ನಮ್ಮ ಸ್ಯಾಂಡಲ್ ವುಡ್ ನಲ್ಲಿರುವ ಅನೇಕ ಸ್ಟಾರ್ ನಟರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತುಂಬಾನೇ ಸ್ಪೆಷಲ್. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ, ಹಾಗೂ ಹೊಸ ರಂಗು ತಂದು ಕೊಟ್ಟವರೇ ರವಿಚಂದ್ರನ್ ಅವರು. ಇವರು ಬಹುಮುಖ ಪ್ರತಿಭೆಯ ನಟ ಅಂದರೆ ತಪ್ಪಾಗಲ್ಲ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷನೆ ಹೀಗೆ ಚಿತ್ರರಂಗದ ಎಲ್ಲಾ ಪ್ರಕಾರಗಳಲ್ಲೂ ಕೆಲಸ ಮಾಡಿದ್ದಾರೆ. ಇವರ ಸಿನಿಮಾ ಅಂದರೆ ಅದರಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಇವರ ಸಿನಿಮಾದಲ್ಲಿ ಪ್ರಮುಖವಾಗಿ ಕಂಡು ಬರುವ ಅಂಶ ಅಂದರೆ ಮನಸೂರೆ ಮಾಡುವ ಸಂಗೀತ.
ರಂಗು ರಂಗಿನ ಸೆಟ್ಟುಗಳು, ಒಂದೊಂದು ಫ್ರೇಮಿನಲ್ಲಿ ಒಂದೊಂದು ಸ್ಪೆಷಾಲಿಟಿ ತರುವ ಕ್ರೀಯಾತ್ಮಕತೆ, ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನವನ್ನು ಬಳಸುವ ಶೈಲಿ ಎಲ್ಲವೂ ಸ್ಪೆಷಲ್. ಇನ್ನು ರವಿಚಂದ್ರನ್ ಅಂದರೆ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಅಭಿಮಾನಿಗಳಲ್ಲಿ ಮಹಿಳಾ ಅಭಿಮಾನಿಗಳೆ ಹೆಚ್ಚು, ನೇರ ನುಡಿ, ನೇರ ಮಾತು, ನೇರ ವ್ಯಕ್ತಿತ್ವದ ರವಿಚಂದ್ರನ್ ಅವರು ಕೇವಲ ಕನ್ನಡದ ನಟಿಯರ ಜೊತೆ ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದು ಅವರ ಜೊತೆ ನಟಿಸಿದ್ದಾರೆ. ಇಂತಹ ಪ್ರಯತ್ನ ಮೊದಲ ಬಾರಿ ಮಾಡಿದವರೇ ರವಿಚಂದ್ರನ್.
ಹೀಗೆ ಎಂತೆಥಹ ನಟಿಯರ ಜೊತೆ ನಟಿಸಿದ್ದರೂ ರವಿಚಂದ್ರನ್ ಅವರಿಗೆ ಮಾತ್ರ ಈ ಒಬ್ಬ ನಟಿ ಅಂದರೆ ಮಾತ್ರ ತುಂಬಾ ಇಷ್ಟ. ಅವರು ಬೇರಾರೂ ಅಲ್ಲ ಪ್ರಿಯಾಂಕ ಉಪೇಂದ್ರ. ಹೌದು, ಬೆಂಗಾಳಿ ನಟಿ ಪ್ರಿಯಾಂಕ ಅವರು ಮೊತ್ತ ಮೊದಲು ಉಪೇಂದ್ರ ಅವರ ಜೊತೆ ಹೆಚ್ 2 ಓ ಚಿತ್ರದಲ್ಲಿ ನಟಿಸಿದ್ದರು. ನಂತರ ರವಿಚಂದ್ರನ್ ಅವರ ಜೊತೆ ಮಲ್ಲ ಸಿನಿಮಾದಲ್ಲಿ ನಾಯಕಿ ಆಗಿದ್ದರು. ಈ ಚಿತ್ರದಲ್ಲಿ ರವಿಚಂದ್ರನ್ ಅವರು ಎರಡು ಪಾತ್ರ ಮಾಡಿದ್ದರು, ಅದೇ ರ್ತಿ ಪ್ರಿಯಾಂಕ ಅವರು ತಾಯಿಯಾಗಿ, ನೆಗೆಟಿವ್ ಪಾತ್ರಧಾರಿಯಾಗಿ, ಅದೇ ರೀತಿ ಸಾಫ್ಟ್ ನೇಚರ್ ಹುಡುಗಿಯಾಗಿ ಅಭಿನಯಿಸಿ.
ಆ ಸಿನಿಮಾವನ್ನು ಹಿಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಿನಿಮಾ ನಂತರ ರವಿಚಂದ್ರನ್ ಅವರ ಲೈಫೇ ಚೇಂಚ್ ಆಗಿಬಿಟ್ಟಿತ್ತು. ಹೀಗೆ ಪ್ರಿಯಾಂಕ ಮೇಲೆ ರವಿಚಂದ್ರನ್ ಇಟ್ಟಿದ್ದ ನಂಬಿಕೆ ಹುಸಿಯಾಗದೆ ಸೂಪರ್ ಡೂಪರ್ ಸಿನಿಮಾವಾಗಿ ಮಲ್ಲ ಹೊರ ಹೊಮ್ಮುತ್ತದೆ. ಇದೇ ಕಾರಣದಿಂದ ರವಿಚಂದ್ರನ್ ಅವರಿಗೆ ಪ್ರಿಯಾಂಕ ಉಪೇಂದ್ರ ಮೇಲೆ ಎಲ್ಲಿಲ್ಲದ್ದ ಅಭಿಮಾನ ಹಾಗೂ ಪ್ರೀತಿ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.