ಶಿವಾಜಿ ಸೂರತ್ಕಲ್ (Shivaji Surathkal) ಪಾರ್ಟ್ 2 ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಂತಹ ನಟಿ ಮೇಘನ ಗಾವ್ಕರ್ (Meghana Gaonkar) ತಮ್ಮ ಹಿಂದಿನ ಸಿನಿಮಾದ ಯಶಸ್ಸಿನಿಂದ ಮತ್ತಷ್ಟು ಸಿನಿಮಾಗಳ ಆಫರ್ ಗಳನ್ನು ಪಡೆದುಕೊಳ್ಳುತ್ತಿದ್ದು, ಸದ್ಯ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ನಾಯಕನಟಿಯಾಗಿ ಬಣ್ಣ ಹಚ್ಚುವಂತಹ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಹೌದು ಗೆಳೆಯರೇ ಕೇವಲ ಬೆರಳಾಣಿಕೆಯಷ್ಟು ಸಿನಿಮಾಗಳನ್ನು ಮಾಡಿದರು ಕೂಡ ಇಂದಿಗೂ ಕ್ಯಾರೆಕ್ಟರ್ ಆರ್ಟಿಸ್ಟ್ನಂತ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಕಲೆ ಇರುವಂತಹ ಮೇಘನ ಗಾವ್ಕರ್ (Meghana Gaonkar) ತಮ್ಮ ಬೋಲ್ಡ್ ಹಾಗೂ ಮಾದ.ಕ ಮೈಮಾಟದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಇದೀಗ ರವಿಚಂದ್ರನ್ ಅವರೊಡನೆ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳ ಮುಖದಲ್ಲಿ ಇನ್ನಷ್ಟು ಸಂತಸವನ್ನು ತಂದಿದೆ. ರವಿಚಂದ್ರನ್ ತಮ್ಮ ಮುಂದಿನ ಸಿನಿಮಾದ ಹೆಸರನ್ನು ಘೋಷಿಸಿದ್ದು, ಈ ನಿಮ್ಮದಲ್ಲಿ ಯಾವೆಲ್ಲಾ ಕಲಾವಿದರು ಭಾಗಿಯಾಗಲಿದ್ದಾರೆ ಹಾಗೂ ತಮ್ಮ ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಹೌದು ರವಿಚಂದ್ರನ್ ಡಿ ಜಡ್ಜ್ಮೆಂಟ್ (the judgement) ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಲು ರೆಡಿಯಾಗಿದ್ದು ಇವರ ಮುಂದಿನ ಸಿನಿಮಾಗೆ ನಟಿ ಮೇಘನ ಗಾವ್ಕರ್ (Meghana Gaonkar) ನಾಯಕನಟಿಯಾಗಲಿದ್ದಾರೆ, ಈ ಚಿತ್ರವು ಎರಡು ತಲೆಮಾರಿನ ಕಥಾ ಹಂದರವನ್ನು ಹೊಂದಿದ್ದು ಮೊದಲ ಅರ್ಧದ ಪಾತ್ರಕ್ಕೆ ನಟ ದಿಗಂತ್ actor (Diganth) ಕಾಣಿಸಿಕೊಂಡರೆ ಅವರ ಪೇರ್ ಆಗಿ ಧನ್ಯ (Dhanya) ಬಣ್ಣ ಹಚ್ಚಲಿದ್ದಾರೆ.
ಇನ್ನು ಸಿನಿಮಾದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿರುವಂತಹ ರವಿಚಂದ್ರನ್ (Ravichandran) ಅವರೊಂದಿಗೆ ಮೇಘನ ಗಾವ್ಕರ್ (Meghana Gaonkar) ಕಾಣಿಸಿಕೊಳ್ಳುತ್ತಿರುವುದು ಸಂತಸವನ್ನು ತಂದಿದೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮವು ಕೆಲವು ದಿನಗಳ ಹಿಂದಷ್ಟೇ ನಡೆದಿದ್ದು, ಲಾಸ್ಟ್ ಬಸ್, ಆಕ್ಸಿಡೆಂಟ್, ಅಮೃತ ಅಪಾರ್ಟ್ಮೆಂಟ್ ನಂತಹ.
ಸಿನಿಮಾಗಳನ್ನು ನೀಡಿದ ಜಿ ನೈನ್ ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಅಡಿಯಲ್ಲಿ ಡಿ ಜಡ್ಜ್ಮೆಂಟ್ (the judgement) ಸಿನಿಮಾ ತಯಾರಾಗಲಿದೆ. ಇನ್ನು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಮೂಲಕವೇ ಹೆಸರುವಾಸಿಯಾಗಿರುವಂತಹ ಗುರುರಾಜ್ ಕುಲಕರಣಿ (Gururaj Kulkarni) ಯವರು ರವಿಚಂದ್ರನ್ ಅವರ ಜಡ್ಜ್ಮೆಂಟ್ ಸಿನಿಮಾ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಬಹುದೊಡ್ಡ ತಾರಾ ಬಳಗದಲ್ಲಿ ತಯಾರಾಗುತ್ತಿರುವಂತಹ ಈ ಒಂದು ಸಿನಿಮಾ ಮೊದಲ ದಿನದಿಂದಲೇ ತನ್ನ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದ್ದು, ಮೇಘನ ಗಾವ್ಕರ್ (Meghana Gaonkar) ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೋಡಿ ತೆರೆಯ ಮೇಲೆ ಯಾವ ರೀತಿ ಮೂಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.