ಕ್ರೇಜಿಸ್ಟಾರ್ (crazy star) ರವಿಚಂದ್ರನ್ ಅವರಿಗೆ ಸಿನಿಮಾ (Film) ಅನ್ನೋದು ಕೇವಲ ಒಂದು ಸಿನಿಮಾ ಅಲ್ಲ ಅದು ಅವರ ಕನಸಿನ ಲೋಕ. ತಾವು ಸಿನಿಮಾ ನ ಹೇಗೆ ಕನಸಿನಂತೆ ವಿಶೇಷವಾಗಿ ಕಾಣುತ್ತಾರೋ ಅದೇ ರೀತಿ ಸಿನಿಮಾವನ್ನು ನಿರ್ಮಿಸುವುದರಲ್ಲಿ ಕೂಡ ರವಿಚಂದ್ರನ್ ಅವರು ಎತ್ತಿದ ಕೈ ಅವರ ಹಲವಾರು ಸಿನಿಮಾಗಳು ಗೆದ್ದಿದ್ದು ಅವರ ವಿಶೇಷವಾದ ಕಾಳಜಿಯಿಂದಲೇ ಹೊರತು ಕೇವಲ ಒಂದು ಸಿನಿಮಾ ಎನ್ನುವ ಕಾರಣಕ್ಕಾಗಿ ಅಲ್ಲ. ಯಾಕಂದ್ರೆ ರವಿಚಂದ್ರನ್ ಅವರು ಸಿನಿಮಾ ವನ್ನ ನೋಡುವ ರೀತಿಯೇ ಬಹಳ ವಿಭಿನ್ನ.
ಇತರ ನಿರ್ದೇಶಕರಿಗೆ ಹೋಲಿಸಿದರೆ ಪ್ರೇಮಲೋಕದಂತಹ ಸಿನಿಮಾಗಳು ರವಿಚಂದ್ರನ್ ಅವರಿಂದ ಮಾತ್ರ ಗೆಲ್ಲುವುದಕ್ಕೆ ಸಾಧ್ಯವಿತ್ತು ಅವರ ಜಾಗದಲ್ಲಿ ಬೇರೆ ಯಾವುದೇ ನಿರ್ದೇಶಕ ಇದ್ದರೂ ಈ ಸಿನಿಮಾ ಗೆಲ್ಲುತ್ತಿರಲಿಲ್ಲ ಏನು ಅಷ್ಟರ ಮಟ್ಟಿಗೆ ಅದು ಜನರಿಗೂ ರವಿ ಸರ್ ಅವರಿಗೂ ಆಪ್ತವಾದ ಸಿನಿಮಾ ಇದು ಕೇವಲ ಒಂದು ಉದಾಹರಣೆ ಅಷ್ಟೇ ಇಂತಹ ಕೆಲವು ಸಿನಿಮಾಗಳನ್ನು ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದಾರೆ.
ರವಿಚಂದ್ರನ್ ಅವರ ಸಿನಿಮಾದ ಹಾಡುಗಳ (Songs) ಬಗ್ಗೆ ಮಾತೆ ಇಲ್ಲ. ರವಿ ಸರ್ ಅವರ ಒಂದು ಸಿನಿಮಾಗಳಲ್ಲಿ ಐದರಿಂದ ಆರು ಹಾಡುಗಳು ಇರುತ್ತಿತ್ತು ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗುತ್ತಿತ್ತು ಇದಕ್ಕೆ ರವಿಚಂದ್ರನ್ ಅವರ ಅಭಿನಯ ಹಾಡುಗಳನ್ನು ನಿರ್ಮಾಣ ಮಾಡುವ ರೀತಿ ಎಲ್ಲವೂ ಎಷ್ಟು ಮುಖ್ಯವೋ ಅಷ್ಟೇ ಹಂಸಲೇಖ (Hamsalekha) ಅವರ ಸಂಗೀತ (Music) ಕೂಡ ಹೌದು.
ಹೌದು ಹಂಸಲೇಖ ಹಾಗೂ ರವಿಚಂದ್ರನ್ ಅವರು ಗಳಸ್ಯ ಕಂಠಸ್ಯ ಎನ್ನುವಂತಹ ಸ್ನೇಹವನ್ನು ಹೊಂದಿದವರು. ರವಿಚಂದ್ರನ್ ಅವರು ಯಾವುದೇ ಸಿನಿಮಾ ಮಾಡಬೇಕು ಅಂದ್ರು ಅದಕ್ಕೆ ಹಾಡು ಬರೆಯುತ್ತಿದ್ದವರು ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಹಂಸಲೇಖ ಅವರು. ಹಂಸಲೇಖ ಅವರಿಗೆ ಸಿನಿಮಾದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಅವಕಾಶಗಳು ಸಿಗುವುದಕ್ಕೆ ರವಿಚಂದ್ರನ್ ಅವರೇ ಕಾರಣ ಅಂದ್ರೆ ತಪ್ಪಾಗಲ್ಲ. ಅದೇ ರೀತಿ ರವಿಚಂದ್ರನ್ ಅವರ ಸಿನಿಮಾದ ಹಾಡುಗಳು ಫೇಮಸ್ ಆಗುವುದಕ್ಕೂ ಹಂಸಲೇಖ ಅವರು ಬರೆದ ಸಾಹಿತ್ಯವೇ ಕಾರಣ ಅಂದ್ರೂ ಅತಿಶಯೋಕ್ತಿಯಲ್ಲ.
