ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕೂಡ ಇತ್ತೀಚಿಗಷ್ಟೇ ಮುಗಿದಿದೆ. ಈ ಸಂದರ್ಭದಲ್ಲಿ ಸೃಜನ್ ಲೋಕೇಶ್ ಅವರು ಅತಿಥಿಯಾಗಿ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕೆಲವು ಫನ್ನಿ ಪ್ರಶ್ನೆಗಳನ್ನು ಕೇಳಿದ್ದಾರೆ ಇದಕ್ಕೆ ರವಿ ಮಾಮಾ ಕೊಟ್ಟ ಉತ್ತರವು ಫನ್ನಿ ಆಗಿಯೇ ಇತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್ ಎಷ್ಟು ದೊಡ್ಡ ಸ್ಟಾರ್ ನಟ ಹಾಗೂ ನಿರ್ದೇಶಕ ಜೊತೆಗೆ ನಿರ್ಮಾಪಕ ಅನ್ನೋದು ಎಲ್ಲರಿಗೂ ಗೊತ್ತು. ಸಿನಿಮಾದಲ್ಲಿ ಒಂದು ಕಲರ್ಫುಲ್ ಲೈಫ್ ಅನ್ನು ಎಲ್ಲರಿಗೂ ಪರಿಚಯ ಮಾಡಿದವರು ಕ್ರೇಜಿಸ್ಟಾರ್ ರವಿಚಂದ್ರನ್. ಅವರ ಕೆಲವು ಸಿನಿಮಾಗಳನ್ನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಕೆಲವು ಎವರ್ ಗ್ರೀನ್ ಸಾಂಗ್ ಗಳನ್ನು ಕೂಡ ರವಿಚಂದ್ರನ್ ನೀಡಿದ್ದಾರೆ.
ಇನ್ನು ರವಿಚಂದ್ರನ್ ಅವರು ಟಿವಿ ವಾಹಿನಿಗಳಲ್ಲಿ ಹಲವಾರು ಬಾರಿ ಜಡ್ಜ್ ಆಗಿ ಕಾಣಿಸಿಕೊಂಡವರು. ಹಾಗಾಗಿ ವಾಹಿನಿಗೂ ರವಿಚಂದ್ರನ್ ಅವರಿಗೂ ನಂಟು ಬಹಳ ಚೆನ್ನಾಗಿದೆ. ಇತ್ತೀಚಿಗೆ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯ ಮೇಲೆ ರವಿಚಂದ್ರನ್ ಅವರನ್ನು ಕೂರಿಸಿ ಸೃಜನ್ ಲೋಕೇಶ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಅವರು ಕೇಳಿದ ಪ್ರಶ್ನೆಗೆ ರವಿಮಾಮ ಉತ್ತರಿಸಿದ್ದು ಹೇಗಿತ್ತು ಗೊತ್ತಾ ಹೇಳ್ತೀವಿ ಮುಂದೆ ಓದಿ.
“ನಿಮಗೆ ಜೀವನದಲ್ಲಿ ಬಂದಿರುವ ಬೆಸ್ಟ್ ಕಾಮೆಂಟ್ ಯಾವುದು” ಎಂದು ಸೃಜನ್ ಲೋಕೇಶ್ ಒಂದು ಪ್ರಶ್ನೆಯನ್ನು ಕೇಳುತ್ತಾರೆ. “ಮಲ್ಲ ಸಿನಿಮಾದ ಸಕ್ಸಸ್ ನಂತರ ಅದರ “ಬೆಸ್ಟ್ ಸೆ-ಕ್ಸೇ-ಶ-ನಲ್ ಪಿಲ್ಮ್”. ಇಂದು ಕಮೆಂಟ್ ಮಾಡಿದ್ದರಂತೆ ಸೃಜನ್ ಲೋಕೇಶ್ ಸೆನ್ಸೇಶನ್ ಸಿನಿಮಾನ ಎಂದು ಮತ್ತೆ ಪ್ರಶ್ನೆ ಮಾಡುತ್ತಾರೆ. ಸೆನ್ಸೇಶನ್ ಅಲ್ಲ ಸೆ-ಕ್ಸೆ-ಷನ್ ಎಂದು ಮತ್ತೆ ರವಿಚಂದ್ರನ್ ಹೇಳುತ್ತಾರೆ.
