಗೂ ಕೆಲವೊಂದು ನಟ ನಟಿಯರೆಂದರೆ ಬಹಳ ಅಚ್ಚು ಮೆಚ್ಚು ಆಗಿರುತ್ತಾರೆ. ತಾನೊಬ್ಬ ಸ್ಟಾರ್ ನಟ ಆಗಿದ್ದರೂ ಇನ್ನೊಬ್ಬ ನಟನಿಗೋ ನಟಿಗೋ ಫ್ಯಾನ್ ಆಗಿರುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಬೆಳೆಯಲು ಅಥವಾ ಕಲಿಯಲು ಅ ನಟ ನಟಿಯರೇ ಸ್ಪೂರ್ತಿಯಾಗಿರುತ್ತಾರೆ.
ಇದೇ ರೀತಿ ನಮ್ಮ ಸ್ಯಾಂಡಲ್ ವುಡ್ನ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರಿಗೂ ಒಬ್ಬ ನಟಿ ಅಂದರೆ ಬಹಳ ಅಚ್ಚು ಮೆಚ್ಚು ಅನ್ನೋದು ನಿಮಗೊತ್ತಾ? ಹೌದು, ರವಿ ಮಾಮ ಹೆಣ್ಮಕ್ಕಳ ಚಿತ್ತ ಚೋರ, ಹೆಣ್ಮಕ್ಕಳ ಫೆವರಿಟ್ ನಟ. ರವಿ ಚಂದ್ರನ್ ಅವರ ಅಭಿಮಾನಿಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಜಾಸ್ತಿ. ಒಂದು ಕಾಲದಲ್ಲಿ ಕಾಲೇಜು ಹುಡುಗಿಯರ ಪುಸ್ತಕ ಗಳಲ್ಲಿ ರವಿ ಚಂದ್ರನ್ ಅವರ ಫೋಟೋಗಳೇ ಇರುತ್ತಿತ್ತು.
ಅವರ ನಟನೆ ಅಷ್ಟೊಂದು ಅದ್ಭುತ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತುಂಬಾನೇ ಸ್ಪೆಷಲ್. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ, ಹಾಗೂ ಹೊಸ ರಂಗು ತಂದು ಕೊಟ್ಟವರೇ ರವಿಚಂದ್ರನ್ ಅವರು. ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷನೆ ಹೀಗೆ ಚಿತ್ರರಂಗದ ಎಲ್ಲಾ ಪ್ರಕಾರಗಳಲ್ಲೂ ಕೆಲಸ ಮಾಡಿರುವ ಕಲಾವಿದ. ಇವರ ಸಿನಿಮಾ ಅಂದರೆ ಅದರಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ.
ಇವರು ಸಿನಿಮಾದಲ್ಲಿ ಸದಾ ರಿಚ್ ನೆಸ್ ಕೊಡಲು ಬಯಸುವವರು. ಅವರ ಸಿನಿಮಾ ಯಾವಾಗಲೂ ಪರ್ಫೆಕ್ಟ್ ಆಗಿರಬೇಕು. ಆ ವಿಷಯದಲ್ಲಿ ಅವರು ಯಾವ ಕಾಂಪ್ರಮೈಸ್ ಕೂಡ ಮಾಡಲ್ಲ. ಮುಖ್ಯವಾಗಿ ಅವರ ಸಿನಿಮಾದಲ್ಲಿ ಸಂಗೀತ ಹಾಗೂ ಕ್ಯಾಮರಾ ವರ್ಕ್ ಹಾಗೂ ವಿಶೇಷ ಸೆಟ್ಟಿಂಗ್ ಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಇನ್ನು ಇವರು ತಮ್ಮ ಸಿನಿಮಾದ ಹೀರೋಯಿನ್ ಗಳ ಪ್ರಾಮುಖ್ಯತೆ ಕೊಡುವವರು.
ಹೆಚ್ಚಾಗಿ ಪರ ಭಾಷೆಯ ನಟಿಯರನ್ನೇ ಅವರು ಸಿನಿಮಾಗಳಿಗೆ ಆಯ್ಕೆ ಮಾಡುತ್ತಾರೆ. ರವಿ ಚಂದ್ರನ್ ಅವರು ಕರೆದರೆಂದರೆ ಪರ ಭಾಷೆಯ ನಟಿಯರು ಕೂಡ ಯಾವುದೇ ಚಕರಾರು ಇಲ್ಲದೆ ಬರುತ್ತಾರೆ. ಇಂತಹ ರವಿ ಚಂದ್ರನ್ ಅವರಿಗೆ ಒಬ್ಬ ನಟಿ ಅಂದರೆ ಬಹಳ ಅಚ್ಚುಮೆಚ್ಚು. ಅವರೇ ಪ್ರಿಯಾಂಕ ಉಪೇಂದ್ರ.
ಹೌದು, ಬೆಂಗಾಳಿ ನಟಿ ಪ್ರಿಯಾಂಕ ಅವರು ಮೊತ್ತ ಮೊದಲು ಉಪೇಂದ್ರ ಅವರ ಜೊತೆ ಹೆಚ್ 2 ಓ ಚಿತ್ರದಲ್ಲಿ ನಟಿಸಿದ್ದರು. ನಂತರ ರವಿಚಂದ್ರನ್ ಅವರ ಜೊತೆ ಮಲ್ಲ ಸಿನಿಮಾದಲ್ಲಿ ನಾಯಕಿ ಆಗಿದ್ದರು. ಈ ಚಿತ್ರದಲ್ಲಿ ರವಿಚಂದ್ರನ್ ಅವರು ಎರಡು ಪಾತ್ರ ಮಾಡಿದ್ದರು, ಅದೇ ರೀತಿ ಪ್ರಿಯಾಂಕ ಅವರು ತಾಯಿಯಾಗಿ, ನೆಗೆಟಿವ್ ಪಾತ್ರಧಾರಿಯಾಗಿ, ಅದೇ ರೀತಿ ಸಾಫ್ಟ್ ನೇಚರ್ ಹುಡುಗಿಯಾಗಿ ಅಭಿನಯಿಸಿ, ಆ ಸಿನಿಮಾವನ್ನು ಹಿಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆ ಸಿನಿಮಾದಿಂದ ಕೆಲ ವಿವಾದಗಳು ಸೃಷ್ಟಿಯಾದರೂ ಆ ಸಿನಿಮಾ ನಂತರ ರವಿಚಂದ್ರನ್ ಅವರ ಲೈಫೇ ಚೇಂಚ್ ಆಗಿಬಿಟ್ಟಿತ್ತು. ಇದೇ ಕಾರಣದಿಂದ ರವಿಚಂದ್ರನ್ ಅವರಿಗೆ ಪ್ರಿಯಾಂಕ ಉಪೇಂದ್ರ ಮೇಲೆ ಎಲ್ಲಿಲ್ಲದ್ದ ಅಭಿಮಾನ ಹಾಗೂ ಪ್ರೀತಿ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.