ಇಂತಿಪ್ಪ ರವಿಚಂದ್ರನ್ ಹಾಗೂ ಹಂಸಲೇಖ ಸಡನ್ ಆಗಿ ದೂರ ಆಗುತ್ತಾರೆ ಇದಕ್ಕೆ ಕಾರಣ ಏನು ಗೊತ್ತಾ? ಅದು ಯಾರೇ ನೀನು ಚೆಲುವೆ ಸಿನಿಮಾದ ಕಾಲ. ಈ ಸಿನಿಮಾ ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ ಸಿನಿಮಾ. ಈ ಸಿನಿಮಾ ಮಾಡುವಾಗ ರವಿಚಂದ್ರನ ಅವರು ರಾಕ್ ಲೈನ್ ಅವರಿಂದ ಮೊದಲೇ ಹಣ ತೆಗೆದುಕೊಂಡಿದ್ದರಂತೆ. ಅದನ್ನು ಆಗಲಿ ಬ್ಯಾಂಕ್ ಗೆ ಸಾಲಕ್ಕಾಗಿ ಕಟ್ಟಿದ್ದು ಆಗಿತ್ತು.
ಆರ್ಥಿಕವಾಗಿ ಬಹಳ ಕಷ್ಟದ ಪರಿಸ್ಥಿತಿ ಎದುರುಸುತ್ತಿದ್ದ ರವಿಚಂದ್ರನ್ ಅವರಿಗೆ ಒಂದು ಶಾಕ್ ಕಾದಿತ್ತು. ರಾಕ್ ಲೈನ್ ವೆಂಕಟೇಶ್ ಅವರು ಈ ಸಿನಿಮಾಕ್ಕೆ ಮ್ಯೂಸಿಕ್ ಡೈರೆಕ್ಟರ್ ವಿ ಮನೋಹರ್ ಆಗಬೇಕು ಹಂಸಲೇಖ ಬೇಡವೇ ಬೇಡ ಎಂದು ಪಟ್ಟು ಹಿಡಿದರು. ಇದು ರವಿಚಂದ್ರನ್ ಅವರಿಗೆ ಆಘಾತವಾಯಿತು ಆದರೂ ನನಗೆ ಕಷ್ಟ ಇದ್ದರೂ ಎಲ್ಲಿಂದ ಆದರೂ ನಿಮ್ಮ ಹಣ ವಾಪಸ್ ಆದರೂ ಕೊಡುತ್ತೇನೆ ಆದರೆ ಹಂಸಲೇಖ ಇಲ್ಲದೆ ನಾನು ಸಿನಿಮಾ ಮಾಡುವುದಿಲ್ಲ ಎಂದು ಹೇಳಿದರಂತೆ.
ಅಂದರೆ ಆಮಟ್ಟಿಗಿನ ಬಾಂಡಿಂಗ್ ರವಿಚಂದ್ರನ್ ಹಾಗೂ ಹಂಸಲೇಖ ಅವರ ನಡುವೆ ಇತ್ತು. ರವಿಚಂದ್ರನ್ ಹೇಳುವಂತೆ ನಾನು ಎಲ್ಲಾ ಸಿನಿಮಾಗಳಿಗೆ ಕೂತು ಸಾಹಿತ್ಯ ಬರಿಸುತ್ತಿರಲಿಲ್ಲ ಅದೆಲ್ಲವನ್ನು ಹಂಸಲೇಖ ಅವರೇ ನೋಡಿಕೊಳ್ಳುತ್ತಿದ್ದರು. ಪರದೆಯ ಹಿಂದೆ ಅವರ ಕೆಲಸಕ್ಕೆ ಕ್ರೆಡಿಟ್ ಕೊಡಲೇಬೇಕು ಅದೇ ರೀತಿ ಪರದೆಯ ಮೇಲೆ ಅವರು ಬರೆದ ಸಾಹಿತ್ಯವನ್ನು ಪ್ರಸೆಂಟ್ ಮಾಡಿದ ನನಗೂ ಕ್ರೆಡಿಟ್ ಸಿಗಬೇಕು ಎನ್ನುತ್ತಾರೆ ರವಿಚಂದ್ರನ್.
ಕೊನೆಗೆ ರವಿಚಂದ್ರನ್ ಅವರ ಯಾರೆ ನೀನು ಚೆಲುವೆ ಸಿನಿಮಾ ಸೂಪರ್ ಹಿಟ್ ಆಗುತ್ತೆ ಆ ಸಮಯದಲ್ಲಿ ಸಿನಿಮಾ ಅದಕ್ಕೆ ಸಂಬಂಧಪಟ್ಟ ಹಾಗೆ ಒಂದು ಇನ್ವಿಟೇಶನ್ ಪ್ರಿಂಟ್ ಮಾಡಬೇಕಿರುತ್ತದೆ. ಅದರಲ್ಲಿ ಹಂಸಲೇಖ ಅವರ ಹೆಸರನ್ನ ಹಾಕುವುದೇ ಇಲ್ಲ ಇದಕ್ಕೆ ರವಿಚಂದ್ರನ್ ಅವರೇ ಕಾರಣ ಅಂತ ಹಂಸಲೇಖ ಭಾವಿಸುತ್ತಾರೆ. ಇಲ್ಲಿಂದ ಆರಂಭವಾದ ಮನಸ್ತಾಪ ಮುಂದುವರೆಯುತ್ತೆ, ಹೀಗೆ ಸಣ್ಣ ಪುಟ್ಟ ಕಾರಣಗಳಿಗೆ ಒಬ್ಬರ ಮೇಲೆ ಒಬ್ಬರಿಗೆ ಬೇಸರವಾಗಿದ್ದೂ ಇದೆ. ಆದರೆ ನಾವಿನ್ನು ಚಿಕ್ಕ ಮಕ್ಕಳ ಹಾಗೆ ಜಗಳಾಡಿಕೊಂಡಿಲ್ಲ ಎಂದು ರವಿಚಂದ್ರನ್ ಹೇಳುತ್ತಾರೆ.