ಮಲ್ಲ ಸಿನಿಮಾದಲ್ಲಿ ಗ್ಲಾಮರ್ ಗೆ ಹೆಚ್ಚು ಮಹತ್ವ ನೀಡಲಾಗಿತ್ತು. ಇದರಲ್ಲಿ ಪ್ರಿಯಾಂಕ ಉಪೇಂದ್ರ ಅವರು ಬಹಳ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಬಹುಶಃ ಈ ಕಾರಣಕ್ಕಾಗಿ ಈ ರೀತಿಯ ಕಮೆಂಟ್ ಬಂದಿರಬಹುದು. ಥ್ಯಾಂಕ್ಸ್ ಫಾರ್ ದಿ ವ್ಯಕ್ಸೇಶನ್ ಕಮೆಂಟ್ ಅಂತ ಮತ್ತೆ ರವಿಚಂದ್ರನ್ ಅವರು ರಿಪ್ಲೈ ಮಾಡಿದ್ದಾರಂತೆ.
ಇನ್ನು ಸೃಜನ್ ಲೋಕೇಶ ಕೇಳಿದ ಎರಡನೇ ಪ್ರಶ್ನೆ “ನೀವು ನಿಮ್ಮ ಬಯೋಗ್ರಫಿ ಬರೆದರೆ ಅದಕ್ಕೆ ಏನೆಂದು ಹೆಸರು ಇಡುತ್ತೀರಿ?” ಅದಕ್ಕೆ ರವಿಚಂದ್ರನ್ ಉತ್ತರಿಸಿದ್ದು ಏನು ಗೊತ್ತಾ “ಬಯ್ಯೋಗ್ರಾಫಿ” ಎಂದೆ ಹೆಸರು ಇಡುತ್ತೇನೆ. ನನ್ನ ಬಗ್ಗೆ ಬೇರೆ ಯಾರು ಹೇಳಬೇಕಾಗಿಲ್ಲ ನಾನು ಏನು ನಾನು ಎಲ್ಲಿ ತಪ್ಪು ಮಾಡುತ್ತೇನೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ನಾನು ತಪ್ಪು ಮಾಡಿದರೆ ಆ ತಪ್ಪನ್ನು ಕೂಡ ಅಷ್ಟೇ ಕಾನ್ಫಿಡೆಂಟ್ ಆಗಿ ಮಾಡುತ್ತೇನೆ.
ನನಗೆ ಯಾರು ಬೇರೆಯವರು ಹೇಳಬೇಕಾಗಿಲ್ಲ ನನಗೆ ನನ್ನ ಬಗ್ಗೆ ಗೊತ್ತು. ನಾನು ಯಾವತ್ತೂ ಹಾಗೆ ಬದುಕಿದ್ದು. ಹಾಗೇ ಬದುಕುತ್ತೇನೆ. ನನ್ನನ್ನು ನಾನೇ ಬಯ್ಕೊಂಡು ಬಯ್ಯೋಗ್ರಫಿ ಬರೆದುಕೊಳ್ಳುತ್ತೇನೆ. ಎಂದಿದ್ದಾರೆ. ಇದು ತಮಾಷೆಯಾಗಿಯೇ ಇದ್ದರೂ ನಿಜಕ್ಕೂ ರವಿಚಂದ್ರನ್ ಮುಂದೊಂದು ದಿನ ತಮ್ಮ ಆಟೋಬಯೋಗ್ರಫಿ ಬರೆದರೂ ಆಶ್ಚರ್ಯವೇನೂ ಇಲ್ಲ ಬಿಡಿ.