PhotoGrid Site 1678352904344

ಪದೇ ಪದೇ ಜಾರಿ ಹೋಗುತ್ತಿದ್ದ ಡ್ರೆಸ್ ಮೇಲೆ ಕೆಳಗೆ ಎಳೆದು ಸರಿ ಮಾಡಿಕೊಳ್ಳುವುದರಲ್ಲೇ ಮುಜುಗರಗೊಂಡ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ ಆಯ್ತು ಸಿಕ್ಕಾಪಟ್ಟೆ ವೈರಲ್!!

ಸುದ್ದಿ

ಇತ್ತೀಚಿಗೆ ನಟಿ ರಶ್ಮಿಕ ಮಂದಣ್ಣ ಅವರ ಬೇಡಿಕೆ ಹೆಚ್ಚಾಗಿದೆ. ಕೇವಲ ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ ನಲ್ಲಿಯೂ ಕೂಡ ರಶ್ಮಿಕ ಅವರ ಕಾಲ್ ಶೀಟ್ ಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದಾರೆ. ಅವರ ಚಾರ್ಮ್ ಕೂಡ ಹೆಚ್ಚಾಗಿದೆ. ಬಹಳ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ರಶ್ಮಿಕ ಮಂದಣ್ಣ. ಸಿನಿಮಾ ರಂಗದಲ್ಲಿ ಹೆಚ್ಚು ಖ್ಯಾತಿಗಳಿಸಿರುವ ರಶ್ಮಿಕ ಮಂದಣ್ಣ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕಲಾವಿದರಲ್ಲಿ ಮುಂಚೂಣಿಯಲ್ಲಿದ್ದಾರೆ.

ರಶ್ಮಿಕ ಮಂದಣ್ಣ ಅದೆಷ್ಟೇ ಸಿನಿಮಾದಲ್ಲಿ ಅಭಿನಯಿಸಿದ್ದರು ಅವರ ಬಗ್ಗೆ ಟ್ರೋಲ್ ಮಾಡುವುದನ್ನು ಮಾತ್ರ ಜನ ಬಿಡಲ್ಲ. ಅದೇ ರೀತಿಯಾಗಿ ಅವರ ಬಗ್ಗೆ ಎಷ್ಟೇ ಟ್ರೋಲ್ ಮಾಡಿದರು ಸಿನಿಮಾಗಳಲ್ಲಿ ಅವರಿಗೆ ಸಿಗುತ್ತಿರುವ ಅವಕಾಶಗಳಂತೂ ಕಡಿಮೆ ಆಗಿಲ್ಲ. ರಶ್ಮಿಕ ಮಂದಣ್ಣ ಅವರು ಆಗಾಗ ಕೆಲವು ಹೀರೋಗಳ ಜೊತೆಗೆ ಕಾಣಿಸಿಕೊಳ್ಳುತ್ತಾರೆ ಅವರ ಹೆಸರುಗಳ ಜೊತೆಗೆ ತಳಕು ಹಾಕಿಕೊಳ್ಳುತ್ತದೆ.

ಈಗಾಗಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರಿಬ್ಬರ ನಡುವೆ ಪ್ರೀತಿ ಇದೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ರಶ್ಮಿಕ ಮಾತ್ರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ.ರಶ್ಮಿಕ ಮಂದಣ್ಣ ಅವರಿಗೆ ಇತ್ತೀಚಿಗೆ ಝೀ ಸಿನಿ ಅವಾರ್ಡ್ 2023ರಲ್ಲಿ ಉತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಬಂದಿರುವ ಪರಿ ಸಿನಿ ಪ್ರಿಯರನ್ನು ಮಂತ್ರಮುಗ್ತರನ್ನಾಗಿಸಿತ್ತು.

ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಲೇಸ್ ಗೌನ್ ಧರಿಸಿದ್ದರು. ಸ್ಲೀವ್ಸ್ ಲೇಸ್ ಶಾರ್ಟ್ ಗೌನ್ ಹಾಗೂ ತಿಳಿಯಾದ ಮೇಕಪ್ ರಶ್ಮಿಕಾ ಮಂದಣ್ಣ ಅವರ ಚೆಲುವನ್ನು ಹೆಚ್ಚಿಸಿತ್ತು. ಇನ್ನು ಹೈ ಹೀಲ್ಡ್ ಧರಿಸಿದ ರಶ್ಮಿಕ ನಡೆಯುವುದಕ್ಕೆ ಕೊಂಚ ಕಷ್ಟಪಡುತ್ತಿರುವಂತೆ ಕಾಣಿಸಿತ್ತು. ಏಕೆಂದರೆ ಗೌನ ಹಿಂದುಗಡೆ ಉದ್ದವಾದ ಟ್ರೈಲ್ ಅಳವಡಿಸಲಾಗಿತ್ತು. ಕ್ಯಾಮರಾದ ಮುಂದೆ ವಿವಿಧ ಫೋಸ್ ನೀಡಿರುವ ರಶ್ಮಿಕ ಮಂದಣ್ಣ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ವರ್ಷ ಸೂಪರ್ ಹಿಟ್ ಸಿನಿಮಾ ಎನಿಸಿದ ಪುಷ್ಪಾದ ಶ್ರೀವಲ್ಲಿ ಪಾತ್ರ ಪುಷ್ಪಾ-2 ಸಿನಿಮಾದಲ್ಲಿಯೂ ಮುಂದುವರೆಯಲಿದೆ. ಈ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ ಎನ್ನುವ ಮಾಹಿತಿ ಇದೆ. ಬಾಲಿವುಡ್ ನಲ್ಲಿ ಬಿಗ್ ಬಿ ಜೊತೆ ಅಭಿನಯಿಸಿರುವ ರಶ್ಮಿಕ ಮಂದಣ್ಣ ಅವರು ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಇನ್ನಷ್ಟು ಪ್ರಾಜೆಕ್ಟ್ ಮಾಡುತ್ತಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಆಗಾಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅವರು ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿ ಮತ್ತೆ ಕನ್ನಡದತ್ತ ಮುಖ ಮಾಡಿಲ್ಲ. ಆದರೆ ರಶ್ಮಿಕಾ ಇತ್ತೀಚಿಗೆ ಸಂದರ್ಶನ ಒಂದರಲ್ಲಿ, ರಕ್ಷಿತ್ ಶೆಟ್ಟಿ ಹಾಗೂ ರಿಶಭ್ ಶೆಟ್ಟಿ ಬಗ್ಗೆ ಮಾತನಾಡಿದ್ದು, ಅವರೇ ನನಗೆ ನಟನೆಗೆ ಅಡಿಪಾಯ ಹಾಕಿದ್ದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಶ್ಮಿಕಾ ಬಗ್ಗೆ ಕನ್ನಡಿಗರ ಮನಸ್ಸಿನಲ್ಲಿಯೂ ಸಾರ್ಫ್ ಕಾರ್ನರ್ ಮೂಡಿರಬಹುದು ಎನಂತೀರಾ.

Leave a Reply

Your email address will not be published. Required fields are marked *